Sunday, July 14, 2024
Homeರಾಜ್ಯಹಾವು ಕಚ್ಚಿದ್ದರೂ ಮುಳ್ಳು ಚುಚ್ಚಿದೆ ಎಂದು ಭಾವಿಸಿ ಮಲಗಿದ್ದ ವ್ಯಕ್ತಿಯ ಸಾವು

ಹಾವು ಕಚ್ಚಿದ್ದರೂ ಮುಳ್ಳು ಚುಚ್ಚಿದೆ ಎಂದು ಭಾವಿಸಿ ಮಲಗಿದ್ದ ವ್ಯಕ್ತಿಯ ಸಾವು

ಚಿಕ್ಕಮಗಳೂರು: ಹಾವು ಕಚ್ಚಿದ್ದರೂ ಮುಳ್ಳು ಚುಚ್ಚಿದೆ ಎಂದು ಭಾವಿಸಿ ರಾತ್ರಿ ಊಟ ಮಾಡಿ ಮಲಗಿದ್ದ ವ್ಯಕ್ತಿ ಬೆಳಗಾಗುವ ಹೊತ್ತಿಗೆ ಸಾವನ್ನಪ್ಪಿದ ಘಟನೆ ನಡೆದಿದೆ. ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಕರಕುಚ್ಚಿ ಗ್ರಾಮದ 48 ವರ್ಷದ ಗಂಗಪ್ಪ ಮೃತ ದುರ್ದೈವಿ. ಗದ್ದೆ ಕೆಲಸಕ್ಕೆ ಹೋಗಿದ್ದ ಗಂಗಪ್ಪಗೆ ಹಾವು ಕಡಿದಿದೆ. ಇದರ ಅರಿವಿಲ್ಲದೆ ಗಂಗಪ್ಪ ಮನೆಗೆ ಬಂದಿದ್ದಾರೆ. ಈ ವೇಳೆ ಕಾಲಿನಲ್ಲಿದ್ದ ಗಾಯದ ಕಲೆಗಳ ಬಗ್ಗೆ ಕೇಳಿದಾಗ ಮುಳ್ಳು ಚುಚ್ಚಿರಬೇಕು ಎಂದಿದ್ದರು. ಬಳಿಕ ಊಟ ಮಾಡಿ ಮಲಗಿದ್ದರು.

ಬೆಳಗ್ಗೆ ಅವರನ್ನು ಎಬ್ಬಿಸಲು ನೋಡಿದಾಗ ಅವರು ಮೃತಪಟ್ಟಿರುವುದು ಗಮನಕ್ಕೆ ಬಂದಿದೆ. ಘಟನೆ ಸಂಬಂಧ ಲಕ್ಕವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular