ತುಳುನಾಡಿನ ನಮ್ಮ ಸಮಾಜದ ವೀರಪುರುಷರ ಆದರ್ಶ, ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಚಿಂತನೆಗಳನ್ನು ಅಳವಡಿಸಿಕೊಂಡು ಸನ್ಮಾನ್ಯ ಜಯ ಸಿ ಸುವರ್ಣ ರವರ ಮುಂದಾಳತ್ವದಲ್ಲಿ 275 ಬಿಲ್ಲವ ಸಂಘಗಳ ಸದಸ್ಯತ್ವದೊಂದಿಗೆ ಸ್ಥಾಪಿತವಾದ ಮಹಾಮಂಡಲವು ಎಲ್ಲರ ಸಹಕಾರದಿಂದ ಸಾಕಷ್ಟು ಯಶಸ್ಸನ್ನು ಸಾಧಿಸಿ 25 ವರ್ಷಗಳನ್ನು ಪೂರೈಸಿದೆ. ಸಮಾಜದ ಅಭಿವೃದ್ಧಿಯ ಚಿಂತನೆಗಳನ್ನು ಮೈಗೂಡಿಸಿಕೊಂಡು ಮಹಾಮಂಡಲದ ಚುಕ್ಕಾಣಿಯನ್ನು ಹಿಡಿದಿರುವ ಡಾ| ರಾಜಶೇಖರ್ ಕೋಟ್ಯಾನ್ ಇವರ ಸಾರತ್ಯದಲ್ಲಿ 10-03-2024 ರಂದು ಮುಲ್ಕಿಯಲ್ಲಿ ಬೆಳ್ಳಿಹಬ್ಬ ಸಮಾರಂಭವು ನಡೆಯಲಿದೆ. ಮಾಜಿ ಕೇಂದ್ರ ಸಚಿವ ಬಿ ಜನಾರ್ದನ ಪೂಜಾರಿಯವರಿಂದ ಉದ್ಘಾಟನೆಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಹೊರ ರಾಜ್ಯ, ಹೊರ ದೇಶಗಳಲ್ಲಿ ಸಂಘಟಣೆಯಲ್ಲಿ ತೊಡಗಿರುವ ಬಿಲ್ಲವ ಸಂಘಗಳಿಗೆ ಪ್ರಶಸ್ತಿ ಪ್ರದಾನ, ಸಮಾಜದ ಆಯ್ದ ಚಲನಚಿತ್ರ ಕಲಾಕಾರರಿಗೆ ಪ್ರಶಸ್ತಿ ಪ್ರದಾನ, ಸ್ಥಾಪಕ ಸದಸ್ಯರಿಗೆ ಸನ್ಮಾನ, ಆಯ್ದ ವಿಶೇಷ ಚೇತನ ಮಕ್ಕಳ ಅಭಿವೃದ್ಧಿ ಸಂಸ್ಥೆಗಳಿಗೆ ಸಹಾಯ ಧನ, ಸಮಾಜದ ಬಡವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕದ ರಾಜ್ಯ ಸಚಿವರು, ಶಾಸಕರು, ಮಾಜಿ ಶಾಸಕರು ಸಮಾಜದ ಸ್ವಾಮೀಜಿಯವರು ಹಾಗೂ ಇತರ ಗಣ್ಯ ವ್ಯಕ್ತಿಗಳು ಮತ್ತು ದೇಶದ ಮೂಲೆ ಮೂಲೆಗಳಿಂದ ಸುಮಾರು 30,000 ಕ್ಕೂ ಮೇಲ್ಪಟ್ಟು ಸಮಾಜದ ಬಂಧುಗಳು ಸೇರುವರು.