Saturday, July 20, 2024
Homeರಾಜ್ಯರೇಡಿಯೊ ಮಣಿಪಾಲದಲ್ಲಿ ವಿಶ್ವ ಸೈಕಲ್ ದಿನ ಪ್ರಯುಕ್ತ ವಿಶೇಷ ಕಾರ್ಯಕ್ರಮ

ರೇಡಿಯೊ ಮಣಿಪಾಲದಲ್ಲಿ ವಿಶ್ವ ಸೈಕಲ್ ದಿನ ಪ್ರಯುಕ್ತ ವಿಶೇಷ ಕಾರ್ಯಕ್ರಮ

ಮಣಿಪಾಲದ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ರೇಡಿಯೋ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದಲ್ಲಿ ವಿಶ್ವ ಸೈಕಲ್ ದಿನದ ಹಿನ್ನೆಲೆಯಲ್ಲಿ ವಿಶೇಷ ಸಂದರ್ಶನ ಮೂಡಿಬರಲಿದೆ. ಈ ಕಾರ್ಯಕ್ರಮದಲ್ಲಿ 76 ಬಡಗಬೆಟ್ಟು ಜಗನ್ನಾಥ ನಗರದ ಸೈಕಲ್ ಸವಾರರಾದ ಶ್ರೀನಿವಾಸ ಶೆಟ್ಟಿಗಾರ್ ಮತ್ತು ವೆಂಕಟೇಶ್ ಕುಕ್ಕಿಕಟ್ಟೆ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮ ಜೂನ್ ತಿಂಗಳ 3ರಂದು ಸೋಮವಾರ ಸಂಜೆ 6.15ಕ್ಕೆ ಪ್ರಸಾರವಾಗಲಿದೆ ಮತ್ತು ಜೂನ್ 4ರಂದು ಮಂಗಳವಾರ ಮಧ್ಯಾಹ್ನ 2.15ಕ್ಕೆ ಇದರ ಮರು ಪ್ರಸಾರವಿರುತ್ತದೆ. ರೇಡಿಯೊ ಮಾತ್ರವಲ್ಲದೆ ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal ಮತ್ತು ಐಫೋನ್ ನ https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್ಲೋಡ್ ಮಾಡಿ ಈ ಕಾರ್ಯಕ್ರಮ ಕೇಳಬಹುದಾಗಿದೆ ಎಂದು ಮಣಿಪಾಲ ಮಾಹೆಯ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಕ್ಯಾಂಪಸ್ ನಲ್ಲಿರುವ ರೇಡಿಯೊ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದ ಪ್ರಕಟಣೆ ತಿಳಿಸಿದೆ.

RELATED ARTICLES
- Advertisment -
Google search engine

Most Popular