ಬೆಂಗಳೂರು: ಜಗತ್ಪ್ರಸಿದ್ಧ ಇ-ಕಾಮರ್ಸ್ ಕಂಪನಿ ಅಮೆಜಾನ್‌ನಲ್ಲಿ ವ್ಯಕ್ತಿಯೊಬ್ಬರು ಎಕ್ಸ್‌ಬಾಕ್ಸ್ ಕಂಟ್ರೋಲರ್‌ಗೆ ಆರ್ಡರ್ ಮಾಡಿದ್ದರೆ, ಅವರ ಮನೆಗೆ ಜೀವಂತ ಹಾವು ಪಾರ್ಸೆಲ್ ಆಗಿದೆ!. ಈ ವಿಚಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಮೆಜಾನ್‌ನಿಂದ ಬಂದ ಬಾಕ್ಸ್ ತೆರೆದಾಗ ಎಕ್ಸ್‌ಬಾಕ್ಸ್ ಕಂಟ್ರೋಲರ್ ಜೊತೆಗೆ ಹಾವೊಂದು ಕಾಣಿಸಿದೆ. ಬಾಕ್ಸ್‌ಗೆ ಅಂಟಿಸಿದ್ದ ಟೇಪ್‌ನಲ್ಲಿ ಹಾವು ಅಂಟಿಕೊಂಡಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ ಎನ್ನಲಾಗಿದೆ.
ಬಾಕ್ಸ್ ಅನ್ನು ಬಕೆಟ್‌ನಲ್ಲಿಟ್ಟು ವಿಡಿಯೊ ಮಾಡಲಾಗಿದೆ. ಈಗ ಆ ವಿಡಿಯೊ ಸಾಮಾಜಿಕ ಮಾಧ್ಯಮಗಳನ್ನು ಹರಿದಾಡುತ್ತಿದೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ತನ್ವಿ ಎಂಬವರು, ʻʻಅಮೆಜಾನ್‌ನಲ್ಲಿ ಎಕ್ಸ್‌ಬಾಕ್ಸ್ ಕಂಟ್ರೋಲರ್‌ಗಾಗಿ ಆರ್ಡರ್ ಮಾಡಿದ್ದೆ. ಅದರೊಂದಿಗೆ ಹಾವನ್ನೂ ಉಚಿತವಾಗಿ ಪಡೆದೆʼʼ ಎಂದು ಬರೆದುಕೊಂಡಿದ್ದಾರೆ.
ತನ್ವಿ ಅವರು ಬೆಂಗಳೂರಿನವರು ಎಂಬುದು ಅವರ ಎಕ್ಸ್ ಖಾತೆಯಲ್ಲಿ ಮಾಹಿತಿಯಿದೆ.
ತನ್ವಿ ಅವರ ಪೋಸ್ಟ್‌ಗೆ ಹಲವರು ಪ್ರತಿಕ್ರಿಯಿಸಿ, ದೂರು ದಾಖಲಿಸುವಂತೆ ಸಲಹೆ ನೀಡಿದ್ದಾರೆ. ಈ ಪೋಸ್ಟ್‌ಗೆ ಎಕ್ಸ್‌ನಲ್ಲೇ ಅಮೆಜಾನ್ ಕ್ಷಮೆ ಯಾಚಿಸಿದೆ. ಕೂಡಲೇ ಸಂಪರ್ಕಿಸುವುದಾಗಿ ತಿಳಿಸಿದೆ.