ಉಡುಪಿ:ಪರ್ಯಾಯ ಶ್ರೀ ಪುತ್ತಿಗೆ ಮಠ ಕೃಷ್ಣ ಮಠ ಉಡುಪಿ
ವಿಶ್ವಗೀತಾ ಪರ್ಯಾಯ 2024-2026
ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿಯ ಪ್ರಯುಕ್ತ ವಿಶೇಷ ಗೋಪೂಜೆಯನ್ನು ಪರ್ಯಾಯ ಶ್ರೀ ಪುತ್ತಿಗೆಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಶ್ರೀ ಪುತ್ತಿಗೆಮಠದ ಕಿರಿಯ ಶ್ರೀಪಾದರಾದ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ನೆರವೇರಿಸಿದರು
ಶ್ರೀ ಕೃಷ್ಣಮಠದ ರಾಜಾಂಗಣದ ಆವರಣದಲ್ಲಿ ಭಕ್ತರಿಗೆ ಗೋಪೂಜೆ ಸೇವೆ ಮಾಡಲು ಪುರೋಹಿತರಾದ ಶ್ರೀ ರಾಘವೇಂದ್ರ ಕೊಡಂಚ ಇವರ ನೇತೃತ್ವದಲ್ಲಿ ಅವಕಾಶ ಕಲ್ಪಿಸಿಕೊಡಲಾಯಿತು.
ಉಡುಪಿಯ ಶ್ರೀ ಕೃಷ್ಣ ಮಠದ ಕನಕ ಗೋಪುರದ ಕೆಳಗೆ ಪರ್ಯಾಯ ಶ್ರೀ ಪುತ್ತಿಗೆ ಮಠದ ಉಭಯ ಶ್ರೀಪಾದರ ಉಪಸ್ಥಿತಿಯಲ್ಲಿ ಗೋ ಪೂಜೆಯನ್ನು ಮಾಡಲಾಯಿತು. ಮಠದ ಪುರೋಹಿತರಾದ ರಾಘವೇಂದ್ರ ಕೊಡಂಚ ಇವರು ಗೋಪೂಜೆಯನ್ನು ಮಾಡಿದರು. ನಂತರ ರಥಬೀದಿಯಲ್ಲಿ ಭವ್ಯ ಗೋಮೆರವಣಿಗೆ ನಡೆಯಿತು. ರಾಜಾಂಗಣದಲ್ಲಿ ಸಾಮೂಹಿಕ ಗೋಪುಜಾ ಕಾರ್ಯಕ್ರಮ ನೆರವೇರಿತು. ನಂತರ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಗೋವಿನ ಮಹತ್ವದ ಬಗ್ಗೆ ಅನುಗ್ರಹ ಸಂದೇಶ ನೀಡಿದರು.