Thursday, December 5, 2024
Homeಬೆಂಗಳೂರುಹೆಣ್ಣು ಮಕ್ಕಳ ಮೇಲಿನ ಶೋಷಣೆ ತಡೆಗೆ ಸಮಾಜ ಒಕ್ಕೂರಲಿನಿಂದ ಧ್ವನಿ ಎತ್ತಬೇಕು: ನಟಿ ಪ್ರಿಯಾಂಕ ಉಪೇಂದ್ರ

ಹೆಣ್ಣು ಮಕ್ಕಳ ಮೇಲಿನ ಶೋಷಣೆ ತಡೆಗೆ ಸಮಾಜ ಒಕ್ಕೂರಲಿನಿಂದ ಧ್ವನಿ ಎತ್ತಬೇಕು: ನಟಿ ಪ್ರಿಯಾಂಕ ಉಪೇಂದ್ರ


ಬೆಂಗಳೂರು; ಹೆಣ್ಣು ಮಕ್ಕಳ ಮೇಲಿನ ಶೋಷಣೆ ತಡೆಗೆ ಸಮಾಜ ಒಕ್ಕೂರಲಿನಿಂದ ಧ್ವನಿ ಎತ್ತಬೇಕು ಎಂದು ಚಿತ್ರನಟಿ ಪ್ರಿಯಾಂಕ ಉಪೇಂದ್ರ ಹೇಳಿದ್ದಾರೆ.
ಆಚಾರ್ಯ ಪಾಠಶಾಲಾ ವಾಣಿಜ್ಯ ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆ ಹಾಗೂ ಕ್ರೀಡಾ ಕೂಟ ಉದ್ಘಾಟಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಜಗತ್ತು ಇಂದು ಶರವೇಗದಲ್ಲಿ ಬೆಳವಣಿಗೆಯಾಗುತ್ತಿದೆ. ಇದೇ ರೀತಿ ಹೆಣ್ಣು ಮಕ್ಕಳ ಸ್ಥಾನಮಾನದ ರಕ್ಷಣೆಯೂ ಅಗತ್ಯ. ಹೆಣ್ಣು ಮಕ್ಕಳನ್ನು ಶೋಷಣೆ ಮಾಡುವವರ ವಿರುದ್ಧ ಸಮಾಜ ನಿಲ್ಲಬೇಕು ಎಂದರು.
ಬೆಂಗಳೂರು ದಕ್ಷಿನ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್ ಮಾತನಾಡಿ, ದೇಶದಲ್ಲಿನ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದು ಮೊದಲ ಆದ್ಯತೆಯಾಗಿದೆ. ಭ್ರಷ್ಟಾಚಾರದ ವಿರುದ್ಧ ವಿದ್ಯಾರ್ಥಿ ಸಮುದಾಯ ಹೋರಾಟಕ್ಕೆ ಅಣಿಯಾಗಬೇಕು ಎಂದು ಹೇಳಿದರು.
ರಂಗಕರ್ಮಿ, ನಟಿ ರೋಹಿಣಿ ರಘುನಂದನ್, ಎ.ಪಿ.ಎಸ್ ವಿಶ್ವಸ್ಥ ಸಂಸ್ಥೆಯ ಅಧ್ಯಕ್ಷರಾದ ಸಿಎ.ಡಾ.ವಿಷ್ಣುಭರತ್ ಆಲ್ಲಂಪಲ್ಲಿ, ಸಂಸ್ಥೆಯ ಪದಾಧಿಕಾರಿಗಳಾದ ಆರ್.ವಿ.ವಿಜಯಭಾಸ್ಕರ್, ಪ್ರೊ.ಎ.ಪ್ರಕಾಶ್, ಪಿ.ಕೃಷ್ಣಸ್ವಾಮಿ, ಎ.ಆರ್.ಮಂಜುನಾಥ್, ಎ.ಆರ್.ಆಚಾರ್ಯ, ಸಿಎ.ಎ.ಪಿ.ಆಚಾರ್ಯ, ಡಾ.ಸಿಎ.ಐ.ಎಸ್.ಪ್ರಸಾದ್, ಕೆ.ಪಿ.ನರಸಿಂಹಮೂರ್ತಿ ಹಾಗೂ ಎ.ಮುರಳೀಧರ್ ಉಪಸ್ಥಿತರಿದ್ದರು. 

RELATED ARTICLES
- Advertisment -
Google search engine

Most Popular