Tuesday, March 18, 2025
Homeರಾಜ್ಯಮೇ4-5 ರಂದು ಶರದಿ ಕಲಾ ಸಾಂಸ್ಕೃತಿಕ ಸಂಸ್ಥೆಯಿಂದ ಗೀತಾ ಗಾಯನ ತರಬೇತಿ ಶಿಬಿರ

ಮೇ4-5 ರಂದು ಶರದಿ ಕಲಾ ಸಾಂಸ್ಕೃತಿಕ ಸಂಸ್ಥೆಯಿಂದ ಗೀತಾ ಗಾಯನ ತರಬೇತಿ ಶಿಬಿರ

ದಾವಣಗೆರೆ : ದಾವಣಗೆರೆಯ ಶರದಿ ಕಲಾ ಸಾಂಸ್ಕೃತಿಕ ಸಂಸ್ಥೆ ಮತ್ತು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ
ಸಂಯುಕ್ತಾಶ್ರಯದಲ್ಲಿ ಮೇ 4 ಮತ್ತು 5 ಶನಿವಾರ ಭಾನುವಾರ ಎರಡು ದಿನಗಳ ಕಾಲ ನಗರದ ಪಿ.ಬಿ. ರಸ್ತೆಯ
ಗಾಂಧಿ ವೃತದ ಹತ್ತಿರದಲ್ಲಿ ಇರುವ ಆರ್.ಎಚ್.ಗೀತಾ ಮಂದಿರದಲ್ಲಿ ಸಂಗೀತಾಸಕ್ತ ಹಿರಿಯರಿಗೆ, ಕಿರಿಯರಿಗೆ ವಸಂತಋತುವಿನ ಬೇಸಿಗೆ ರಜೆಯ ಪ್ರಯುಕ್ತ ಗೀತಾ ಗಾಯನ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಶರದಿ ಕಲಾ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ವಿದುಷಿ ಶೋಭಾ ರಂಗನಾಥ್ ತಿಳಿಸಿದ್ದಾರೆ. ನಾಡಿನ ಖ್ಯಾತ ಸಂಗೀತಗಾರರಾದ ಬೆಂಗಳೂರಿನ ಉಪಾಸನ ಮೋಹನ್ ಸಂಗೀತ ತರಬೇತಿ ನಡೆಸಿಕೊಡಲಿದ್ದು ಆಸಕ್ತರು
25-4-2024ರ ಒಳಗೆ ಈ ಕೆಳಗೆ ವಿಳಾಸದಲ್ಲಿ ಪ್ರವೇಶ ಪತ್ರ ಪಡೆದು ಭರ್ತಿ ಮಾಡಿ ಕೊಡಬಹುದಾಗಿದೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, ಕನ್ನಡಕೃಪ, ಕುವೆಂಪು ರಸ್ತೆ (ಲಾಯರ್ ರೋಡ್), ಕೆಬಿ ಬಡಾವಣೆ. ದಾವಣಗೆರೆ ಶರದಿ ಕಲಾ ಸಾಂಸ್ಕೃತಿಕ ಸಂಸ್ಥೆ, ಜಯನಗರ `ಎ’ಬ್ಲಾಕ್ ದಾವಣಗೆರೆ ಹೆಚ್ಚಿನ ಮಾಹಿತಿಗೆ 9538732777, 8904672275, 9740104082 ಈ ಸನೀಹ ವಾಣಿಗಳಿಗೆ ಸಂಪರ್ಕಿಸಬಹುದು ಎಂದು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್‌ ಶೆಣೈ ವಿನಂತಿಸಿದ್ದಾರೆ.

RELATED ARTICLES
- Advertisment -
Google search engine

Most Popular