ಕಿನ್ನಿಗೋಳಿ: ತಾನು ಬದುಕರೊಂದಿಗೆ ಮತ್ತೊಬ್ಬರಿಗೆ ಬದುಕು ಕಲ್ಪಿಸುವ ವ್ಯವಸ್ಥೆ ಸಮಾಜದಲ್ಲಿ ಇರಬೇಕು, ಬ್ಯಾಂಕ್ ಕೇವಲ ವ್ಯವಹಾರಿಕ ಕ್ಷೇತ್ರವಾಗದೆ ಸಾಮಾಜಿಕ ಕಾರ್ಯದಲ್ಲಿ ತೊಡಗಿ, ಬಡ ಕುಟುಂಬಕ್ಕೆ ಬದುಕು ಕಲ್ಪಿಸಿ ಕೊಟ್ಟಿದೆ ಎಂದು ಕಟೀಲು ದೇವಳದ ಪ್ರಧಾನ ಅರ್ಚಕ ಲಕ್ಷೀನಾರಾಯಣ ಆಸ್ರಣ್ಣ ಹೇಳಿದರು ಅವರು ಕಿನ್ನಿಗೋಳಿಯ ಉಲ್ಲಂಜೆಯ ವೀಣಾ ಆಚಾರ್ಯ ರವರಿಗೆ ಎಸ್ ಕೆ ಗೋಲ್ಡ್ ಸ್ಮಿತ್ ಇಂಡಸ್ಟ್ರೀಯಲ್ ಕೊ ಅಪರೇಟಿವ್ ಸೊಸೈಟಿ ಲಿ ಇದರ ವಜ್ರಮಹೋತ್ಸವದ ಪ್ರಯುಕ್ತ ಗೃಹ ನಿರ್ಮಾಣ ಯೋಜನೆಯಡಿಯಲ್ಲಿ ನೂತನ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮನೆ ಹಸ್ತಾಂತರಗೊಳಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಬಾಬು ಆಚಾರ್ಯರವರು ಅಂದಿನ ದಿನಗಳಲ್ಲಿ ಬ್ಯಾಂಕ್ ಸ್ಥಾಪಿಸಿ ದೊಡ್ಡ ಸಾಧನೆ ಮಾಡಿದ್ದಾರೆ ಆ ಕಾರಣದಿಂದ ಇಂದು ಪ್ರತಿಷ್ಠಿತ ಬ್ಯಾಂಕ್ ಆಗಿ ಮುಂದುವರಿಯುತ್ತಿದೆ, ಸಂಸ್ಥೆ 60 ವರ್ಷ ಆಚರಣೆ ಸಂದರ್ಭ 60 ಸಮಾಜಮುಖಿ ಕಾರ್ಯಗಳಿಂದ ಮುಂದುವರಿಯುತ್ತಿರುವುದು ಅಭಿನಂದನೀಯ ಎಂದರು.
ಈ ಸಂದರ್ಭ ಕೆ ಭುವನಾಭಿರಾಮ ಉಡುಪ, ವಿಶ್ವ ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಜಗದೀಶ್ ಆಚಾರ್ಯ ಸುರಗಿರಿ, ಸಂಸ್ಥೆಯ ನಿರ್ದೇಶಕರಾದ ವೈ ವಿ ವಿಶ್ವಜ್ಜಮೂರ್ತಿ, ವಿ ಜಯ ಆಚಾರ್, ಕೆ ಶಶಿಕಾಂತ ಆಚಾರ್ಯ, , ಮಲ್ಲಪ್ಪ ಎನ್ ಪತ್ತಾರ್, ರೋಹಿಣಿ ಎಂ ಪಿ, ಜ್ಯೋತಿ ಎಂ.ವಿ, ರಮೇಶ್ ರಾವ್ ಯು, ಕೆ ಪ್ರಕಾಶ್ ಆಚಾರ್ಯ, ಮಂಜುನಾಥ ಆಚಾರ್ಯ, ಚಂದ್ರಶೇಖರ್ ಎ.ಎಸ್, ಕಿನ್ನಿಗೋಳಿ ಶಾಖಾಧಿಕಾರಿ ವನಮಾಲ ಮತ್ತಿತರರು ಉಪಸ್ಥಿತರಿದ್ದರು. ಗುತ್ತಿಗೆದಾರ ಜನಾರಗದನ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಪಿ ಉಪೇಂದ್ರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಪ್ರಧಾನ ವ್ಯವವಸ್ಥಾಪಕ ಯಜ್ಜೇಶ್ವರ ಪ್ರಸ್ತಾವನೆಗೈದರು, ಸಂಸ್ಥೆಯ ಉಪಾಧ್ಯಕ್ಷ ಆನಂದ ಆಚಾರ್ಯ ಸ್ವಾಗತಿಸಿ ನಿರ್ದೇಶಕರಾದ ಕೆ ಪ್ರಕಾಶ್ ಆಚಾರ್ಯ ಧನ್ಯವಾದ ಸಮರ್ಪಿಸಿದರು ಶ್ರೀಕಾಂತ್ ಆಚಾರ್ಯ ನಿರೂಪಿಸಿದರು.
