Saturday, April 19, 2025
Homeಉಡುಪಿಸೌತ್ ಕೆನರಾ ಫೋಟೋಗ್ರಾಫರ್ ; ಉಡುಪಿ ವಲಯದ ವತಿಯಿಂದ ನಡೆದ ಶಿವ - ಜಯ ಟ್ರೋಫಿ...

ಸೌತ್ ಕೆನರಾ ಫೋಟೋಗ್ರಾಫರ್ ; ಉಡುಪಿ ವಲಯದ ವತಿಯಿಂದ ನಡೆದ ಶಿವ – ಜಯ ಟ್ರೋಫಿ 2025

ಉಡುಪಿ: ಸೌತ್ ಕೆನರಾ  ಫೋಟೋಗ್ರಾಫರ್ ಅಸೋಸಿಯೇಶೆನ್ (ರಿ ) ದಕ್ಷಿಣ ಕನ್ನಡ  – ಉಡುಪಿ ಜಿಲ್ಲೆ  ಇದರ ಉಡುಪಿ ವಲಯದ ವತಿಯಿಂದ  ನಡೆದ ಶಿವ – ಜಯ ಟ್ರೋಫಿ 2025   ಇತ್ತೀಚಿಗೆ  ಉಡುಪಿ  ಬೀಡಿನ ಗುಡ್ಡೆಯ ಕ್ರೀಡಾಂಗಣ ದಲ್ಲಿ ನಡೆಯಿತು , ಇದರ ಉದ್ಘಾಟನೆಯನ್ನು ಉಡುಪಿ ಮದರ್ ಆಫ್ ಸಾರೊಸ್ ಚರ್ಚ್ ಧರ್ಮಗುರುಗಳಾದ ವಂದನೀಯ ಚಾರ್ಲ್ಸ್ ಮಿನೇಜಸ್  ದೀಪ ಬೆಳಗಿಸಿ ಚಾಲನೆ  ನೀಡಿ  ಛಾಯಾಗ್ರಾಹಕರು ತಮ್ಮ ವೃತ್ತಿ ಜೊತೆ ಇಂತಹ  ಕ್ರೀಡಾಕೂಟದಿಂದ ದೈಹಿಕ ಅರೋಗ್ಯ  , ಒತ್ತಡ ನಿವಾರಣೆ , ವ್ಯಕ್ತಿ ವಿಕಸನ  , ಐಕ್ಯತೆ ಹಾಗೂ   ಸಂಘಟನೆ ಬೆಳವಣಿಗೆ ಪೂರ್ವಕವಾಗಿದ್ದು ಈ ನಿಟ್ಟಿನಲ್ಲಿ ಇಲ್ಲಿ ಸೇರಿದ 14 ವಲಯದ ತಂಡ ಭಾಗವಹಿಸಿರುವುದು ಸಾಕ್ಷಿ ಎಂದು ಶುಭ ಹಾರೈಸಿದರು.

ಮುಖ್ಯ ಅಥಿತಿ ಗಳಾಗಿ   ಎಸ್ ಕೆ ಪಿ ಎ ಜಿಲ್ಲಾ ಅಧ್ಯಕ್ಷರಾದ   ಪದ್ಮಪ್ರಸಾದ್ ಜೈನ್ ,ಉಡುಪಿ ವಕೀಲ ಸಂಘದ ಅಧ್ಯಕ್ಷರಾದ ರೊನಾಲ್ಡ್ ಪ್ರವೀಣ್ ಕುಮಾರ್ , ಮಾಜಿ ಅಧ್ಯಕ್ಷರಾದ ವಿಲ್ಸ್ ನ್ ಗೊನಾಸ್ಲವಿಸ್ ,ಎಸ್ ಕೆ ಪಿ ಎ ಸಹಕಾರ ಸೊಸೈಟಿಯ ಅಧ್ಯಕ್ಷ ವಾಸುದೇವ ರಾವ್ ,  ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ್ ಬಂಟಾವಾಳ್, ಗೌರವಾಧ್ಯಕ್ಷರಾದ ನವೀನ್‌ ಬಳ್ಳಾಲ್ ಹಾಗೂ ಉಡುಪಿ ವಲಯದ  ಕಾರ್ಯದರ್ಶಿ ದಿವಾಕರ ಹಿರಿಯಡಕ, ಜಿಲ್ಲಾ ಉಪಾಧ್ಯಕ್ಷರಾದ ಪ್ರವೀಣ್‌‌ ಕೊರಿಯಾ, ಸಂಗೊಳ್ಳಿ ರಾಯಣ್ಣ ಸಂಘಟನಾಕಾರ  ಸಿದ್ದ ಬಸವಯ್ಯ , ಹರ್ಷಲಾ  ಧನ್ಯರಾಜ್ , ಸಂದೇಶ್  ಬಲ್ಲಾಳ್ , ಕ್ರೀಡಾ  ಕಾರ್ಯದರ್ಶಿ ಅಶೋಕ್‌ ಪುತ್ರನ್‌, ಕೋಶಾಧಿಕಾರಿ ರಮೇಶ್‌ ಎಳ್ಳೂರು ಪಾಧಿಕಾರಿಗಳಾದ  ರತನ್‌ಸುರಭಿ, ಪ್ರವೀಣ್‌ ಕಿದಿಯೂರು ಮತ್ತು ರಮೇಶ್‌ ಕಿದಿಯೂರು ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ  14 ವಲಯದ ಸದಸ್ಯರು  ಪದಾಧಿಕಾರಿಗಳು ಉಪಸ್ಥರಿದ್ದರು. ಉಡುಪಿ ವಲಯಾಧ್ಯಕ್ಷ ಸುಧೀರ್‌ ಎಂ. ಶೆಟ್ಟಿ ಸ್ವಾಗತಿಸಿದರು, ರಾಘವ್ ಸೇರಿಗಾರ ನಿರೂಪಿಸಿದರು. 

RELATED ARTICLES
- Advertisment -
Google search engine

Most Popular