ಭಾರತ ಮೂಲದ ಯೋಗ ಈಗ ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿದೆ. ಯೋಗ ನಮ್ಮ ದೇಹವನ್ನು ಆಂತರಿಕವಾಗಿ ಮತ್ತು ಬಾಹ್ಯವಾಗಿ ಆರೋಗ್ಯಕರವಾಗಿಸುತ್ತದೆ. ಹೀಗಾಗಿ ದಿನನಿತ್ಯ ಯೋಗ ಮಾಡುವುದರಿಂದ ಫಿಟ್ ಆಗಿರಲು ಸಾಧ್ಯ ಎಂಬ ನಂಬಿಕೆ ಯೋಗ ವಿದ್ಯೆ ಕಲಿತವರದ್ದು. ಆದರೆ ಇಲ್ಲೊಬ್ಬ ಯೋಗದ ವಿಡಿಯೋ ಈಗ ವೈರಲ್ ಆಗಿದ್ದು, ಯುವತಿಯ ವಿಭಿನ್ನ ಯೋಗಾಸನಕ್ಕೆ ಇಡೀ ಜಗತ್ತೇ ಮೆಚ್ಚಿದೆ. ಯೋಗದೊಂದಿಗೆ ಹೊಸ ಪ್ರಯೋಗದಲ್ಲಿ ತೊಡಗಿಸಿಕೊಂಡ ಯುವತಿಯೊಬ್ಬಳು ಹಾವಿನೊಂದಿಗೆ ಸರಸವಾಡುವ ಸ್ನೇಕ್ ಯೋಗ ಪ್ರಯೋಗ ನಡೆಸಿದ್ದಾಳೆ. ಅದರ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಅದು ಈಗ ಎಲ್ಲೆಡೆ ವೈರಲ್ ಆಗಿದೆ.
ಸ್ನೇಕ್ ಯೋಗಾಸನದಲ್ಲಿ ಯುವತಿಯು ನಿಜ ಹಾವನ್ನೇ ದೇಹಕ್ಕೆ ಸುತ್ತಿಕೊಂಡು, ಕುತ್ತಿಗೆ ಮೇಲೆ, ದೇಹದ ಮೇಲೆ ಬಿಟ್ಟುಕೊಂಡಿದ್ದಾಳೆ. ಕಂಟೆಂಟ್ ಕ್ರಿಯೆಟರ್ ಆಗಿರುವ ಝೆನ್ ಝಾಂಗ್ ಎನ್ನುವ ಯುವತಿ ಈ ಯೋಗಾಸನವನ್ನು ಮಾಡಿದ್ದಾಳೆ. ಅದರ ವಿಡಿಯೋವನ್ನು ಝೆನ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ‘ಇದು ಹಾವಿನ ಆಸನ ಯೋಗ ಮಾಡುವ ಏಕೈಕ ಸ್ಥಳವಾಗಿದೆ. ಇದು ಎಂತಹ ವಿಶಿಷ್ಟ ಅನುಭವ’ ಎಂದು ಬರೆದುಕೊಂಡಿದ್ದಾಳೆ.
ಅದಲ್ಲದೇ, ಈ ವಿಡಿಯೋದಲ್ಲಿ ಯೋಗ ಕೇಂದ್ರಕ್ಕೆ ತೆರಳಿದ ವೇಳೆ ಈ ಯುವತಿಗೆ ಹೊಸ ಯೋಗಾಸನವನ್ನು ಹೇಳಿಕೊಡಲಾಗಿದೆ. ಈ ವಿಡಿಯೋದಲ್ಲಿ ಯೋಗ ಕೇಂದ್ರಕ್ಕೆ ತೆರಳಿದ ಝೆನ್ ಯಾಂಗ್ ಬಳಿಕ ಯೋಗ ಟೀಚರ್, ಒಂದು ಕಲ್ಲನ್ನು ಆರಿಸುವಂತೆ ಸೂಚಿಸಿದ್ದು, ಕಲ್ಲು ಆರಿಸಿ ನೀಡಿದ್ದಾರೆ. ಈ ಕಲ್ಲನ್ನು ಯೋಗ ಕೇಂದ್ರದಲ್ಲಿ ಇಡಲಾಗಿದ್ದು, ಆ ಬಳಿಕ ಸ್ನೇಕ್ ಯೋಗಾಸನ ಆರಂಭವಾಗಿರುವುದನ್ನು ಕಾಣಬಹುದು.
ಯೋಗದ ಯಾವ ಆಸನವನ್ನು ಮಾಡಿದರೂ ದೇಹದಲ್ಲಿ ಹಾವು ಇರಲೇಬೇಕು. ಝೆನ್ ಹೆಬ್ಬಾವು ಹಿಡಿದುಕೊಂಡು ಯೋಗಾಸನ ಮಾಡಿದ್ದಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿಪಟ್ಟಿದ್ದು, ಈ ವಿಡಿಯೋ ಈಗಾಗಲೇ ಒಂಬತ್ತು ಲಕ್ಷಕ್ಕೂ ಅಧಿಕ ವ್ಯೂಸ್ ಕಂಡಿದೆ. ನೆಟ್ಟಿಗರೊಬ್ಬರು ‘ಯೋಗದ ಹೆಸರಿನಲ್ಲಿ ಈ ರೀತಿ ಮೋಸ ಮಾಡಬೇಡಿ. ಯೋಗದಲ್ಲಿ ಈ ರೀತಿ ಇಲ್ಲ. ಇದು ವಂಚಿಸಲು ಬಳಸುತ್ತಿರುವ ದಾರಿ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಹಾವು ಸೇರಿದಂತೆ ಯಾವುದೇ ಪ್ರಾಣಿಗಳನ್ನು ಈ ರೀತಿ ಹಿಂಸಿಸುವುದು ಸರಿಯಲ್ಲ, ಇದು ಕಾನೂನು ಬಾಹಿರ’ ಎಂದಿದ್ದಾರೆ.
ವಿಡಿಯೋ ವೀಕ್ಷಿಸಲು ಲಿಂಕ್ ಕ್ಲಿಕ್ ಮಾಡಿ…