Tuesday, March 18, 2025
Homeಮೂಡುಬಿದಿರೆಎಸ್. ಎನ್. ಮೂಡುಬಿದ್ರಿ ಪಾಲಿಟೆಕ್ನಿಕ್ : ಎನ್. ಎಸ್. ಎಸ್. ವತಿಯಿಂದ ಮೂಡುಬಿದಿರೆ ಗಾಂಧಿ ಪಾರ್ಕ್...

ಎಸ್. ಎನ್. ಮೂಡುಬಿದ್ರಿ ಪಾಲಿಟೆಕ್ನಿಕ್ : ಎನ್. ಎಸ್. ಎಸ್. ವತಿಯಿಂದ ಮೂಡುಬಿದಿರೆ ಗಾಂಧಿ ಪಾರ್ಕ್ ನಲ್ಲಿ ಸ್ವಚ್ಛತಾ ಕಾರ್ಯಕ್ರಮ

ಎಸ್ ಎನ್ . ಮೂಡುಬಿದ್ರಿ ಪಾಲಿಟೆಕ್ನಿಕ್ ಮೂಡುಬಿದಿರೆ ಇಲ್ಲಿನ ಎನ್ ಎಸ್ ಎಸ್ ಘಟಕ ಹಾಗು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮೂಡುಬಿದಿರೆ ವತಿಯಿಂದ ಇಲ್ಲಿನ ಜ್ಯೋತಿನಗರದ ಗಾಂಧಿ ಪಾರ್ಕ್ ನಲ್ಲಿ ದಿನಾಂಕ 9-3-2024 ಶನಿವಾರ ಮದ್ಯಾಹ್ನ 2 ರಿಂದ 3.30ರ ತನಕ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಆಯ್ದ 22 ವಿದ್ಯಾರ್ಥಿಗಳ ತಂಡ ಇಡೀ ಪಾರ್ಕ್ ನ ಕಸ, ಪ್ಲಾಸ್ಟಿಕ್, ಇನ್ನಿತರ ನಿರುಪಯುಕ್ತ ವಸ್ತುಗಳನ್ನು ವಿಂಗಡನೆ ಮಾಡಿ ಗಿಡಗಂಟೆಗಳನ್ನು ಕಡಿದು ಸ್ವಚ್ಚ ಮಾಡಿದರು. ಸುಮಾರು 5 ಗೋಣಿಚೀಲದಲ್ಲಿ ಪ್ಲಾಸ್ಟಿಕ್ ಕಸವನ್ನು ಸಂಗ್ರಹ ಮಾಡಲಾಯಿತು.

ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮೂಡುಬಿದಿರೆ ಇಲ್ಲಿನ ರಾಜೇಂದ್ರ ಪೈ ಇವರು ಉಪಸ್ಥಿತಿ ಇದ್ದು ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ಹಾಗು ಉಪಹಾರದ ವ್ಯವಸ್ಥೆ ಮಾಡಿದರು.
ಪಾಲಿಟೆಕ್ನಿಕ್ ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿಗಳಾದ ರಾಮ್ ಪ್ರಸಾದ್ ಹಾಗು ಗೋಪಾಲಕೃಷ್ಣ ಇವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular