ಶಿವತಿಕೆರೆ, ಶ್ರೀ ಉಮಾಮಹೇಶ್ವರ ದೇವಸ್ಥಾನ ಹಿರಿಯಂಗಡಿ ಕಾರ್ಕಳ, ಶ್ರೀ ಕ್ಷೇತ್ರ ದಲ್ಲಿ ದಿನಾಂಕ 1/12/2024 ರಂದು ಭಾನುವಾರ ವರ್ಷಪ್ರತಿ ಜರಗುವ ಲಕ್ಷ ದೀಪೋತ್ಸವ ವು ಎಡಪದವು ಶ್ರೀ ಮುರಳೀಧರ ತಂತ್ರಿ ಗಳ ನೇತೃತ್ವ ದಲ್ಲಿ ವಿಜೃಂಭಣೆ ಯಿಂದ ಜರಗಿತು. ಈ ಸಂದರ್ಭದಲ್ಲಿ ಶ್ರೀ ಮುರಳೀಧರ ತಂತ್ರಿ ಎಡಪದವು ಹಾಗು ರಾಜೇಂದ್ರ ಭಟ್ ಅರ್ಚಕರು, ಆಡಳಿತ ಮೊಕ್ತೇಸ ರ ಚಂದ್ರ ಶೇಖರ್ ವಿ. ಶೆಟ್ಟಿ, ಸುಂದರ ದೇವಾಡಿಗ ಗೌರವ ಅಧ್ಯಕ್ಷರು, ಮೊಕ್ತೇಸರರು ಸುರೇಂದ್ರ ಶೆಟ್ಟಿ ಸಂಜೀವ ದೇವಾಡಿಗ, ಸುದರ್ಶನ್ ಭಂಡಾರಿ, ನಾಗೇಶ್ ದೇವಾಡಿಗ, ಸತೀಶ್ ದೇವಾಡಿಗ, ಕೆ. ಬಿ. ಗುರುಪ್ರಸಾದ್ ರಾವ್, ಸುರೇಂದ್ರ ದೇವಾಡಿಗ ಅಧ್ಯಕ್ಷರು, ಕಾರ್ಯದರ್ಶಿ ಚೆನ್ನಕೇಶವ ಹಾಗು ಸೇವಾ ಸಮಿತಿ ಯ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಹಾಗು ಉರ ಪರ ಊರ ಭಕ್ತಾದಿ ಗಳು ಸೇರಿದ್ದರು. ಕ್ಷೇತ್ರ ದಲ್ಲಿ ಸಾರ್ವಜನಿಕ ಮಹಾ ಅನ್ನ ಸಂತರ್ಪಣೆ ನಡೆಯಿತು. ರಾತ್ರಿ ಬಲಿ, ಉತ್ಸವ, ವಾದ್ಯ ಬ್ಯಾಂಡ್ ಸೆಟ್ ಚೆಂಡೆ ವಿವಿಧ ವಾದ್ಯ ಗಳು ಭಜನಾ ಸೇವೆ, ಸುಡು ಮದ್ದು ಪ್ರದರ್ಶನ, ಕೆರೆ ದೀಪೋತ್ಸವ ಇತ್ಯಾದಿ ಇನ್ನಿತರ ಧಾರ್ಮಿಕ ಕಾರ್ಯಕ್ರಮ ಗಳು ಶ್ರೀ ಉಮಾಮಹೇಶ್ವರ ದೇವರ ಸನ್ನಿದಾನ ದಲ್ಲಿವಿಜೃಂಭಣೆ ಯಿಂದ ನಡೆಯಿತು.