ಹಾಸನ ನಗರದ ಉತ್ತರ ಬಡಾವಣೆಯಲ್ಲಿ ಇರುವ ಶ್ರೀ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದಿಂದ ಆಯೋಜಿಸಲಾದಂತಹ ” ಒತ್ತಡದಿಂದ ಹೊರಬರುಲು ಮಾರ್ಗಗಳು” ಎಂಬ ವಿಚಾರದ ಬಗ್ಗೆ ವಿಚಾರಗೋಷ್ಠಿ, ಹಾಗೂ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು.
ಒತ್ತಡದ ಜೀವನದಿಂದ ಹೊರ ಬರಬೇಕಾದರೆ ಸೋಲ್ ಸಿಂಕ್ ಧ್ಯಾನ ಅವಶ್ಯಕತೆ ಇದೆ ಎಂಬುದು ಅರಿತು ಎಲ್ಲರೂ ತಿಳಿಯಬೇಕಾಗಿದೆ. ಇಂದಿನ ಚಿಕ್ಕ ಮಕ್ಕಳು ಚಿಕ್ಕ ಚಿಕ್ಕ ವಿಷಯಗಳಿಗೆ ಒತ್ತಡಗಳಿಗೆ ಸಿಲುಗುತ್ತಿದ್ದಾರೆ ಆದ್ದರಿಂದ ಹೊರ ಬರಲು ಹಲವಾರು ಮಾರ್ಗಗಳಿವೆ. ಅದರಲ್ಲಿ ಸೋಲ್ ಸಿಂಕ್ ಧ್ಯಾನವು ಒಂದಾಗಿದೆ. ಆದ್ದರಿಂದ ಜೀವನದಲ್ಲಿ ಇದರ ಮಹತ್ವವನ್ನು ಪ್ರತಿಯೊಬ್ಬರು ತಿಳಿದು ತಮ್ಮ ಜೀವನ ಶೈಲಿಯಲ್ಲಿ ಅದನ್ನು ಅಳವಡಿಸಿಕೊಳ್ಳಬೇಕಾಗಿದೆ. ಇರುವುದು ಎರಡು ಸ್ಥಿತಿ ಗಳು ಒಂದು ದುಃಖದ ಸ್ಥಿತಿ ಮತ್ತೊಂದು ಸಂತೋಷದ ಸ್ಥಿತಿ. ಇದರ ಮಹತ್ವ ತಿಳಿದು ಒತ್ತಡಗಳಿಂದ ಮುಕ್ತರಾಗಿ ಸಂತೋಷದ ಸ್ಥಿತಿಗೆ ಪ್ರತಿಯೊಬ್ಬರೂ ಬರಬೇಕೆಂದು ಈ ಕಾರ್ಯಕ್ರಮವನ್ನು ಈ ಶಾಲೆಯಲ್ಲಿ ಆಯೋಜಿಸಲಾಗಿದೆ. ಇದರ ಪ್ರಯೋಜನವನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಸಂತೋಷದ ಸ್ಥಿತಿಯಲ್ಲಿ ಇರಬಹುದು ಅದು ನಮ್ಮ ಕೈಯಲ್ಲಿದೆ ಎಂದು ಕರಿಷ್ಮಾ ದಾಸಾಜಿಯವರಿಂದ ಎಂದು ಡಿವೋಟಿಗಳಾದ ಹೆಚ್. ಎಸ್. ಪ್ರತಿಮಾ ಹಾಸನ್ ತಿಳಿಸಿದರು.
ವಿವೇಕಾನಂದ ಶಾಲೆಯಲ್ಲಿ ಶಿಕ್ಷಕರಿಗೂ ಹಾಗೂ ವಿದ್ಯಾರ್ಥಿಗಳಿಗೆಲ್ಲ ಶ್ರೀ ಮುಕ್ತಿ ಗುರುಗಳಾದ ಕೃಷ್ಣಾ ಜಿ, ಪ್ರೀತಾ ಜಿ ರವರ ಶಿಷ್ಯರಾಗಿರುವ ಚೆನ್ನೈನ ಹತ್ತಿರದ ವರದ ಪಾಳ್ಯದಲ್ಲಿರುವಂತಹ ಏಕಂ ಅನ್ನುವ ಪುಣ್ಯಕ್ಷೇತ್ರದಿಂದ ಬಂದಂತಹ ಕರಿಷ್ಮಾ ದಾಸಜಿ ರವರು ಒತ್ತಡದ ಜೀವನದಿಂದ ಹೊರಬರುವುದು ಹೇಗೆ ಎಂಬ ಮಾರ್ಗದರ್ಶನವನ್ನು ತಿಳಿಸಿದರು. ಮನುಜನಿಗೆ ಬೇಕಾದಂತ ಏಕಾಗ್ರತೆಯನ್ನು ಧ್ಯಾನದಿಂದ ಹೇಗೆ ಪಡೆಯಬಹುದು ಎಂಬುದನ್ನು. ಐದು ನಿಮಿಷದಲ್ಲಿ ಏಕಾಗ್ರತೆಯನ್ನು ಸೋಲ್ ಸಿಂಕ್ ಧ್ಯಾನವನ್ನು ಮಾಡಿ ನಮ್ಮ ಜೀವನವನ್ನು ಪ್ರೀತಿಸುವುದು ಹೇಗೆ ಸುಂದರವಾದ, ಸಂತೋಷದ ಸ್ಥಿತಿಯನ್ನು ಹೇಗೆ ಪಡೆಯುವುದು ಎಂಬುದನ್ನು ಸವಿವರವಾಗಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ತಿಳಿಸಲಾಯಿತು. ಜೀವನದಲ್ಲಿ ಒತ್ತಡಗಳಿಂದ ಹೊರಬಂದು ನಿರಳವಾದ ಬದುಕನ್ನು ಹೇಗೆ ಕಟ್ಟಿಕೊಳ್ಳಬಹುದೆಂದು ತಿಳಿಸಿದರು ನಂತರ ಅವರನ್ನು ವೇದಿಕೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರು ಉದಯಕುಮಾರ್ ಹಾಗೂ ಶಾಲಾ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ವೇದಿಕೆಯಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿ. ಶಿಕ್ಷಕಿ. ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷರಾದಂತಹ ಹೆಚ್. ಎಸ್. ಪ್ರತಿಮಾ ಹಾಸನ್ ಜಿ. ಶಾರದ ಜಿ. ಜಯಲಕ್ಷ್ಮಿ ಜಿ. ಮಕ್ಕಳಾದ ಮೋಹನ್ ಗೌಡ ಜಿ, ದಿಯಾ ಗೌಡ ಜಿ ಶಿಕ್ಷಕರು, ವಿದ್ಯಾರ್ಥಿಗಳು ಇನ್ನೂ ಹಲವರು ಉಪಸ್ಥಿತರಿದ್ದರು.

