ಕಾಸರಗೋಡು: ತನ್ನ ಹೊಸ ಬ್ರಾಂಡ್‌ಗೆ ಹೆಸರು ಸೂಚಿಸಿದವರಿಗೆ ಹೊಸ ಬ್ರಾಂಡ್‌ನ ಮೊದಲ ಕಾರಿನ ಮಾಲೀಕರಾಗುವ ಅವಕಾಶವನ್ನು ಸ್ಕೋಡಾ ಎಸ್‌ಯುವಿ ನೀಡಿತ್ತು. ಈ ಅವಕಾಶವನ್ನು ಬಳಸಿಕೊಂಡ ಕಾಸರಗೋಡು ಮೂಲದ 24 ವರ್ಷದ ಮೊಹಮ್ಮದ್ ಜಿಯಾದ್ ಸೂಚಿಸಿದ ಹೆಸರು ಆಯ್ಕೆಯಾಗಿದೆ. ಮೊಹಮ್ಮದ್ ಜಿಯಾದ್ ʻಕೈಲಾಕ್ʼ ಎಂಬ ಸಂಸ್ಕೃತ ಹೆಸರನ್ನು ಸೂಚಿಸಿ, 2025ರಲ್ಲಿ ಬಿಡುಗಡೆಯಾಗಲಿರುವ ಸ್ಕೋಡಾದ ಹೊಸ ಬ್ರಾಂಡ್‌ನ ಮೊದಲ ಕಾರಿನ ಮಾಲೀಕರಾಗುವ ಅವಕಾಶ ಪಡೆದಿದ್ದಾರೆ. ʻಕೈಲಾಕ್ʼ ಎಂದರೆ ಸಂಸ್ಕೃತದಲ್ಲಿ ಸ್ಫಟಿಕ ಎಂದು ಅರ್ಥ.
ಸ್ಕೋಡಾ ತನ್ನ ಹೊಸ ಕಾರಿಗೆ ಹೆಸರು ಸೂಚಿಸುವುದಕ್ಕೆ ಸ್ಪರ್ಧೆಯೊಂದನ್ನು ಏರ್ಪಡಿಸಿತ್ತು. ಒಬ್ಬರಿಗೆ ಐದು ಹೆಸರು ಸೂಚಿಸುವ ಅವಕಾಶ ನೀಡಿತ್ತು. ಇಂಗ್ಲಿಷ್‌ನ ಕೆ ಅಕ್ಷರದಿಂದ ಆರಂಭಗೊಂಡು, ಕ್ಯು ಅಕ್ಷರದಿಂದ ಕೊನೆಗೊಳ್ಳುವ ಹೆಸರು ಸೂಚಿಸಬೇಕೆಂದು ನಿಯಮವಿತ್ತು.
ಆ ಪ್ರಕಾರ ಸುಮಾರು 2 ಲಕ್ಷ ಮಂದಿ ಹೆಸರು ಸೂಚಿಸುವ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದರ. ಆದರೆ ಕೇರಳ ಮೂಲದ ಜಿಯಾದ್ ಸೂಚಿಸಿದ ಹೆಸರು ಫೈನಲ್ ಆಗಿದೆ. ಸ್ಕೋಡಾ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ಪ್ರಕಟಿಸಿದ್ದು, ಜಿಯಾದ್ ಕಾಸರಗೋಡು ಈ ಸ್ಪರ್ಧೆಯ ವಿಜೇತರಾಗಿದ್ದು, ಹೊಸ ಸ್ಕೋಡಾ ಕೈಲಾಕ್ ಕಾರು ಗೆದ್ದಿದ್ದಾರೆ ಎಂದು ಘೋಷಿಸಿದೆ. ಜಿಯಾದ್ ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದು, ಕಳೆದ ಎರಡೂವರೆ ವರ್ಷದಿಂದ ಕಾಸರಗೋಡಿನ ನಜಾತ್ ಕುರಾನ್ ಅಕಾಡೆಮಿಯಲ್ಲಿ ಕುರಾನ್ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.
ನನಗೆ ಕಾರು ಕ್ರೇಜ್ ಅಷ್ಟೊಂದಿಲ್ಲ. ಮನೆಯವರನ್ನು ಕರೆದೊಯ್ಯಲು ನನಗೆ ಸ್ವಂತ ಕಾರು ಬೇಕಿತ್ತು ಎಂದು ಜಿಯಾದ್ ಹೇಳಿದ್ದಾರೆ. ಸ್ಕೋಡಾ ಕಂಪನಿಯು 2 ಲಕ್ಷ ಜನರು ಸೂಚಿಸಿದ್ದ ಹೆಸರುಗಳಲ್ಲ ಕ್ವಿಕ್, ಕೈಲಾಕ್, ಕೋಸ್ಮಿಕ್, ಕೈರೋಕ್, ಕಾರಿಕ್, ಕಾರ್ಮಿಕ್, ಕ್ಲಿಕ್ ಮತ್ತು ಕಯಾಕ್ ಎಂಬ ಎಂಟು ಹೆಸರಗಳನ್ನು ಅಂತಿಮವಾಗಿ ವೋಟಿಂಗ್‌ಗಾಗಿ ಹಾಕಿತ್ತು. ಇದರಲ್ಲಿ ಕ್ವಿಕ್, ಕೈಲಾಕ್, ಕೋಸ್ಮಿಕ್, ಕ್ಲಿಕ್ ಮತ್ತು ಕಯಾಕ್ ಎಂಬ ಐದು ಹೆಸರು ಆಯ್ಕೆಯಾಗಿತ್ತು. ಇದರಲ್ಲಿ ಜಿಯಾದ್ ಸೂಚಿಸಿರುವ ಸಂಸ್ಕೃತ ಪದ ಕೈಲಾಕ್ ಅಂತಿಮ ಆಯ್ಕೆಗೊಂಡಿದೆ.