ಮನಿಲಾ: ಸ್ವಯಂಘೋಷಿತ ದೇವರ ಮಗ ಖ್ಯಾತಿಯ ಅಪೊಲೋ ಕ್ವಿಬೊಲಾಯ್‌ನನ್ನು ಮಕ್ಕಳ ಕಳ್ಳಸಾಗಣೆ, ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪದಲ್ಲಿ ಫಿಲಿಪೈನ್ಸ್‌ನಲ್ಲಿ ಬಂಧಿಸಲಾಗಿದೆ.
2 ಸಾವಿರ ಪೊಲೀಸ್, ಹೆಲಿಕಾಪ್ಟರ್, ಥರ್ಮಲ್ ಇಮೇಜಿಂಗ್ ವ್ಯವಸ್ಥೆ ಬಳಸಿ ಆರೋಪಿಯನ್ನು ಬಂಧಿಸಲಾಗಿದೆ. 2,000 ಪೋಲೀಸರನ್ನು ಎರಡು ವಾರಗಳಿಗೂ ಹೆಚ್ಚು ಕಾಲ, ಆತನ ಚರ್ಚ್ ಒಡೆತನದ ದಕ್ಷಿಣ ನಗರವಾದ ದಾವೊದಲ್ಲಿ ನಿಯೋಜಿಸಲಾಗಿತ್ತು. ಕಿಂಗ್‌ಡಮ್ ಆಫ್ ಜೀಸಸ್ ಕ್ರೈಸ್ಟ್ ಬಂಕರ್‌ನಲ್ಲಿ ಈತ ಅಡಗಿಕೊಂಡಿದ್ದ ಎಂಬ ಅನುಮಾನ ಇತ್ತು.
ಕ್ವಿಬೊಲಾಯ್ ಅನುಯಾಯಿಗಳು, ಶೀಲ್ಡ್ ಹೊತ್ತ ಪೊಲೀಸರನ್ನು ಕಾಂಪೌಂಡ್‌ನ ಗೇಟ್ ಬಳಿ ತಡೆದಿದ್ದರು. 75,000 ಆಸನಗಳನ್ನು ಹೊಂದಿರುವ ಕ್ಯಾಥೆಡ್ರಲ್, ಕಾಲೇಜು ಮತ್ತು ಕ್ರೀಡಾಂಗಣದ ಮೇಲೆ ಸುತ್ತಲೂ ಪೊಲೀಸರು ಹೆಲಿಕಾಪ್ಟರ್‌ಗಳನ್ನು ಬಳಸಿದ್ದರು.
ಕ್ವಿಬೊಲಾಯ್ ಬಂಧನಕ್ಕೆ ಕೆಲವು ದಿನಗಳ ಮೊದಲು, ಪೊಲೀಸರು ಥರ್ಮಲ್ ಇಮೇಜಿಂಗ್ ಮತ್ತು ರಾಡಾರ್ ತಂತ್ರಜ್ಞಾನವನ್ನು ಬಳಸಿಕೊಂಡು ಭೂಮಿಯ ಆಳದಲ್ಲಿರುವ ಮಾನವ ದೇಹದ ಉಷ್ಣತೆ ಮತ್ತು ಹೃದಯ ಬಡಿತವನ್ನು ದಾಖಲಿಸಿದ್ದರು ಎನ್ನಲಾಗಿದೆ.
ಫಿಲಿಪೈನ್ಸ್‌ನ ಮಾಜಿ ಅಧ್ಯಕ್ಷ ರೋಡ್ರಿಗೋ ಡ್ಯುಟೆರ್ಟೆ ಅವರ ದೀರ್ಘಕಾಲದ ಸ್ನೇಹಿತ ಅಪೊಲೋ ಕ್ವಿಬೊಲಾಯ್, ಮಕ್ಕಳ ಮತ್ತು ಲೈಂಗಿಕ ದೌರ್ಜನ್ಯ, ಮಾನವ ಕಳ್ಳಸಾಗಣೆ ಸಂಬಂಧಿತ ಆರೋಪಗಳ ಮೇಲೆ ಬೇಕಾಗಿದ್ದ.
ಸ್ವಯಂ ಘೋಷಿತ ʻದೇವರ ಮಗʼನ ಬಂಧನ | 2,000 ಪೊಲೀಸರು, ಹೆಲಿಕಾಪ್ಟರ್, ಥರ್ಮಲ್ ಇಮೇಜಿಂಗ್ ವ್ಯವಸ್ಥೆ ಬಳಸಿ ಮಕ್ಕಳ ಕಳ್ಳಸಾಗಣೆ, ಲೈಂಗಿಕ ದೌರ್ಜನ್ಯ ಆರೋಪಿ ಅರೆಸ್ಟ್
RELATED ARTICLES