ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿಯ ಸಜೀಪ ಮುನ್ನೂರು ವಾರ್ಷಿಕ ಪಂಚಮಿ ಷಷ್ಟಿಯ ಅಂಗವಾಗಿ ಶುಕ್ರವಾರದಂದು ಸಜೀಪ ಮಾಗಣೆಯ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಶ್ರೀ ಶಾಸ್ತ್ರರ ದೇವರಿಗೆ ವಿಶೇಷ ಪೂಜೆ ಶ್ರೀ ನಾಗ ದೇವರಿಗೆ ಫಲಪಂಚಾಮೃತ ಅಭಿಷೇಕ ನಾಗತಂಬಿಲ ಗಣಪತಿ ಹೋಮ ಶೀ ಸುಬ್ರಹ್ಮಣ್ಯ ದೇವರಿಗೆ ಫಲಪಂಚಾಮೃತ ಅಭಿಷೇಕ ಪವಮಾನ ಸೂಕ್ತ ಅಭಿಷೇಕ ಕಲ್ಪೋಕ್ತ ಪೂಜೆ ಪ್ರಸನ್ನ ಪೂಜೆ ಮಹಾಮಂಗಳಾರತಿ ರಾತ್ರಿ ರಂಗ ಪೂಜೆ ಜರಗಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯ ಶಂಕರ ಬಾಶ್ರಿತಾಯ. ಮೆಸ್ಕಾಂ ಬಂಟ್ವಾಳ ಕಾರ್ಯ ನಿರ್ವಾಹಕ ಅಭಿಯಂತರ ನಾರಾಯಣ ಭಟ್. ಮಾಜಿ ಶಾಸಕ ಕೆ ಪದ್ಮನಾಭ ಕೊಟ್ಟಾರಿ ಎಂ ಕೆ ಶಿವ. ಹರಿಪ್ರಸಾದ್ ಭಂಡಾರಿ. ಶ್ರೀನಿವಾಸ್ ನಾಯಕ್. ರಾಜು ಪೂಜಾರಿ. ಚಿತ್ರ ಎಸ್ ರೈ. ಮೊದಲಾದವರು ಉಪಸ್ಥಿತರಿದ್ದರು.