ಬೆಂಗಳೂರು: ತಾನು ಇಷ್ಟಪಟ್ಟಾಕೆ ತನಗೆ ಎಂದಿಗೂ ಸಿಗಲಾರಳು ಎಂಬ ಆಕ್ರೋಶದಿಂದ ಆಕೆಯ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ವರದಿಯಾಗಿದೆ. ಏ 11ರಂದು ಘಟನೆ ನಡೆದಿದ್ದು, ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಆರೋಪಿಯನ್ನು ಈಗ ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು 26 ವರ್ಷದ ಅರ್ಬಾಜ್ ಎಂದು ಗುರುತಿಸಲಾಗಿದೆ. ಅರ್ಬಾಜ್ ವಿವಾಹಿತ ಮಹಿಳೆ ಅರ್ಬಿನಾ ತಾಜ್ ಹಿಂದೆ ಬಿದ್ದಿದ್ದ. ಪತಿಯನ್ನು ತೊರೆದು ತನ್ನನ್ನು ವಿವಾಹವಾಗುವಂತೆ ಪೀಡಿಸಲು ಆರಂಭಿಸಿದ್ದಾನೆ. ಈ ವಿಚಾರವಾಗಿ ಅರ್ಬಿನಾ ತಾಜ್ ಪತಿ ಸೈಯದ್ ಅಜಂ ಮತ್ತು ಅರ್ಬಾಜ್ ನಡುವೆ ಜಗಳವೂ ನಡೆದಿತ್ತು ಎನ್ನಲಾಗಿದೆ. ಅರ್ಬಿನಾ ತಾಜ್ ನೀಡಿದ್ದ ದೂರಿನ ಆಧಾರದಲ್ಲಿ ಅರ್ಬಾಜ್ ಬಂಧನವಾಗಿದೆ. ಅರ್ಬಿನಾ ತಾಜ್ ಪತಿ ಹಾಗೂ ತನ್ನ ನಾಲ್ವರು ಮಕ್ಕಳೊಂದಿಗೆ ಸಾರಾಯಿ ಪಾಳ್ಯದ ಮಸೀದಿ ಫಾತಿಮಾ ಲೇಔಟ್ ನಲ್ಲಿ ವಾಸವಿದ್ದಾರೆ.