ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನಕ್ಕೆ ಭಾರತೀಯ ಕಬಡ್ಡಿ ತಂಡದ ಕು.ಧನಲಕ್ಷ್ಮೀ ಪೂಜಾರಿ ಇಂದು ಭೇಟಿ ನೀಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಆಡಳ್ತೇದಾರರಾದ ಶಿವಪ್ರಸಾದ್ ಅಜಿಲರು ಉಪಸ್ಥಿತರಿದ್ದು ಈಕೆಯನ್ನು ಗೌರವಿಸಿದರು. ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್, ವಿಶ್ವನಾಥ ಬಂಗೇರ, ಧರ್ಣಪ್ಪ ಪೂಜಾರಿ ದೋರಿಂಜ, ಸುಂದರ ಪೂಜಾರಿ ನೀರಲ್ಕೆ, ಆನಂದ ಪೂಜಾರಿ ನೀರಲ್ಕೆ ಭಾಗವಹಿಸಿದ್ದರು.

