Saturday, January 18, 2025
Homeರಾಷ್ಟ್ರೀಯ9 ತಿಂಗಳ ಹೆಣ್ಣು ಮಗುವಿಗೆ ಆಸಿಡ್ ಕುಡಿಸಿದ ಪಾಪಿ ತಂದೆ..!

9 ತಿಂಗಳ ಹೆಣ್ಣು ಮಗುವಿಗೆ ಆಸಿಡ್ ಕುಡಿಸಿದ ಪಾಪಿ ತಂದೆ..!

ಆಂಧ್ರ ಪ್ರದೇಶ : ದೇಶದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯವೊಂದು ಬೆಳಕಿಗೆ ಬಂದಿದ್ದು, ವ್ಯಕ್ತಿಯೊಬ್ಬ 9 ತಿಂಗಳ ಮಗುವಿಗೆ ಆಸಿಡ್ ಕುಡಿಸಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಆಂಧ್ರಪ್ರದೇಶದ ಒಂಗೋಲು ಗ್ರಾಮಾಂತರದ ಮಂಡಲದ ಕರವಾಡಿ ಬಳಿಯ ಸೀಗಡಿ ಹೊಂಡದಲ್ಲಿ ಕೆಲಸ ಮಾಡಲು ಮುವ್ವಲ ಭಾಸ್ಕರ್ ರಾವ್ ಮತ್ತು ಲಕ್ಷ್ಮಿ ಪಾಡೇರು ಕಡೆಯಿಂದ ಬಂದಿದ್ದರು.
ದಂಪತಿಗೆ 9 ತಿಂಗಳ ಮಗುವಿದೆ.

ಪಾಪಿ ತಂದೆ ಪದೇ ಪದೇ ಹೆಂಡತಿ ಶೀಲ ಶಂಕಿಸಿ ಹಲ್ಲೆ ಮಾಡುತ್ತಿದ್ದ. ಬಳಿಕ ಈ ಮಗು ನನಗೆ ಹುಟ್ಟಿಲ್ಲ ಎಂದು ಶಂಕಿಸಿ 9 ತಿಂಗಳ ಹೆಣ್ಣು ಮಗು ವೈಷ್ಣವಿಗೆ ಆಯಸಿಡ್ ಕುಡಿಸಿದ್ದಾರೆ. ಮಗು ಪ್ರಜ್ಞೆ ತಪ್ಪಿದ್ದನ್ನು ಗಮನಿಸಿದ ತಾಯಿ ಜೋರಾಗಿ ಕಿರುಚಿದಾಗ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ. ಸಂತ್ರಸ್ತೆಯ ತಾಯಿಗೆ ಸತ್ಯ ತಿಳಿದು ಸ್ಥಳೀಯರ ನೆರವಿನೊಂದಿಗೆ 108 ವಾಹನದಲ್ಲಿ ಮಗುವನ್ನು ಒಂಗೋಲು ರಿಮ್ಸ್ ಆಸ್ಪತ್ರೆಗೆ ಸಾಗಿಸಲಾಯಿತು. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

RELATED ARTICLES
- Advertisment -
Google search engine

Most Popular