ದಾವಣಗೆರೆ ಕೆ.ಟಿ.ಜೆ. ನಗರದ 10ನೇ ಕ್ರಾಸ್ ವಾಸಿಯಾದ ವಾದ್ಯಗೋಷ್ಠಿ ಕಲಾವಿದ ಅದ್ಭುತ ಹಾಡುಗಾರ ಕಲಾವಿದ, ಇಡೀ ರಾಜ್ಯದ ಉದ್ದಗಲಕ್ಕೂ ದಾವಣಗೆರೆ ವಾದ್ಯಗೋಷ್ಠಿ ತಂಡದೊಂದಿಗೆ ಎಸ್.ಪಿ.ಬಿ., ಪಿ.ಬಿ.ಶ್ರೀನಿವಾಸ್, ಮುಕೇಶ್ ಮತ್ತು ಮೊಹಮ್ಮದ್ ರಫೀ ಹಾಡುಗಳನ್ನು ಅದ್ಭುತವಾಗಿ ಹಾಡುತ್ತಿದ್ದ ಕಲಾವಿದ ಹನುಮಂತರಾಜ್ ನಿಧನಕ್ಕೆ ಅವರ ಅಭಿಮಾನಿ ಬಳಗಕ್ಕೆ ಹಾಗೂ ಕುಟುಂಬ ವರ್ಗಕ್ಕೂ ದುಃಖವನ್ನು ಭರಿಸುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತಾ ಕೆ.ಟಿ.ಜೆ. ನಗರದ ಗಾಂಧೀಜಿ ಹರಿಜನ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಕೆ.ಪಿ.ಸಿ.ಸಿ. ಎಸ್ಸಿ ವಿಭಾಗದ ಕಾರ್ಯದರ್ಶಿ ಸೋಮಲಾಪುರದ ಹನುಮಂತಪ್ಪನವರು ಹಾಗೂ ಪಂಚಮಸಾಲಿ ಸಮಾಜದ ಮುಖಂಡರು, ಡಾ. ಪುನೀತ್ ರಾಜ್‌ಕುಮಾರ್ ಬಡಾವಣೆಯ ಗೌರವ ಅಧ್ಯಕ್ಷರಾದ ಮಂಜನಾಥ್ ಕಲಘಟಗಿ ಇವರುಗಳು ಸಂತಾಪ ಸೂಚಿಸಿದ್ದಾರೆ.