ಬೆಂಗಳೂರು: ಸುಧಾರಿತ ಆರೋಗ್ಯ ಮತ್ತು ಚಿಕಿತ್ಸೆಯಲ್ಲಿಪ್ರಾವೀಣ್ಯಯಲ್ಲಿಉತ್ಕೃಷ್ಟತೆಯ ಪ್ರವರ್ತಕರಾದ ಸ್ಪರ್ಶ್ ಗ್ರೂಪ್ ಆಫ್ ಹಾಸ್ಪಿಟಲ್ಸ್ ಬೆಂಗಳೂರಿನ ಹೆಣ್ಣೂರು ಮತ್ತು ಸರ್ಜಾಪುರದಲ್ಲಿಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲು ಸಜ್ಜಾಗಿದೆ. ಈ ಅತ್ಯಾಧುನಿಕ ಸೌಲಭ್ಯವಿರುವ ಆಸ್ಪತ್ರೆಗಳು ಹೊಸ ತಂತ್ರಜ್ಞಾನ, ಪರಿಣತಿ, ಅನುಭವ ಮತ್ತು ಆರೋಗ್ಯ ರಕ್ಷ ಣೆಯಲ್ಲಿಕ್ರಾಂತಿಯನ್ನುಂಟು ಮಾಡುವ ಸ್ಪರ್ಶ್‌ನ ದೃಷ್ಟಿಕೋನಕ್ಕೆ ಸಾಕ್ಷಿಯಾಗಿವೆ. ಹೊಸ ಘಟಕಗಳು ಬೆಂಗಳೂರಿನಲ್ಲಿವೈದ್ಯಕೀಯ ಮೂಲಸೌಕರ್ಯವನ್ನು ಹೆಚ್ಚಿಸುವುದಲ್ಲದೆ, ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ, ಸ್ಥಳೀಯ ಆರ್ಥಿಕತೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ.
ಸ್ಪರ್ಶ್ ಆಸ್ಪತ್ರೆಗಳು ರೋಗಿಗಳಿಗೆ ನೋಡುವ ಸಮಗ್ರ ಚಿಕಿತ್ಸೆಯನ್ನು ಸುಧಾರಿಸಲು ಅತ್ಯಾಧನಿಕ ತಂತ್ರಜ್ಞಾವನ್ನು ಬಳಸಿಕೊಳ್ಳಲು ಬದ್ಧವಾಗಿದೆ.
ಭಾರತಕ್ಕೆ ಜಾಗತಿಕ ವೈದ್ಯಕೀಯ ನಾವೀನ್ಯತೆಯನ್ನು ತಂದು ಮುಟ್ಟಿಸುವುದು ಸ್ಪರ್ಶ್ ಕನಸಾಗಿದೆ. ಇದು ರೊಬೊಟಿಕ್ಸ್, ಎಐ-ಚಾಲಿತ ರೋಗನಿರ್ಣಯ ಮತ್ತು 3 ಡಿ-ಮುದ್ರಣ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರೊಂದಿಗೆ ಪ್ರಕಟವಾಗುತ್ತದೆ.
ಸ್ಪರ್ಶ್ ಆಸ್ಪತ್ರೆಗಳ ಸಮೂಹ ಅಧ್ಯಕ್ಷ ಮತ್ತು ಮುಖ್ಯ ಮೂಳೆ ಶಸಚಿಕಿತ್ಸಕ ಡಾ.ಶರಣ್ ಶಿವರಾಜ್ ಪಾಟೀಲ್ ಮಾತನಾಡಿ, ಸ್ಪರ್ಶ್ ಕೇವಲ ವಿಸ್ತರಣೆಯನ್ನು ಮಾತ್ರ ಲಕ್ಷ್ಯದಲ್ಲಿರಿಸಿಕೊಂಡಿಲ್ಲ. ನಾವು ಆರೋಗ್ಯ ರಕ್ಷ ಣೆ ಒದಗಿಸುವುದನ್ನೇ ಮರು ವ್ಯಾಖ್ಯಾನಿಸುತ್ತಿದ್ದೇವೆ. ರೊಬೊಟಿಕ್ ಶಸ್ತ್ರಚಿಕಿತ್ಸೆಗಳು, ಡಿಜಿಟಲ್ ಆರೋಗ್ಯ ಮತ್ತು ಮಹಿಳಾ ಮತ್ತು ಮಕ್ಕಳ ಕೇಂದ್ರದಂತಹ ಇತ್ತೀಚಿನ ವೈದ್ಯಕೀಯ ಪ್ರಗತಿಗಳನ್ನು ಸಂಯೋಜಿಸುವತ್ತ ನಮ್ಮ ಗಮನವಿದೆ, ಅದೇ ಸಮಯದಲ್ಲಿವಿಶ್ವದರ್ಜೆಯ ಆರೋಗ್ಯ ರಕ್ಷ ಣೆಯು ಪ್ರತಿಯೊಬ್ಬ ವ್ಯಕ್ತಿಗೆ ತಲುಪುವಂತೆ ನೋಡಿಕೊಳ್ಳುತ್ತೇವೆ. ಪ್ರಪಂಚದ ಎಲ್ಲಿಯಾದರೂ ಏನನ್ನಾದರೂ ಮಾಡಲು ಸಾಧ್ಯವಾದರೆ, ಅದು ಸ್ಪರ್ಶದಲ್ಲಿಸಾಧ್ಯವಾಗಬೇಕು.
ಸ್ಪರ್ಶ್ ಗ್ರೂಪ್ ಆಫ್ ಹಾಸ್ಪಿಟಲ್ಸ್ ಮಲ್ಟಿ ಸ್ಪೆಷಾಲಿಟಿ ಆರೈಕೆಯಲ್ಲಿ ತನ್ನನ್ನು ಮೂಂಚೂಣಿಯಲ್ಲಿದೆ.ತನ್ನ ಸಂಪರ್ಕ ಜಾಲದಲ್ಲಿ 1,700+ ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಗಳನ್ನು ಸ್ಥಾಪಿಸುವ ದೀರ್ಘಕಾಲೀನ
ಮುಂಗಾಣ್ಕೆಯನ್ನು ಸ್ಪರ್ಶ್ ಹೊಂದಿದೆ. ಇದು ನಮ್ಮ ತಜ್ಞತೆ, ವಿಶೇಷತೆ,ಬದ್ಧತೆಯಿಂದ ಸಾಧ್ಯವಾಗಿದೆ. ಮೂಳೆಚಿಕಿತ್ಸೆ, ನರವಿಜ್ಞಾನ, ಹೃದಯ ವಿಜ್ಞಾನ, ಆಂಕೊಲಾಜಿ, ಅಂಗಾಂಗ ಕಸಿ ಮತ್ತು ಹೆಚ್ಚಿನವುಗಳಲ್ಲಿಪರಿಣತಿಗೆ ಹೆಸರುವಾಸಿಯಾಗಿದೆ. ಹೆಣ್ಣೂರು ಮತ್ತು ಸರ್ಜಾಪುರ ಸೌಲಭ್ಯಗಳು ವಿಶೇಷ ಚಿಕಿತ್ಸಾ ಕಾರ್ಯಕ್ರಮಗಳು ಮತ್ತು ಸಂಶೋಧನೆ ಚಾಲಿತ ರೋಗಿಗಳ ಆರೈಕೆಯನ್ನು ಹೆಚ್ಚಿಸುತ್ತವೆ.
ಹೊಸ ಘಟಕಗಳ ಪ್ರಾರಂಭವು ಬೆಂಗಳೂರಿನ ವೇಗವಾಗಿ ಬೆಳೆಯುತ್ತಿರುವ ಸಮುದಾಯಗಳ ವಿಕಸನಗೊಳ್ಳುತ್ತಿರುವ ಆರೋಗ್ಯ ಅಗತ್ಯಗಳನ್ನು ಪೂರೈಸುವಲ್ಲಿಒಂದು ಕಾರ್ಯತಂತ್ರದ ಹೆಜ್ಜೆಯಾಗಿದೆ. ಹೊಸ ಘಟಕಗಳು ಸುಧಾರಿತ ಸಂಶೋಧನೆ ಮತ್ತು ಅಭಿವೃದ್ಧಿಯ ಬೆಂಬಲದೊಂದಿಗೆ ವೈಯಕ್ತಿಕಗೊಳಿಸಿದ ಮತ್ತು ಡೇಟಾ-ಚಾಲಿತ ಚಿಕಿತ್ಸಾ ಯೋಜನೆಗಳನ್ನು ಸಹ ನೀಡುತ್ತವೆ. ವಿಶೇಷ ಆರೈಕೆಯಲ್ಲಿನ ಅಂತರವನ್ನು ಕಡಿಮೆ ಮಾಡುವುದು, ವಿಶ್ವದರ್ಜೆಯ ಚಿಕಿತ್ಸೆ ಎಲ್ಲರಿಗೂ ಲಭ್ಯವಾಗುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ವೈದ್ಯ ಬಳಗದ ಉದ್ದೇಶವಾಗಿದೆ.
ನಾವೀನ್ಯತೆ ಒಂದು ಸವಲತ್ತು ಆಗಬಾರದು; ಅದು ಮಾನದಂಡವಾಗಿರಬೇಕು. ನಮ್ಮ ವಿಧಾನವು ಆರೈಕೆಯನ್ನು ಹೆಚ್ಚು ಪರಿಣಾಮಕಾರಿ ಮತ್ತು ಕೈಗೆಟಕುವ ದರದಲ್ಲಿರೋಗಿಗೆ ನೀಡುವ ಚಿಕಿತ್ಸೆ ಇರಬೇಕು. ಚಿಕಿತ್ಸೆಯಿಂದ ಖಚಿತ ಮತ್ತು ಉತ್ಕೃಷ್ಠ ಫಲಿತಾಂಶಕ್ಕಾಗಿ ತಂತ್ರಜ್ಞಾನವನ್ನು ಸಂಯೋಜಿಸಬೇಕು ಹೊಸ ಘಟಕಗಳು ಪ್ರೀಮಿಯಂ ಮತ್ತು ಸುಲಭವಾಗಿ ದಕ್ಕಬಹುದಾದ ಆರೋಗ್ಯ ರಕ್ಷ ಣೆ ನೀಡಬೇಕು ಎಂಬ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಶರಣ್ ಪಾಟೀಲ್ ಹೇಳಿದರು.
ತನ್ನ ವಿಸ್ತರಣಾ ಪ್ರಯಾಣದಲ್ಲಿಮಹತ್ವದ ಹೆಜ್ಜೆಯನ್ನು ಗುರುತಿಸಿರುವ ಸ್ಪರ್ಶ್ ಗ್ರೂಪ್ ಆಫ್ ಹಾಸ್ಪಿಟಲ್ಸ್ ತನ್ನ ಸಂಪರ್ಕ ಜಾಲದಲ್ಲಿ1,700+ ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಗಳನ್ನು ನೆಲೆಗೊಳಿಸುವ ದೀರ್ಘಕಾಲೀನ ದೃಷ್ಟಿಕೋನವನ್ನು ಬಲಪಡಿಸುತ್ತದೆ. ಹಾಲಿ ಇರುವ 7 ಆಸ್ಪತ್ರೆಗಳ ಜೊತೆಯಲ್ಲಿಈಗ ಹೆಣ್ಣೂರು ಮತ್ತು ಸರ್ಜಾಪುರದಲ್ಲಿಹೊಸ ಘಟಕಗಳೂ ಸೇರಿ 9 ಆಗುತ್ತದೆ. ಚಿಕಿತ್ಸೆ ಹೆಚ್ಚು ನಿಖರ, ಪರಿಣಾಮಕಾರಿ ಮತ್ತು ಎಲ್ಲರಿಗೂ ಕೈಗೆಟಕುವ ದರಗಳಿರುತ್ತವೆ ಎಂಬುದನ್ನು ಸ್ಪರ್ಶ್ ಆಸ್ಪತ್ರೆಗಳ ಸಮೂಹ ಖಚಿತಪಡಿಸುತ್ತದೆ.
ಆರೋಗ್ಯ ರಕ್ಷ ಣೆಯ ಭವಿಷ್ಯವು ತಂತ್ರಜ್ಞಾನ, ಸಂಶೋಧನೆ ಮತ್ತು ಸಹಾನುಭೂತಿ ಆರೈಕೆಯ ಸಮ್ಮಿಲನವಾಗಿದೆ. ರೋಗಗಳಿಗೆ ಚಿಕಿತ್ಸೆ ನೀಡುವುದು ಮಾತ್ರವಲ್ಲದೆ ಆರೋಗ್ಯ ಸಮಸ್ಯೆಗಳನ್ನು ಮೊದಲೇ ಗುರುತಿಸುವುದು, ಚಿಕಿತ್ಸೆಯನ್ನು ವ್ಯಕ್ತಿ ವಿಶಿಷ್ಟಗೊಳಿಸುವುದು ನಮ್ಮ ಗುರಿಯಾಗಿದೆ ಎಂದು ಅವರು ತಿಳಿಸಿದರು. ಅತ್ಯಾಧುನಿಕ ತಂತ್ರಜ್ಞಾನ, ಅಸಾಧಾರಣ ಕ್ಲಿನಿಕಲ್ ಪರಿಣತಿ ಮತ್ತು ಸಂಕೀರ್ಣ ಪ್ರಕರಣಗಳನ್ನು ನಿರ್ವಹಿಸುವಲ್ಲಿಉತ್ಕೃಷ್ಟತೆಯನ್ನು ಸಂಯೋಜಿಸುವ ಮೂಲಕ ಸ್ಪರ್ಶ್ ಗ್ರೂಪ್ ಆಫ್ ಹಾಸ್ಪಿಟಲ್ಸ್ ಸುಧಾರಿತ ಆರೋಗ್ಯ ರಕ್ಷ ಣೆಯ ಹೆಗ್ಗುರುತು ತಾಣವಾಗಲು ಸಜ್ಜಾಗಿದೆ.