Thursday, July 25, 2024
Homeರಾಜ್ಯಸ್ಪೈಸ್‌ ಜೆಟ್‌ ಏರ್‌ಲೈನ್ಸ್‌ ಎಡವಟ್ಟು | ಬೆಂಗಳೂರಿಗೆ ಬರಲಿದ್ದ ವಿಮಾನದಲ್ಲಿ ಪ್ರಯಾಣಿಕರು 12 ಗಂಟೆ ಲಾಕ್!

ಸ್ಪೈಸ್‌ ಜೆಟ್‌ ಏರ್‌ಲೈನ್ಸ್‌ ಎಡವಟ್ಟು | ಬೆಂಗಳೂರಿಗೆ ಬರಲಿದ್ದ ವಿಮಾನದಲ್ಲಿ ಪ್ರಯಾಣಿಕರು 12 ಗಂಟೆ ಲಾಕ್!

ಬೆಂಗಳೂರು: ಸ್ಪೈಸ್‌ ಜೆಟ್‌ ಏರ್‌ಲೈನ್ಸ್‌ ಸಿಬ್ಬಂದಿಯ ಎಡವಟ್ಟಿನಿಂದಾಗಿ ಟೇಕಾಫ್‌ ಆಗದ ವಿಮಾನದಲ್ಲೇ ಲಾಕ್‌ ಆದ ಪ್ರಸಂಗ ನಡೆದಿದೆ. 100ಕ್ಕೂ ಹೆಚ್ಚು ಪ್ರಯಾಣಿಕರು ವಿಮಾನದಲ್ಲೇ ಲಾಕ್‌ ಆಗಿದ್ದಾರೆ. ಪ್ರಯಾಣಿಕರು ಆತಂಕಗೊಂಡಿದ್ದು, ಹೈಜಾಕ್‌ ಆಗಿ ಕೂರಿಸಿದ್ದಾರೆಂದು ಭಾವಿಸಿದ್ದರು.
ಶುಕ್ರವಾರ ಸಂಜೆ 7 ಗಂಟೆಯಿಂದ ಪ್ರಯಾಣಿಕರು ಫ್ಲೈಟ್‌ನಲ್ಲೇ ಕುಳಿತಿದ್ದರು. ನಿದ್ದೆ, ಊಟ ಇಲ್ಲದೆ ವಿಮಾನದಲ್ಲಿ ಪ್ರಯಾಣಿಕರು ಪರದಾಡಿದರು. SG8151 ಸ್ಪೈಸ್‌ ಜೆಟ್‌ ವಿಮಾನ ದೆಹಲಿಯಿಂದ ಬೆಂಗಳೂರಿಗೆ ಬರಬೇಕಾಗಿತ್ತು. ಟರ್ಮಿನಲ್‌ 3ರಿಂದ ರಾತ್ರಿ 7.40ಕ್ಕೆ ವಿಮಾನ ಹಾರಾಟ ಮಾಡಬೇಕಾಗಿತ್ತು. ಆದರೆ ವಿಮಾನ ಹಾರಾಟ ಆರಂಭಿಸದೆ ರನ್‌ ವೇನಲ್ಲೇ ನಿಲ್ಲಿಸಿಕೊಳ್ಳಲಾಗಿತ್ತು. ಇದಕ್ಕೆ ಸ್ಪೈಸ್‌ ಜೆಟ್‌ ಕಾರಣ ಕೂಡ ನೀಡಿರಲಿಲ್ಲ. ಇದರಿಂದ ಆತಂಕಗೊಂಡ ಪ್ರಯಾಣಿಕರು ವಿಮಾನದೊಳಗೆ ಕುಳಿತು ಪ್ರತಿಭಟನೆ ನಡೆಸಿದರು.


ತಾಂತ್ರಿಕ ಸಮಸ್ಯೆಯಿಂದ ವಿಮಾನ ಟೇಕಾಫ್‌ ಆಗಿರಲಿಲ್ಲ ಎನ್ನಲಾಗಿದೆ. ಕೊನೆಗೆ ತಾಂತ್ರಿಕ ಸಮಸ್ಯೆ ನಿವಾರಿಸಿ ಇಂದು ಬೆಳಿಗ್ಗೆ ವಿಮಾನ ಬೆಂಗಳೂರಿಗೆ ಪ್ರಯಾಣಿಸಿದೆ.

RELATED ARTICLES
- Advertisment -
Google search engine

Most Popular