Thursday, November 7, 2024
Homeಮೂಡುಬಿದಿರೆಎಸ್ ಎನ್ ಎಂ ಪಾಲಿಟೆಕ್ನಿಕ್ ಮೂಡಬಿದಿರೆ : ಅತಿಥಿ ಉಪನ್ಯಾಸ

ಎಸ್ ಎನ್ ಎಂ ಪಾಲಿಟೆಕ್ನಿಕ್ ಮೂಡಬಿದಿರೆ : ಅತಿಥಿ ಉಪನ್ಯಾಸ

‘ಅಸಾಧ್ಯವೆಂಬುದು ಯಾವುದು ಇಲ್ಲ, ನಿರಂತರ ಶ್ರಮ ಮತ್ತು ಆಸಕ್ತಿಯಿಂದ ಮುನ್ನಡೆದರೆ ಅಸಾಧ್ಯದಿಂದ ‘ಸಾಧ್ಯ’ದೆಡೆಗೆ ಸಾಗಲು ಸಾಧ್ಯ, ವಿದ್ಯಾರ್ಥಿಗಳು ಏಕಾಗ್ರತೆ ಮತ್ತು ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ಲಭಿಸುತ್ತದೆ ಎಂಬುದಾಗಿ ಶ್ರೀ ಮಹಾವೀರ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ಶ್ರೀಗೌರಿ ಕೆ ತಿಳಿಸಿದರು. ಅವರು ಎಸ್ ಎನ್ ಎಂ ಪಾಲಿಟೆಕ್ನಿಕ್ ನ ಸಿವಿಲ್ ವಿಭಾಗದ ಅರೈವ ಸಿವಿಲ್ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಹಲವು ಉದಾಹರಣೆಗಳ ಜೊತೆಗೆ ಆಟಗಳ ಮೂಲಕ ವಿದ್ಯಾರ್ಥಿಗಳೊಂದಿಗೆ ಬೆರೆತು ಅಸಾಧ್ಯವನ್ನು ಸಾಧ್ಯವಾಗಿಸುವ ಪರಿಯನ್ನು ವಿವರಿಸಿದರು. ಸಿವಿಲ್ ವಿಭಾಗದ ಮುಖ್ಯಸ್ಥರಾದ ಗೋಪಾಲಕೃಷ್ಣ ಕೆ ಎಸ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರೈವ ಕ್ಲಬ್ಬಿನ ಸಂಯೋಜಕರಾದ ರವಳನಾಥ ಪ್ರಭು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಲೋಲಾಕ್ಷಿ ಸ್ವಾಗತಿಸಿ ದೀಕ್ಷಿತ ವಂದಿಸಿದರು. ಭವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಸಿವಿಲ್ ವಿಭಾಗದ ಉಪನ್ಯಾಸಕ ವೃಂದ ಕಾರ್ಯಕ್ರಮದಲ್ಲಿ ಹಾಜರಿದ್ದರು.

RELATED ARTICLES
- Advertisment -
Google search engine

Most Popular