Wednesday, July 24, 2024
Homeರಾಷ್ಟ್ರೀಯಸ್ಪೀಕರ್‌ ಹುದ್ದೆ ತನ್ನಲ್ಲಿಯೇ ಉಳಿಸಿಕೊಳ್ಳಲು ಮುಂದಾದ ಬಿಜೆಪಿ | ಉಪ ಸ್ಪೀಕರ್‌ ಹುದ್ದೆ ಮಿತ್ರ ಪಕ್ಷಕ್ಕೆ?

ಸ್ಪೀಕರ್‌ ಹುದ್ದೆ ತನ್ನಲ್ಲಿಯೇ ಉಳಿಸಿಕೊಳ್ಳಲು ಮುಂದಾದ ಬಿಜೆಪಿ | ಉಪ ಸ್ಪೀಕರ್‌ ಹುದ್ದೆ ಮಿತ್ರ ಪಕ್ಷಕ್ಕೆ?

ನವದೆಹಲಿ: ಲೋಕಸಭಾ ಸ್ಪೀಕರ್‌ ಹುದ್ದೆ ತನ್ನ ಬಳಿಯೇ ಉಳಿಸಿಕೊಳ್ಳಲು ಬಿಜೆಪಿ ಮುಂದಾಗಿದೆ ಎಂದು ವರದಿಯಾಗಿದೆ. ಆದರೆ ಉಪ ಸ್ಪೀಕರ್‌ ಹುದ್ದೆ ಎನ್‌ಡಿಎ ಮಿತ್ರ ಪಕ್ಷಕ್ಕೆ ನೀಡಲು ಚಿಂತಿಸಿದೆ ಎನ್ನಲಾಗಿದೆ.
ಹಿಂದಿನ ಎರಡು ಅವಧಿಯಲ್ಲೂ ಬಿಜೆಪಿ ಸ್ಪೀಕರ್‌ ಹುದ್ದೆಯನ್ನು ತನ್ನಲ್ಲಿಯೇ ಉಳಿಸಿಕೊಂಡಿತ್ತು. ಇದೀಗ ಮೂರನೇ ಅವಧಿಯಲ್ಲೂ ಸ್ಪೀಕರ್‌ ಹುದ್ದೆಯನ್ನು ತನ್ನಲ್ಲಿಯೇ ಉಳಿಸಿಕೊಳ್ಳಲು ಮುಂದಾಗಿದೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರಿಗೆ ಸ್ಪೀಕರ್‌ ಹುದ್ದೆ ಆಯ್ಕೆ ಕುರಿತಂತೆ ಮಿತ್ರ ಪಕ್ಷಗಳ ಜೊತೆ ಮಾತುಕತೆ ನಡೆಸುವ ಜವಾಬ್ದಾರಿ ನೀಡಲಾಗಿದೆ. ಬಿಜೆಪಿ ಏಕಾಂಗಿಯಾಗಿ ಬಹುಮತ ಹೊಂದಿದ್ದ ಎರಡು ಅವಧಿಯಲ್ಲಿ ಸುಮಿತ್ರಾ ಮಹಾಜನ್‌ ಮತ್ತು ಓಂ ಬಿರ್ಲಾ ಸ್ಪೀಕರ್ ಆಗಿ ಆಯ್ಕೆಯಾಗಿದ್ದರು. ಇದೀಗ ಏಕಾಂಗಿಯಾಗಿ ಬಿಜೆಪಿಗೆ ಬಹುಮತ ಇಲ್ಲದಿದ್ದಾಗ ಯಾರು ಸ್ಪೀಕರ್‌ ಆಗುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ.

RELATED ARTICLES
- Advertisment -
Google search engine

Most Popular