ಮದುವೆ ಪ್ರತಿಯೊಬ್ಬರ ಜೀವನದ ಮಹತ್ವದ ತಿರುವಿನ ಘಟನೆ. ಪ್ರತಿಯೊಬ್ಬರಿಗೂ ಮದುವೆ ಬಗ್ಗೆ ತಮ್ಮದೇ ಆದ ಕನಸುಗಳಿರುತ್ತವೆ. ಕೆಲವರಿಗೆ ಅದ್ದೂರಿ ಮದುವೆಯ ಕನಸಿದ್ದರೆ, ಕೆಲವರಿಗೆ ಸರಳ ಮದುವೆಯ ಆಸೆ ಇರುತ್ತದೆ. ಇನ್ನು ಕೆಲವರಿಗೆ ಎಲ್ಲರಿಗಿಂತ ಭಿನ್ನವಾಗಿ ವಿವಾಹವಾಗಬೇಕೆಂಬ ಮಹಾದಾಸೆ ಇರುತ್ತದೆ. ಆ ಪ್ರಕಾರ, ಇಲ್ಲೊಂದು ಜೋಡಿ ಕೆಂಪು ಸಮುದ್ರದ ಆಳದಲ್ಲಿ ಮದುವೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸೌದಿ ಅರೇಬಿಯಾದ ಜೋಡಿಯೊಂದು ಕೆಂಪು ಸಮುದ್ರದ ನೀರಿನಾಳದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸೌದಿಯ ಹಸನ್ ಅಬು ಅಲ್ ಓಲಾ ಮತ್ತು ಯಾಸ್ಮಿನ್ ಕೆಂಪು ಸಮುದ್ರದ ಆಳದಲ್ಲಿ ವಿಶಿಷ್ಟ ರೀತಿಯಲ್ಲಿ ಮದುವೆಯಾಗಿದ್ದು, ಇದು ಸೌದಿ ಅರೇಬಿಯಾದ ಮೊದಲ ಸಮುದ್ರದಾಳದಲ್ಲಿ ನಡೆದ ಮದುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಚ್ಚರಿಯ ಸಂಗತಿಯೆಂದರೆ ಈ ಜೋಡಿ ಎಲ್ಲರಿಗಿಂತಲೂ ವಿಭಿನ್ನವಾಗಿ ವಿವಾಹವಾಗಿದ್ದಾರೆ. ಭೂಮಿ ಮೇಲೆ ವಿವಾಹವಾಗಲು ಕಷ್ಟ ಪಡುವ ಕಾಲದಲ್ಲಿ ಈ ಜೋಡಿ ಆಳ ಸಮುದ್ರದಲ್ಲಿ ವಿವಾಹವಾಗಿದ್ದಾರೆ. ಕ್ಯಾಪ್ಟನ್ ಫೈಸಲ್ ಫ್ಲೆಂಬನ್ ನೇತೃತ್ವದ ಸ್ಥಳೀಯ ಡೈವಿಂಗ್ ಗ್ರೂಪ್ ಈ ಜೋಡಿಯನ್ನು ಆಳ ಸಮುದ್ರಕ್ಕೆ ಕರೆದೊಯ್ದು ವಿವಾಹ ಮಾಡಿಸಿದೆ.
ವಿವಾಹದ ಬಳಿಕ ಮಾತನಾಡಿದ ವರ, ‘ಇದು ನಿಜಕ್ಕೂ ಅಚ್ಚರಿಯ ಸಂಗತಿ. ನಾವು ವಿವಾಹವಾಗಲು ಬಯಸಿದಾಗ ಕ್ಯಾಪ್ಟನ್ ಫೈಸಲ್ ಮತ್ತು ತಂಡ ಸಮುದ್ರದ ಆಳದಲ್ಲಿ ವಿವಾಹವಾಗಲು ಪ್ರೋತ್ಸಾಹಿಸಿದರು. ಇದು ಸುಂದರವಾದ ಮತ್ತು ಮರೆಯಲಾಗದ ಅನುಭವ ನೀಡಿದೆ’ ಎಂದು ಹೇಳಿದ್ದಾರೆ.
ಕೆಂಪು ಸಮುದ್ರದ ಆಳದಲ್ಲಿ ವಿವಾಹವಾದ ಜೋಡಿ! | ಖುಷಿಯಲ್ಲಿ ತೇಲಾಡಿದ ವಧು-ವರ
RELATED ARTICLES