ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗ ದಾರಗ ಆಲಡೆ ಬಸ್ತಿ ಪಡ್ಡು ಹೆಜಮಾಡಿ – ಇದರ ವರ್ಷಾವಧಿ ಮಹೋತ್ಸವವು ಜರಗಲಿರುವುದು.
ಭಕ್ತಾದಿಗಳು ಬಂಧುಬಾಂಧವರ ಸಹಿತ ಬಂದು ಆಲಡೆ ಆಯನದಲ್ಲಿ ಭಾಗಿಗಳಾಗಿ ಸಿರಿ ಮುಡಿ ಗಂಧ ಪ್ರಸಾದ ಸ್ವೀಕರಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುತ್ತೇನೆ.
ತಾ.07-03-2025 ಶುಕ್ರವಾರ ಬೆಳಿಗ್ಗೆ ಗಂಟೆ 7.00ಕ್ಕೆ ಸ್ವಸ್ತಿ ಪುಣ್ಯಾಹ, ನವಕ ಪ್ರಧಾನ. ನಾಗದೇವರಿಗೆ ಪಂಚಾಮೃತ ಅಭಿಷೇಕ.ಸಂಜೆ ಗಂಟೆ 6.30ರಿಂದ 7.30ರವರೆಗೆ ನಿತ್ಯಪೂಜೆ, ಹೂವಿನ ಪೂಜೆ, ರಾತ್ರಿ ಗಂಟೆ 8.00ರಿಂದ ಕುಮಾರ ದರ್ಶನ, ಚಿಂತ್ರಿ ಹಾಕುವುದು. ತಾ 08-03-2025ರಿಂದ 15-03-2025ರವರೆಗೆ ಪ್ರತೀದಿನ ಸಂಜೆ ಗಂಟೆ 6.00ರಿಂದ 8.00ರ ವರೆಗೆ ಹೂವಿನ ಪೂಜೆ, ಉತ್ಸವ ಪೂಜೆ ಮತ್ತು ವಿವಿಧ ಭಜನಾ ಮಂಡಳಿಗಳಿಂದ ಭಜನೆ ಸೇವೆ.ತಾ 12-03-2025ಬುಧವಾರ ಸಂಜೆ ಗಂಟೆ 6.00ಕ್ಕೆ ವಾಸ್ತು ಪೂಜೆ, ವಾಸ್ತು ಹೋಮ.ತಾ.13-03-2025 ಗುರುವಾರ ಬೆಳಿಗ್ಗೆ ಗಂಟೆ 8.00ಕ್ಕೆ ದೇವತಾ ಪ್ರಾರ್ಥನೆ. ಗಂಟೆ 9.00ಕ್ಕೆ ಪುಣ್ಯಾಹ, ನವಕ ಪ್ರಧಾನ, ಗಂಟೆ 10.00ಕ್ಕೆ ಮಹಾಪೂಜೆ. ಗಂಟೆ 11.30ಕ್ಕೆ ಧ್ವಜಾರೋಹಣ.ರಾತ್ರಿ ಗಂಟೆ 7.00ಕ್ಕೆ ನಿತ್ಯಪೂಜೆ, ಹೂವಿನ ಪೂಜೆ. ರಾತ್ರಿ ಗಂಟೆ 8.00ಕ್ಕೆ ರಂಗ ಪೂಜೆ, ಉತ್ಸವ ಬಲಿ.ತಾ.14-03-2025ಶುಕ್ರವಾರ ಬೆಳಗ್ಗೆ 9.00ಕ್ಕೆ ನಾಗದೇವರ ಸನ್ನಿಧಿಯಲ್ಲಿ ಆಶ್ಲೇಷಾ ಬಲಿ. ಬೆಳಗ್ಗೆ ಗಂಟೆ 11.00ಕ್ಕೆ ಮಹಾ ಪೂಜೆ, ಉತ್ಸವ ಬಲಿ, ಪಲ್ಲ ಪೂಜೆ, ಮಧ್ಯಾಹ್ನ ಗಂಟೆ 1.00ಕ್ಕೆ ಮಹಾ ಅನ್ನಸಂತರ್ಪಣೆ. ಸಂಜೆ ಗಂಟೆ 6.00ಕ್ಕೆ ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಪ್ರಸಾದ ತರುವುದು. ರಾತ್ರಿ ಗಂಟೆ 8.00ಕ್ಕೆ ನಿತ್ಯ ಪೂಜೆ, ಹೂವಿನ ಪೂಜೆ.
ರಾತ್ರಿ ಗಂಟೆ 9.30ಕ್ಕೆ ಕುಮಾರ ದರ್ಶನ ಮತ್ತು ಆಯನೋತ್ಸವ ಬಲಿ. ರಾತ್ರಿ ಗಂಟೆ 11.00ಕ್ಕೆ ದಿ|ಶಂಕರನಾರಾಯಣ ಭಟ್ ರವರ (ಅರ್ಚಕರು) ಮನೆಯಿಂದ ಸಿರಿಗಳು ಬರುವುದು. ರಾತ್ರಿ ಗಂಟೆ 11.30ಕ್ಕೆ ದರ್ಶನ ಬಲಿ.ತಾ 15-03-2025ಶನಿವಾರ ಬೆಳಿಗ್ಗೆ ಗಂಟೆ 8.00ಕ್ಕೆ ನಿತ್ಯ ಪೂಜೆ, ಮಹಾಪೂಜೆ, ತುಲಾಭಾರ ಸೇವೆ. ಸಂಜೆ ಗಂಟೆ 3.00ಕ್ಕೆ ಅಂಬೋಡಿ ಜಾತ್ರೆ, ಕೋರಬ್ಬು ದೈವಗಳ ಭೇಟಿ. ರಾತ್ರಿ ಗಂಟೆ 6.30ಕ್ಕೆ ಮಹಾಪೂಜೆ. ರಾತ್ರಿ ಗಂಟೆ 7.30ಕ್ಕೆ ಕಟ್ಟೆ ಪೂಜೆ, ಗುಂಡಿ ಸವಾರಿ, ತೂಟೆ ದಾರೆ ಅವಕೃತ ಸ್ನಾನ, ಧ್ವಜ ಅವರೋಹಣ. ತಾ. 14-03-2025ನೇ ಶುಕ್ರವಾರ ರಾತ್ರಿ ಸಾಂಸ್ಕೃತಿಕ ಮತ್ತು ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ವಿ .ಸೂ.ತಾ.14-03-2025 ಶುಕ್ರವಾರ : ಶ್ರೀ ಕ್ಷೇತ್ರದಲ್ಲಿ ನಡೆಯುವ ಮಹಾ ಅನ್ನಸಂತರ್ಪಣೆಗೆ ಭಕ್ತಾದಿಗಳು ಹೆಚ್ಚಿನ ರೀತಿಯ ಸಹಕಾರವನ್ನು ನೀಡಬೇಕಾಗಿ ವಿನಂತಿ. ಭಕ್ತಾದಿಗಳು ಮಹಾ ಅನ್ನಸಂತರ್ಪಣೆಗೆ ನೀಡುವ ಧನ ಸಹಾಯಕ್ಕೆ ಅವರ ಹೆಸರಿನಲ್ಲಿ ಪ್ರತ್ಯೇಕ ರಶೀದಿಯನ್ನು ನೀಡಲಾಗುವುದು.