Friday, February 14, 2025
Homeರಾಷ್ಟ್ರೀಯಪ್ರೀತಿಯ ನಾಯಿ ಮರಿ ಜೊತೆಗೆ ಸೋನಿಯಾ ಗಾಂಧಿ | ಫೋಟೊ ಭಾರೀ ವೈರಲ್;‌ ಏನಿದರ ವಿಶೇಷತೆ?

ಪ್ರೀತಿಯ ನಾಯಿ ಮರಿ ಜೊತೆಗೆ ಸೋನಿಯಾ ಗಾಂಧಿ | ಫೋಟೊ ಭಾರೀ ವೈರಲ್;‌ ಏನಿದರ ವಿಶೇಷತೆ?

ನವದೆಹಲಿ: ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಕಳೆದ ವರ್ಷ ನೂರಿ ಅನ್ನೋ ಹೆಸರಿನ ಒಂದು ಪುಟ್ಟ ಮರಿಯನ್ನು ತನ್ನ ತಾಯಿ ಸೋನಿಯಾ ಗಾಂಧಿಗೆ ಗಿಫ್ಟ್ ನೀಡಿದ್ದರು. ಇಂದು ರಾಹುಲ್ ಗಾಂಧಿ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ, ಸೋನಿಯಾ ಗಾಂಧಿ ತಮ್ಮ ಬ್ಯಾಗ್​ನಲ್ಲಿ ನೂರಿಯನ್ನು ಕೂರಿಸಿ ಹೊತ್ತುಕೊಂಡು ಹೋಗುತ್ತಿರುವ ಪೋಟೋವೊಂದನ್ನು ಹಂಚಿಕೊಂಡಿದ್ದಾರೆ. ತಾವು ಉಡುಗೊರೆಯಾಗಿ ನೀಡಿದ್ದ ನೂರಿ ಈಗ ಅಮ್ಮನ ಫೇವರೆಟ್ ಡಾಗ್ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. ಈ ಫೋಟೊ ಈಗ ಎಲ್ಲೆಡೆ ವೈರಲ್‌ ಆಗಿದೆ.
ರಾಹುಲ್ ಗಾಂಧಿ ಕಳೆದ ವರ್ಷ ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಗೋವಾ ಪ್ರವಾಸ ಕೈಗೊಂಡಿದ್ದರ ಬಗ್ಗೆ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. ಅಲ್ಲಿ ಅವರು ಒಂದು ಗೋವಾ ಪರಿವಾರವನ್ನು ಭೇಟಿಯಾಗಿದ್ದರು. ಅವರು ರಾಹುಲ್ ಗಾಂಧಿಗೆ ಪ್ರೀತಿಯಿಂದ ಈ ನೂರಿಯನ್ನು ನೀಡಿದ್ದರು. ನೂರಿಯನ್ನು ದೆಹಲಿಗೆ ತೆಗೆದುಕೊಂಡು ಹೋದ ರಾಹುಲ್ ಗಾಂಧಿ, ತಾಯಿಗೆ ಸರ್​ಪ್ರೈಸ್ ಗಿಫ್ಟ್​ ಆಗಿ ನೀಡಿದ್ದರು. ಇನ್ನೂ ಒಂದು ಅಚ್ಚರಿಯಂದರೆ, ರಾಹುಲ್ ಗಾಂಧಿ ನೂರಿಗೆ ಮೆಟ್ರೋ ಸವಾರಿಯನ್ನು ಕೂಡ ಮಾಡಿಸಿದ್ದರು.
ರಾಹುಲ್ ಗಾಂಧಿ ತಮ್ಮ ತಾಯಿಗೆ ನಾಯಿ ಮರಿಯನ್ನು ಗಿಫ್ಟ್ ನೀಡುತ್ತಿದ್ದಂತೆ ಅತ್ತ ಅಸಾದುದ್ಧೀನ್ ಓವೈಸಿ ಪಾರ್ಟಿಯ ಒಬ್ಬ ನಾಯಕ, ಈ ಶ್ವಾನದ ಹೆಸರಿನ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಈ ಹೆಸರು (ನೂರಿ) ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಿದೆ ಎಂದು ಎಐಎಎಂಐನ ನಾಯಕ ಮೊಹಮದ್ ಫರ್ಹಾತ್ ಕೋರ್ಟ್​ ಮೆಟ್ಟಿಲೇರಿದ್ದರು. ಹೆಸರು ಬದಲಾಯಿಸುವಂತೆ ಮತ್ತು ಕ್ಷಮೆ ಕೇಳುವಂತೆ ಕೋರಿದ್ದರು. ಆದರೆ ರಾಹುಲ್‌ ಹಾಗೆ ಮಾಡಿರಲಿಲ್ಲ.

RELATED ARTICLES
- Advertisment -
Google search engine

Most Popular