ಕಾಸರಗೋಡು ನಾಗರಕಟ್ಟೆ : ಶ್ರೀ ಬಿಕ್ಷು ಲಕ್ಷಣಾನಂದ ಸ್ವಾಮೀಜಿ ಜನ್ಮ ದಿನೋತ್ಸವ ಪ್ರಯುಕ್ತ ದಿನಾಂಕ 18.5.2025.ಆದಿತ್ಯವಾರ ದಿನಪೂರ್ತಿ ನಡೆಯಲಿರುವ ಬ್ರಿಹತ್ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ, ಶ್ರೀ ಶಾರದಾಂಬಭಜನಾಶ್ರಮ ನಾಗರಕಟ್ಟೆ ಇಲ್ಲಿ ಇಂದು ಭಾನುವಾರ ನಡೆಯಿತು.
ಶ್ರೀ ಭಿಕ್ಷು ಸ್ವಾಮೀಜಿ ಸೇವಾ ಸಮಾಜ ಪ್ರದಾನ ಕಾರ್ಯದರ್ಶಿ ದಿನೇಶ್ ನಾಗರಕಟ್ಟೆ ವಿಶ್ವ ರಾಮಕ್ಷತ್ರಿಯ ಮಹಾಸಂಘ ಉಪ ಸಂಪಾದಕರಾದ ಡಾ. ವಾಮನ್ ರಾವ್ ಬೇಕಲ್ ಇವರೀಗೆ ಆಮಂತ್ರಣ ಪತ್ರಿಕೆ ನೀಡಿ ಬಿಡುಗಡೆ ಗೊಳಿಸಿದರು. 18-05-2025 ರ ಬೆಳಿಗ್ಗೆ 7ಗಂಟೆಗೆ ಗಣಹೋಮ, 11.30ಕ್ಕೆ ಸಾಮೂಹಿಕ ಸತ್ಯನಾರಾಯಣ ಪೂಜೆ, 12.30ಮಹಾಪೂಜೆ, ಅನ್ನ ಪ್ರಸಾದ ವಿತರಣೆ ಯೊಂದಿಗೆ 2.30 ಕ್ಕೆ ನಡೆಯುವ ಸಭಾ ಕಾರ್ಯಕ್ರಮ ದಲ್ಲಿ ಭಿಕ್ಷು ಸಮಾಜದ ಮಕ್ಕಳಿಗೆ “ಉಚಿತ ಪುಸ್ತಕ ವಿತರಣೆ, ನಡೆಯಲಿರುವುದು.
ಸಂಜೆ 7ಗಂಟೆಗೆ ಭಜನಾಶ್ರಮ ಸಂಘದ ಭಜನೆಯೊಂದಿಗೆ, 8ಗಂಟೆಗೆ ಸ್ವಾಮಿಜಿಯವರ ಪಾದ ಪೂಜೆ ನಡೆಯಲಿರುವದು. ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ, ವಿಶ್ವನಾಥ ಮಾಸ್ಟರ್ ಕೋಟೆಕಣಿ, ಪಾಂಡುರಂಗ ವಿದ್ಯಾನಗರ, ಪಾಂಡುರಂಗ ಸಿರಿಬಾಗಿಲು, ದಿವಾಕರ ಮೀಪುಗುರಿ, ಪ್ರದೀಪ್ ನಾಯ್ಕ್ ನಾಗರಕಟ್ಟೆ, ಮುರಳಿ ಪಾರೆಕಟ್ಟೆ, ಮೋಹನ್ರಾಜ್ ಕೂಡ್ಲು, ಲಲಿತಾ ಕೇಶವ್, ಪ್ರಜ್ವಲ್ ನಾಯ್ಕ್ ನಗರಸಭಾ ಸದಸ್ಯೆ ರಂಜೀತ ಮೋಹನ್ದಾಸ್, ಗೀತಾ ಪುರುಷೋತ್ತಮ್, ಮಣಿ ಸೂರ್ಲು, ವಿನೋದ್ ನಾಗರಕಟ್ಟೆ, ಪುನೀತ್, ಮೋನಿಶ್ ಇದ್ದರು. ದಿನೇಶ್ ನಾಗರಕಟ್ಟೆ ಸ್ವಾಗತಿಸಿ, ಪ್ರದೀಪ್ ನಾಯ್ಕ್ ವಂದಿಸಿದರು, ರಂಜೀತ ಮೋಹನ್ ದಾಸ್ ಕಾರ್ಯಕ್ರಮ ನಿರ್ವಹಿಸಿದರು.