ಶತಮಾನ ಕಂಡಂತಹ ಕಾಂಗ್ರೆಸ್ ಪಕ್ಷಕ್ಕೆ ೫೦ ರಿಂದ ೬೦ ವರ್ಷದಿಂದ ದುಡಿದಿರುವ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿದ್ದಾರೆ. ಈಗಲೂ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅಂತಹ ನಿಷ್ಠಾವಂತ ಕಾರ್ಯಕರ್ತರನ್ನು ಬಿಟ್ಟು ಮೊನ್ನೆ ನಿನ್ನೆ ಬೇರೆ ಪಕ್ಷದಿಂದ ಬಂದ ವಲಸೆ ಕಾರ್ಯಕರ್ತರಿಗೆ ಸ್ಥಾನಮಾನ ನೀಡುತ್ತಿರುವುದು ಖಂಡನೀಯ. ಅದರೆ ಅಖಿಲ ಭಾರತ ವೀರಶೈವ ಮಹಸಭಾದ ೩ನೇ ಬಾರಿಗೆ ಆಯ್ಕೆಯಾದಂತಹ ಶಾಮನುರು ಶಿವಶಂಕರಪ್ಪನವರಿಗೂ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಎಸ್.ಎಸ್.ಮಲ್ಲಿಕಾರ್ಜುನ್‌ರವರಿಗೂ ಹಾಗೂ ನೂತನ ಲೋಕಸಭಾ ಸದಸ್ಯರಾದ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್‌ರವರಿಗೂ ಮನವಿ ಮೂಲಕ ಕೆ.ಟಿ.ಜೆ. ನಗರದ ಗಾಂಧೀಜಿ ಹರಿಜನ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಕೆ.ಪಿ.ಸಿ.ಸಿ. ಎಸ್ಸಿ ವಿಭಾಗದ ಕಾರ್ಯದರ್ಶಿ ಸೋಮಲಾಪುರದ ಹನುಮಂತಪ್ಪನವರು ಒತ್ತಾಯಿಸಿದ್ದಾರೆ.
ಆದರೆ ಇತ್ತೀಚಿನ ದಿನಗಳಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿದ ಪ್ರತಿಫಲವಾಗಿ ಕಳೆದ ಬಾರಿ ಸರ್ಕಾರ ಸಂಪೂರ್ಣವಾಗಿ ಸೋತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ರಾಜ್ಯ ಸರ್ಕಾರದಲ್ಲಿ ನೂರಾರು ನಿಗಮಗಳು ಇದ್ದರೂ ಕೂಡಾ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸದೇ ನನ್ನಂತಹ ನಿಷ್ಠಾವಂತ ಕಾರ್ಯಕರ್ತರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಬೇಕೆಂದು ಮನವಿ ಮೂಲಕ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಪುನಿತ್ ರಾಜ್‌ಕುಮಾರ್ ಬಡಾವಣೆಯ ಗೌರವ ಅಧ್ಯಕ್ಷರಾದ ಮಂಜುನಾಥ ಕಲಘಟಗಿ ಹಾಗೂ ಗಾಂಧೀಜಿ ಹರಿಜನ ಯುವಕ ಸಂಘದ ನಿರ್ದೇಶಕರಾದ ಗುಡದಪ್ಪ, ಅಜ್ಯಯ್ಯ, ಲಕ್ಕಪ್ಪ, ಅನಿಕೇತನ ಪೋಟೋ ಸ್ಟುಡಿಯೋ ಮಾಲೀಕರಾದ ಚಿತ್ರ ಕಲಾವಿದರಾದ ಚಂದ್ರಶೇಖರ ತೆಗ್ಗಿನಮಠ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಸೋಮಲಾಪುರ
RELATED ARTICLES