ಎಸ್ ಎನ್ ಎಂ ಪಾಲಿಟೆಕ್ನಿಕ್ ಮೂಡಬಿದ್ರೆ ಇದರ ಸಿವಿಲ್ ವಿಭಾಗದ ಅರೈವ ಸಿವಿಲ್ ಕ್ಲಬ್ ನ ವತಿಯಿಂದ ಇಂಜಿನಿಯರ್ಸ್ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣದಲ್ಲಿ ಬೇಕಾದ ಜ್ಞಾನ, ಕೌಶಲ್ಯ, ಆತ್ಮವಿಶ್ವಾಸವನ್ನು ಹೆಚ್ಚಿಸುವ ಸಲುವಾಗಿ ನಿರ್ಮಾಣ್ 2024ನ್ನು ಆಯೋಜಿಸಲಾಯಿತು.
ಡಾ. ಬಸವರಾಜ್ ಮನು ವಿಭಾಗ ಮುಖ್ಯಸ್ಥರು ಸಿವಿಲ್ ಇಂಜಿನಿಯರಿಂಗ್ ಎನ್ ಐ ಟಿ ಕೆ ಸುರತ್ಕಲ್, ಜನಕರಾಜ್ ಸಂಶೋಧನಾರ್ತಿ ಎಂ ಐ ಟಿ ಮಣಿಪಾಲ, ಸಂದೀಪ್ ರಾವ್ ಮಂಗಳೂರು ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಾಂಶುಪಾಲ ಜೆಜೆ ಪಿಂಟೋ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿ ರಾಮ್ ಪ್ರಸಾದ್ , ವಿಭಾಗದ ಹಿರಿಯ ವಿದ್ಯಾರ್ಥಿ ದೇವಿಪ್ರಸಾದ್ ಹೆಗ್ಡೆ, ವಿಭಾಗ ಮುಖ್ಯಸ್ಥರಾದ ಗೋಪಾಲಕೃಷ್ಣ ಕೆ ಎಸ್, ಕ್ಲಬ್ಬಿನ ಸಂಯೋಜಕಿ ಸುಪ್ರಿಯಾ ಎಸ್, ವಿದ್ಯಾರ್ಥಿ ನಾಯಕ ಮನ್ವಿತ್ ಉಪಸ್ಥಿತರಿದ್ದರು. ತ್ಯಾಜ್ಯ ನಿರ್ವಹಣೆ ಹಾಗೂ ಟೋಟಲ್ ಸ್ಟೇಷನ್ ಎಂಬ ಎರಡು ವಿಷಯದ ಕುರಿತು ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಮಂಗಳೂರು ಇವರ ಮುಖಾಂತರ ಅತಿಥಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಮುಂದುವರೆದು ಸಿವಿಲ್ ವಿಭಾಗದ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಸುಪ್ರಿಯಾ ಎಸ್ ನಡೆಸಿಕೊಟ್ಟರೆ , ಕನಸಿನ ಮನೆ ಚಿತ್ರಕಲಾ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳನ್ನು ಉಪನ್ಯಾಸಕ ವೃಂದದವರು ನಡೆಸಿಕೊಟ್ಟರು. ಚಲನಚಿತ್ರ ನಿರ್ದೇಶಕ, ತರಬೇತುದಾರ ಸ್ಮಿತೇಶ್ ಎಸ್ ಬಾರ್ಯಾ ಇವರು ವಿದ್ಯಾರ್ಥಿಗಳ ಜೀವನಕ್ಕೆ ಬೇಕಾಗುವಂತ ಜೀವನ ಮೌಲ್ಯಗಳ ಪ್ರಾಮುಖ್ಯತೆಯನ್ನು ಚಟುವಟಿಕೆಗಳೊಂದಿಗೆ ವಿವರಿಸಿದರು.
ಈ ನಿರ್ಮಾಣ್ ಕಾರ್ಯಕ್ರಮದಲ್ಲಿ ವಿಭಾಗದ ಉಪನ್ಯಾಸಕ ವೃಂದ ವಿದ್ಯಾರ್ಥಿಗಳು ಹಾಜರಿದ್ದರು. ಸಂಪೂರ್ಣ ಕಾರ್ಯಕ್ರಮವನ್ನು ಪವನ್ ನಿರೂಪಿಸಿದರು.
ಎಸ್ ಎನ್ ಮೂಡಬಿದ್ರಿ ಪಾಲಿಟೆಕ್ನಿಕ್ : ನಿರ್ಮಾಣ್ 2024
RELATED ARTICLES