ದಾವಣಗೆರೆ-ಡಿಸೆಂಬರ್,
ಉಡುಪಿ ಜಿಲ್ಲೆಯ ಸಾಲಿಗ್ರಾಮದ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದಿಂದ ದಾವಣಗೆರೆ ಜಿಲ್ಲೆಯ ಅತ್ತಿಗೆರೆ ಗ್ರಾಮದ ಬಹುಮುಖ ಪ್ರತಿಭೆ ಯುವ ಕವಯತ್ರಿ ಶ್ರೀಮತಿ ಶೈಲಜಾ ಪ್ರಶಾಂತ್‌ರವರನ್ನು “ಸರಸ್ವತಿ ಸಾಧಕ 2ອ” ರಾಷ್ಟ್ರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ, ಮಹಿಳೆಯರಿಗೆ ಅವರಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ಸದುದ್ದೇಶದಿಂದ “ಶ್ರೀಶೈಲ ಕಲಾಸಾಗರ” ಸಂಸ್ಥೆಯನ್ನು ಸ್ಥಾಪಿಸಿ ಅರಳುವ ಪ್ರತಿಭೆಗಳಿಗೆ ಸೂಕ್ತ, ಮುಕ್ತ ವೇದಿಕೆಗಳನ್ನು ಕಲ್ಪಿಸುವ ವಿಶಾಲವಾದ ಸೇವಾ ಮನೋಭಾವದ ಶೈಲಜಾರವರ ಸಾಧನೆಗಳನ್ನು ಗುರುತಿಸಿ ಈ ಪ್ರಶಸ್ತಿಗೆ ಭಾಜನರಾಗಿದ್ದು, ಕಲಾಕುಂಚ, ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ, ಶ್ರೀಶೈಲ ಕಲಾಸಾಗರ ಟ್ರಸ್ಟ್ ಸೇರಿದಂತೆ ವಿವಿಧ ಸಂಘಟನೆಗಳ ಸರ್ವ ಸದಸ್ಯರು, ಪದಾಧಿಕಾರಿಗಳು ಅಭಿಮಾನದಿಂದ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ನಾಗೇಶ ಸಂಜೀವ ಕಿಣಿ ಪ್ರಕಟಿಸಿದ್ದಾರೆ