ಲಾರಿಗಳಿಗೆ ಸ್ಪೀಡ್​ ಬ್ರೇಕರ್​ ಕಡ್ಡಾಯ

0
53

ಉಡುಪಿ : ಆರು ಚಕ್ರ ಮತ್ತು ಅದಕ್ಕಿಂತ ಹೆಚ್ಚಿನ ಚಕ್ರಗಳನ್ನು ಹೊಂದಿರುವ ಮರಳು, ಕೆಂಪುಕಲ್ಲು ಮತ್ತಿತರ ಸಾಮಗ್ರಿ ಸಾಗಾಟದ ವಾಹನಗಳು ಕಡ್ಡಾಯವಾಗಿ ವೇಗ ನಿಯಂತ್ರಕ ಅಳವಡಿಸಬೇಕು ಎಂದು ಎಸ್ಪಿ ಹರಿರಾಂ ಶಂಕರ್​ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅಧ್ಯಕ್ಷತೆಯಲ್ಲಿ ನಡೆದ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯಲ್ಲಿ ಈ ರ್ನಿಣಯ ಕೈಗೊಳ್ಳಲಾಗಿದ್ದು, ವೇಗ ನಿಯಂತ್ರಕವು 60 ಕಿ.ಮೀ. ವೇಗಕ್ಕೆ ಸೀಮಿತವಾಗಿರಬೇಕು. ವೇಗ ನಿಯಂತ್ರಕ ಅಳವಡಿಕೆಗೆ 10 ದಿನಗಳ ಗಡುವನ್ನೂ ನೀಡಲಾಗಿದೆ. ಈ ಸಂಬಂಧ ಎಲ್ಲ ಲಾರಿ – ಟಿಪ್ಪರ್​ ಚಾಲಕ ಮಾಲಕರಿಗೆ ಕರಪತ್ರಗಳನ್ನು ಹಂಚಲಾಗುವುದು. ಜ. 20ರೊಳಗೆ ಎಲ್ಲ ಬಸ್​ ಗಳೂ ಕಡ್ಡಾಯವಾಗಿ ಬಾಗಿಲು ಅಳವಡಿಸಿಕೊಳ್ಳಬೇಕು. ತಪ್ಪಿದಲ್ಲಿ ದಂಡ ಸಹಿತ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here