Sunday, July 14, 2024
Homeರಾಜ್ಯಮಂಗಳೂರು ವಿವಿಯಲ್ಲಿ ಪಾವಂಜೆ ಪೀಠದಿಂದ ವಿಶೇಷೋಪನ್ಯಾಸ ಚಿತ್ರಕಲೆಯಿಂದ ಚಿಕಿತ್ಸೆ : ಜಯಶ್ರೀ ಶರ್ಮ

ಮಂಗಳೂರು ವಿವಿಯಲ್ಲಿ ಪಾವಂಜೆ ಪೀಠದಿಂದ ವಿಶೇಷೋಪನ್ಯಾಸ ಚಿತ್ರಕಲೆಯಿಂದ ಚಿಕಿತ್ಸೆ : ಜಯಶ್ರೀ ಶರ್ಮ

ಕೊಣಾಜೆ:‌ ಚಿತ್ರಕಲೆಯಲ್ಲಿ‌ ಬಣ್ಣಗಳ ಪಾತ್ರ ಮಹತ್ತರವಾದುದು. ಕಲರ್ ಥೆರಪಿ ಚಿಕಿತ್ಸೆಯು ಇತ್ತೀಚೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಮುನ್ನಲೆಗೆ ಬರುತ್ತಿದ್ದು ಸಂಗೀತದಂತೆ ಚಿತ್ರಕಲೆಯೂ ವೈದ್ಯ ಚಿಕಿತ್ಸೆಗೆ ಬಳಕೆಯಾಗತೊಡಗಿದೆ. ಮುಂದಿನ ದಿನಗಳಲ್ಲಿ ಇದು ಪರಿಣಾಮಕಾರಿಯಾಗಬಹುದು. ಆಸಕ್ತಿಯೊಂದಿದ್ದರೆ ಇಂದಿನ ಆಧುನಿಕತೆಯಲ್ಲಿ ಮೊಬೈಲ್, ಯೂಟ್ಯೂಬ್, ತಂತ್ರಜ್ಞಾನಗಳ ಮೂಲಕ ಹಲವು ಬಗೆಯ ಚಿತ್ರಕಲಾ ಪ್ರಕಾರಗಳನ್ನು ಅಭ್ಯಾಸ ಮಾಡಬಹುದು ಎಂದು ಚಿತ್ರಕಲಾವಿದೆ ಜಯಶ್ರೀ ಶರ್ಮಾ ಮಂಗಳೂರು ಅವರು ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿವಿಯ ಎನ್ ಜಿ ಪಾವಂಜೆ ಲಲಿತಾ ಕಲಾ ಪೀಠ ಹಾಗೂ ವಿಶ್ವವಿದ್ಯಾಲಯ ಪ್ರಥಮ ದರ್ಜೆ ಕಾಲೇಜು, ಮಂಗಳಗೋತ್ರಿಯ ಕನ್ನಡ ಸಂಘದ ಆಶ್ರಯದಲ್ಲಿ ಗುರುವಾರ ಯಕ್ಷಗಾನ‌ ಕಲಾಕೇಂದ್ರದಲ್ಲಿ ನಡೆದ‌ ‘ಚಿತ್ರಕಲೆಯ ಮಹತ್ವ’ ಎಂಬ ವಿಷಯದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಚಿತ್ರಕಲೆಯ ಹವ್ಯಾಸವು‌ ನಮ್ಮಲ್ಲಿ ಧನಾತ್ಮಕ ಚಿಂತನೆ, ಏಕಾಗ್ರತೆ, ತಾಳ್ಮೆ, ಕೌಶಲ,‌ ಸೃಜನಶೀಲತೆಯನ್ನು ಬೆಳೆಸುವುದರೊಂದಿಗೆ ಬೌದ್ಧಿಕ, ಶಾರೀರಿಕ ಹಾಗೂ ಸಮಾಜದ‌ ಸ್ವಾಸ್ಥ್ಯವನ್ನು ಕಾಪಾಡುವಲ್ಲಿಯೂ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ವಿದ್ಯಾರ್ಥಿಗಳು ಚಿತ್ರಕಲೆಯ ಮಹತ್ವವನ್ನು ಅರಿತುಕೊಂಡು ಈ ಕ್ಷೇತ್ರದಲ್ಲಿ ಹೆಚ್ಚೆಚ್ಚು ಸಾಧನೆ ಮಾಡಬೇಕು

ಎನ್ ಜಿ ಪಾವಂಜೆ ಲಲಿತಾ ಕಲಾ ಪೀಠದ ಸಂಯೋಜಕರಾದ ಡಾ.ಧನಂಜಯ ಕುಂಬ್ಳೆ ಅವರು ಮಾತನಾಡಿ ಚಿತ್ರಕಲೆಯನ್ನು ಆಸ್ವಾದಿಸುವ ಮನಸ್ಸು ನಮ್ಮದಾಗಬೇಕು. ಜೊತೆಗೆ ನಾವು ಯಾವುದಾದರೊಂದು ಲಲಿತಕಲೆಗಳಲ್ಲಿ ತೊಡಗಿಸಿಕೊಂಡರೆ ಅದು ನಮ್ಮ‌ ಬದುಕನ್ನು ಸುಂದರಗೊಳಿಸುತ್ತದೆ. ಕಲ್ಪನಾಶಕ್ತಿಯನ್ನು ವಿಸ್ತರಿಸುವ ಸೌಂದರ್ಯ ಪ್ರಜ್ಞೆಯನ್ನು ಉಂಟುಮಾಡುವ ಉದ್ದೇಶದಿಂದ ಎನ್ ಜಿ ಪಾವಂಜೆ ಲಲಿತ ಕಲೆ ಪೀಠವು ಚಿತ್ರಕಲೆಗೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುನ್ನಡೆಯುತ್ತಿದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳಗಂಗೋತ್ರಿ ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಪ್ರಿಯಾ ಅವರು ಮಾತನಾಡಿ, ಚಿತ್ರಕಲೆಯ ಮಹತ್ವತೆಯನ್ನು ಅರಿಯುವ ಇಂತಹ ಕಾರ್ಯಕ್ರಮಗಳು ಅತ್ಯಂತ ಪರಿಣಾಮಕಾರಿಯಾಗಿದೆ. ವಿದ್ಯಾರ್ಥಿಗಳು ಇದರ ಸದುಯೋಗಪಡಿಸಿಕೊಳ್ಳಬೇಕು ಎಂದರು.
ಕಾಲೇಜಿನ ಉಪನ್ಯಾಸಕಿ ಸಹನಾ ಸ್ವಾಗತಿಸಿದರು. ಉಪನ್ಯಾಸಕಿ ಕಾಜಲ್ ಅವರು ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಪೂರ್ಣ ನಿರೂಪಿಸಿ ಚೈತ್ರ ವಂದಿಸಿದರು.

RELATED ARTICLES
- Advertisment -
Google search engine

Most Popular