ಸಾಮಾನ್ಯವಾಗಿ ಹುಡುಗಿಯರಿಗೆ ತಾವು ತೆಳ್ಳಗೆ, ಬೆಳ್ಳಗೆ ಇರಬೇಕೆಂಬ ಬಯಕೆ ಇದ್ದೇ ಇರುತ್ತದೆ. ಅದು ತಪ್ಪೂ ಅಲ್ಲ. ತೆಳ್ಳಗಾಗಲು ಸಾಕಷ್ಟು ಕಸರತ್ತುಗಳನ್ನು ಮಾಡುವ ಯುವತಿಯರೂ ಇದ್ದಾರೆ. ಆದರೆ ಹೈಟ್‌ಗೆ ತಕ್ಕಂತೆ ತೂಕ ಇರುವುದು ಆರೋಗ್ಯವಂತರ ಲಕ್ಷಣ. ಆದರೆ ಇಲ್ಲೊಬ್ಬಳು ತೂಕ ಕಡಿಮೆ ಮಾಡಿಕೊಳ್ಳಲು ಹೋಗಿ ಜೀವಂತ ಅಸ್ತಿ ಪಂಜರದಂತಾಗಿದ್ದಾಳೆ. ಆದರೂ ತೂಕ ಇಳಿಸಿಕೊಳ್ಳುವ ಚಟ ಬಿಡದ ಈಕೆ ಇನ್ನೂ ತೆಳ್ಳಗಾಗಲು ಟಿಪ್ಸ್ ಕೇಳಿದ್ದಾಳೆ.
ಚೀನಾದ ಗ್ವಾಂಗ್‌ಡಾಂಗ್ ಪ್ರಾಂತ್ಯದ ಗುವಾಂಗ್‌ಝೌನ ಈಕೆಯ ಹೆಸರು ಬೇಬಿ ಟಿಂಗ್ಜಿ. ಈಕೆ ಚೀನಾದಲ್ಲಿ ಟಿಕ್‌ಟಾಕ್ ಸ್ಟಾರ್. ಈಕೆ 160 ಸೆ.ಮೀ. ಎತ್ತರವಿದ್ದಾಳೆ. ಆದರೆ ತೂಕ ಮಾತ್ರ ಕೇವಲ 25 ಕೆ.ಜಿ. ಆದರೂ ಇನ್ನೂ ತೂಕ ಇಳಿಸುವುದಕ್ಕೆ ಪ್ಲೀಸ್ ಸಜೆಷನ್ಸ್ ಕೊಡಿ ಎಂದು ಆಕೆ ಕೇಳಿದ್ದಾಳೆ. ಮೂಳೆಗಳೇ ಎದ್ದು ಕಾಣುವ ಈಕೆಯ ತೂಕ ಇನ್ನೆಲ್ಲಿಗೆ ಕಡಿಮೆ ಮಾಡುವುದು ಅಂತ ವಿಡಿಯೊ ನೋಡಿದವರು ಕೇಳುತ್ತಿದ್ದಾರೆ.
ಟಿಕ್‌ಟಾಕ್‌ನಲ್ಲಿ 42,000 ಫಾಲೋವರ್ಸ್ ಹೊಂದಿರುವ ಈಕೆಗೆ ಹಲವರು ಹಲವು ಸಜೆಷನ್ಸ್ ನೀಡಿದ್ದಾರೆ. ಈಕೆಗೆ ಅನೋರೆಕ್ಸಿಯಾ ರೋಗವಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಇನ್ನು ಕೆಲವರು ಹೀಗಿರೋದು ಒಳ್ಳೆಯದಲ್ಲ ಎಂದಿದ್ದಾರೆ. ಇನ್ನು ಕೆಲವರು ಈಕೆಯ ಡಾನ್ಸ್ ನೋಡಿ, ಅಸ್ತಿ ಪಂಜರ ಡಾನ್ಸ್ ಮಾಡುತ್ತಿದೆ, ನೀವು ಹೆಚ್ಚು ಕಾಲ ಬದುಕೋದೇ ಡೌಟ್ ಎಂಬಂತೆ ಕಾಮೆಂಟ್ ಮಾಡಿದ್ದಾರೆ.
ತೂಕ ಇಳಿಸಲು ಹೋಗಿ ಜೀವಂತ ಅಸ್ತಿಪಂಜರವಾದ ಸೋಶಿಯಲ್ ಮೀಡಿಯಾ ಸ್ಟಾರ್! | ಈಕೆಗೆ ಇನ್ನೂ ಸಣ್ಣ ಆಗಬೇಕಂತೆ!
RELATED ARTICLES