ಮಂಗಳೂರು: ಹದಿನಾಲ್ಕನೇ ಆವೃತ್ತಿಯ ಎಸ್‍ಬಿಐ ಲೈಫ್ ಸ್ಪೆಲ್ ಬೀ 2024- ‘ಬೀ ಸ್ಪೆಲ್‍ಬೌಂಡ್’ ಸ್ಪರ್ಧೆಯನ್ನು ಎಸ್‍ಬಿಐ ಲೈಫ್ ಇನ್ಶೂರೆನ್ಸ್ ಸಂಸ್ಥೆಯು ಮಿರ್ಚಿ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದೆ.
ಹಲವು ವರ್ಷಗಳಲ್ಲಿ ಭಾರತದ ಪ್ರತಿಭಾವಂತ ಯುವ ಮನಸ್ಸುಗಳ ಪ್ರತಿಭೆಯನ್ನು ಗುರುತಿಸುವ ಕೆಲಸ ಮಾಡಿರುವ ಮತ್ತು ಅವರನ್ನು ರೂಪಿಸಿರುವ ವಿನೂತನ ವೇದಿಕೆ ಆಗಿದ್ದು, ಈ ವರ್ಷ ಸ್ಪೆಲ್ಲಿಂಗ್ ಗುರುತಿಸುವ ಸ್ಪರ್ಧೆಗಿಂತ ವಿಭಿನ್ನವಾದ ರೂಪದಲ್ಲಿ ನಡೆಯಲಿದೆ.
ಯುವ ಮನಸ್ಸುಗಳನ್ನು ಭವಿಷ್ಯದ ಉತ್ತಮ ನಾಯಕರಾಗಲು ಉತ್ತೇಜನ ನೀಡುವ, ಕ್ರಿಯಾಶೀಲ ಮತ್ತು ಅಭಿವೃದ್ಧಿ ಹೊಂದುವ ಮನಸ್ಥಿತಿಯನ್ನು ಉಂಟು ಮಾಡುವ ಉದ್ದೇಶವನ್ನು ಈ ಕಾರ್ಯಕ್ರಮವು ಹೊಂದಿದೆ ಎಂದು ಕಾಪೆರ್Çರೇಟ್ ಕಮ್ಯುನಿಕೇಷನ್ಸ್ ಮತ್ತು ಸಿಎಸ್‍ಆರ್ ವಿಭಾಗದ ಚೀಫ್ ಆಫ್ ಬ್ರಾಂಡ್ ರವೀಂದ್ರ ಶರ್ಮಾ ಪ್ರಕಟಣೆಯಲ್ಲಿ ಹೇಳಿದ್ದಾರೆ. ಸ್ಪರ್ಧೆಯ 14ನೇ ಆವೃತ್ತಿಯು 30 ನಗರಗಳ 500ಕ್ಕೂ ಹೆಚ್ಚು ಶಾಲೆಗಳಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ 3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಭಾರತದಾದ್ಯಂತ ಇರುವ ವಿದ್ಯಾರ್ಥಿಗಳಲ್ಲಿ ಅಗ್ರ 50 ಸ್ಥಾನವನ್ನು ಪಡೆಯುವ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಫೈನಲ್‍ಗೆ ಹೋಗುವ ಅರ್ಹತೆ ಗಳಿಸುತ್ತಾರೆ. ಅಂತಿಮ ಹಂತದಲ್ಲಿ ಗೆಲುವು ಪಡೆಯುವ ವಿಜೇತರನ್ನು ‘ಸ್ಪೆಲ್‍ಮಾಸ್ಟರ್ ಆಫ್ ಇಂಡಿಯಾ 2024’ ಎಂಬ ಬಿರುದು ನೀಡಿ ಗೌರವಿಸಲಾಗುತ್ತದೆ.
ಅವರು ರಾಷ್ಟ್ರಮಟ್ಟದಲ್ಲಿ ದೊಡ್ಡ ಹಂತದಲ್ಲಿ ಮನ್ನಣೆಗೆ ಪಾತ್ರರಾಗುತ್ತಾರೆ. ಪ್ರಶಸ್ತಿ, ಬಿರುದಿನ ಜೊತೆಗೆ ವಿಜೇತರು ರೂ.1 ಲಕ್ಷ ನಗದು ಬಹುಮಾನವನ್ನು ಮತ್ತು ಹಾಂಗ್ ಕಾಂಗ್ ನ ಡಿಸ್ನಿಲ್ಯಾಂಡ್ ಗೆ ಉಚಿತ ಪ್ರವಾಸ ಹೋಗಿಬರುವ ಅವಕಾಶವನ್ನು ಗಳಿಸಲಿದ್ದಾರೆ ಎಂದು ವಿವರಿಸಿದ್ದಾರೆ.
ಸ್ಪೆಲ್ ಬೀ 2024 ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ಸ್ಪೆಲ್ಲಿಂಗ್ ಗಳನ್ನು ಹೇಳುವ ಸ್ಪೆಲ್ಲಿಂಗ್ ಪ್ರತಿಭೆಗಳನ್ನು ಹುಡುಕುವುದರ ಕಡೆಗೆ ಗಮನ ಕೇಂದ್ರೀಕರಿಸುತ್ತದೆ. ಜೊತೆಗೆ ಭವಿಷ್ಯದ ನಾಯಕರನ್ನು ರೂಪಿಸುವ ಕಡೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ ಎಂದು ಹೇಳಿದ್ದಾರೆ.