Sunday, July 14, 2024
Homeರಾಷ್ಟ್ರೀಯಜೀವಂತ ಹಾವು ಕಚ್ಚಿತಿಂದ ವಿಡಿಯೊ ವೈರಲ್!‌ | ಕುಖ್ಯಾತ ಸುಲಿಗೆ ಗ್ಯಾಂಗ್‌ನ ಗಂಗಾಪ್ರಸಾದ್‌ ಜೈಲಿನಿಂದ ಬರುತ್ತಿದ್ದಂತೆಯೇ...

ಜೀವಂತ ಹಾವು ಕಚ್ಚಿತಿಂದ ವಿಡಿಯೊ ವೈರಲ್!‌ | ಕುಖ್ಯಾತ ಸುಲಿಗೆ ಗ್ಯಾಂಗ್‌ನ ಗಂಗಾಪ್ರಸಾದ್‌ ಜೈಲಿನಿಂದ ಬರುತ್ತಿದ್ದಂತೆಯೇ ಇದೆಂಥಾ ಅಟ್ಟಹಾಸ!

ಲಕ್ನೊ: ವ್ಯಕ್ತಿಯೊಬ್ಬ ನದಿಯಲ್ಲಿ ಹಾವು ಹಿಡಿದು ಹಾಗೇ ಜೀವಂತವಾಗಿ ತಿಂದಿರುವ ವಿಡಿಯೊವೊಂದು ವೈರಲ್‌ ಆಗಿದೆ. ಉತ್ತರ ಪ್ರದೇಶದ ಫತೇಪುರದ ಕಿಶನ್‌ಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ಕಲ್ಕಾ ಕ್ಯಾಂಪ್‌ ಬಳಿ ನಡೆದಿದೆ.
ಡಕಾಯಿತ ಗಂಗಾ ಪ್ರಸಾದ್‌ ಅಲಿಯಾಸ್‌ ಫೌಜಿ (55) ಹಾವು ತಿಂದ ವ್ಯಕ್ತಿ. ಒಂದು ಕಾಲದಲ್ಲಿ ಜನರನ್ನು ಸುಲಿಗೆ ಮಾಡುತ್ತಿದ್ದ ಶಂಕರ್‌ ಗ್ಯಾಂಗ್‌ನಲ್ಲಿದ್ದ ಈತ ಸದ್ಯಕ್ಕೆ ಬಂಡಾ ಜಿಲ್ಲೆಯ ಕಮಾಸಿನ್‌ನ ಕಾಗರ್‌ ಗ್ರಾಮದ ತನ್ನ ಸಂಬಂಧಿಕರ ಮನೆಯಲ್ಲಿ ವಾಸ ಮಾಡುತ್ತಿದ್ದಾನೆ. ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಗೊಂಡು ಬಂದಿದ್ದ ಈಗ ಹಾವು ತಿಂದು ಸುದ್ದಿಯಾಗಿದ್ದಾನೆ.
ಶಂಕರ್‌ ಗ್ಯಾಂಗ್‌ ಭಯಾನಕ ಸುಲಿಗೆಗೆ ಕುಖ್ಯಾತವಾಗಿತ್ತು. ಈ ಗ್ಯಾಂಗ್‌ನ ಹೆಸರು ಕೇಳಿದರೆನೇ ಜನರು ಭಯಬೀಳುತ್ತಿದ್ದರು. ಈಗ ಗಂಗಾಪ್ರಸಾದ್‌ನ ಈ ಕೃತ್ಯ ಮತ್ತೆ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ನದಿಯಿಂದ ಹಾವನ್ನು ಹಿಡಿದುಕೊಂಡು ಬರೋ ಕಿರಾತಕ ಅದರ ತಲೆಯನ್ನು ಬಾಯಿಯಿಂದ ಕಚ್ಚಿ ಹಾಗೇ ತಿನ್ನುತ್ತಾನೆ. ಈ ದೃಶ್ಯವುಳ್ಳ ವಿಡಿಯೊ ಈಗ ವೈರಲ್‌ ಆಗಿದೆ. ವಿಡಿಯೊ ಕಂಡ ಸಾಕಷ್ಟು ಮಂದಿ ಆತಂಕ ವ್ಯಕ್ತಪಡಿಸಿದ್ದಾರೆ.

ವಿಡಿಯೊ ನೋಡಲು ಇಲ್ಲಿ ಲಿಂಕ್‌ ಕ್ಲಿಕ್‌ ಮಾಡಿ..

Ghar Ke Kalesh on X: “A Guy from Fatehpur Eats Snake Alive (Video of dacoit Ganga Prasad Surfaced) https://t.co/VFRl2fX3FS” / X

RELATED ARTICLES
- Advertisment -
Google search engine

Most Popular