Wednesday, February 19, 2025
Homeಉಡುಪಿಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಶ್ರೀ ಚಕ್ರ ಮಂಡಲ ಪೂಜೆ ಸಂಪನ್ನ

ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಶ್ರೀ ಚಕ್ರ ಮಂಡಲ ಪೂಜೆ ಸಂಪನ್ನ

ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಏಕಕಾಲ ಶ್ರೀ ಚಕ್ರ ಮಂಡಲ ಪೂಜೆಯು ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ, ಕುಕ್ಕಿ ಕಟ್ಟೆ ವೇದಮೂರ್ತಿ ರಾಘವೇಂದ್ರ ತಂತ್ರಿ ಗಳವರ ಪ್ರಧಾನತ್ವ ದಲ್ಲಿ ಬಹು ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಆ ಪ್ರಯುಕ್ತ ಕ್ಷೇತ್ರದಲ್ಲಿ ಬೆಳಿಗ್ಗೆ ದೇವತಾ ಪ್ರಾರ್ಥನೆ,, ನಂತರ ಶಾಸ್ತ್ರೋಕ್ತವಾದ ಅರಣಿಮಥನದಿಂದ ಅಗ್ನಿ ಜನನ ಗೊಳಿಸಿ ಆದ್ಯ ಗಣಪತಿಯಾಗ ನೆರವೇರಿಸಲಾಯಿತು.
ಶ್ರೀ ಚಕ್ರ ಮಂಡಲ ಪೂಜೆಗೆ ವಿಶೇಷವಾಗಿ ರಚಿಸಲಾದ ಪುಷ್ಪಾಲಂಕೃತ ಮಂಟಪದೊಳಗೆ ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ದೀಪ ಪ್ರಜ್ವಲಿಸಿ, ಪಂಚವರ್ಣಾತ್ಮಕವಾಗಿ ಬಿಂದುವನ್ನು ಇಟ್ಟು ಶ್ರೀಚಕ್ರ ಮಂಡಲ ರಚನೆಗೆ ಚಾಲನೆ ನೀಡಿದರು.
ಸಂಜೆ ಗಂಟೆ ಆರರಿಂದ ಆರಂಭಗೊಂಡ ಶ್ರೀ ಚಕ್ರ ಮಂಡಲ ಪೂಜೆ ಆರಂಭಗೊಂಡಿತು. ಪೂಜೆಯಲ್ಲಿ ಪುಷ್ಪಾರ್ಚನೆಗೆ ವಿಶೇಷ ಪ್ರಾಧಾನ್ಯತೆ ಇದ್ದು ಸುಗಂಧ ಭರಿತ ವಿಧ ವಿಧದ ಪುಷ್ಪಗಳಿಂದ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕಿಯಾದ ಶ್ರೀ ರಾಜರಾಜೇಶ್ವರಿಯನ್ನು ಲಲಿತಾ ಸಹಸ್ರ ನಾಮ ಸಹಿತ ವಿವಿಧ ಸ್ತುತಿಗಳಿಂದ ಸ್ತುತಿಸಿ ಅರ್ಚನೆ ನೆರವೇರಿಸಲಾಯಿತು.
ಶಾಸ್ತ್ರಗಳು ಉಲ್ಲೇಖಿಸಿದಂತೆ ವಿಶೇಷವಾಗಿ ನವ ನೈವೇದ್ಯಗಳನ್ನು ಆಕೆಗೆ ಸಮರ್ಪಿಸಿ ಶೋಡಸ ಆರತಿಯನ್ನು ಬೆಳಗಿಸಿ ಚೆಂಡೆ ವಾದ್ಯ ನಾದದೊಂದಿಗೆ ಅಷ್ಟಾವದನ ಸಹಿತವಾಗಿ ಆರಾಧಿಸಲಾಯಿತು.
ವಿಶೇಷವಾಗಿ ಸಮರ್ಥಿಸಲ್ಪಡುವ ಅಷ್ಟಾವಧಾನ ಸೇವೆಯಲ್ಲಿ ಸಂಗೀತ ಸೇವೆಯನ್ನು ಚಂದ್ರಕಲಾ ಶರ್ಮ, ಯಕ್ಷಗಾನ ಸೇವೆಯನ್ನು ಶ್ರೀಮತಿ ಊರು ಭಾಗ್ಯಲಕ್ಷ್ಮಿ, ಪಂಚವಾದ್ಯ ಸಹಿತ ರುದ್ರನಾದ ಸೇವೆಯನ್ನು ನಾಗೇಂದ್ರ ಕುಡುಪು, ನಾದಸ್ವರ ವಾದನ ಸೇವೆ ಶ್ರೀಯುತ ಮುರಳಿದರ ಮುದ್ರಾಡಿ ಮತ್ತು ತಂಡದವರು ನೃತ್ಯ ಸೇವೆಯನ್ನು ವಿದುಷಿ ಕುಮಾರಿ ಅನ್ವಿತಾ ಹಾಗೂ ಚತುರ್ವೇದ ಸಹಿತ ವಿವಿಧ ಸೇವೆಯನ್ನು ವಿಪ್ರೊತ್ತಮರು ನೆರವೇರಿಸಿದರು…
ಪೂಜೆಯ ಅಂಗವಾಗಿ ಬ್ರಾಹ್ಮಣ ಸುವಾಸಿನಿ ಆರಾಧನೆ ಕನ್ನಿಕರಾದನೆ ಬ್ರಹ್ಮಚಾರಿ ಆರಾಧನೆ ದಂಪತಿ ಪೂಜೆ ಆಚಾರ್ಯ ಪೂಜೆಗಳು ಸಂಪನ್ನಗೊಂಡು ಮಧ್ಯಾಹ್ನ ಹಾಗೂ ರಾತ್ರಿ ವಿಶೇಷ ಮೃಷ್ಟಾನ್ನ ಸಂತರ್ಪಣೆ
ನೆರವೇರಿತು. ಇಹದಲ್ಲಿ ಸುಖ ಪರದಲ್ಲಿ ಮೋಕ್ಷವನ್ನು ಕರುಣಿಸುವಂತಹ ಬಹು ವಿಶಿಷ್ಟವೂ ಅಪರೂಪವು ಬಹು ಫಲಪ್ರದವು ಆದಂತಹ ಈ ಶ್ರೀಚಕ್ರ ಮಂಡಲ ಪೂಜೆಯು ಚೆನ್ನೈನ ಶ್ರೀಯುತ ವಾಸುದೇವನ್ ಮತ್ತು ಕುಟುಂಬಸ್ಥರ ಪರವಾಗಿ ಪ್ರಾಯಶ್ಚಿತ್ತ ಪೂರ್ವಕವಾಗಿ ಕ್ಷೇತ್ರದಲ್ಲಿ ಸಂಪನ್ನಗೊಂಡಿತು.
ಶ್ರೀಚಕ್ರ ಆರಾಧಕ ರಿಂದಲೇ ನಡೆಸಲ್ಪಡುವ ಈ ವಿಶಿಷ್ಟ ಪೂಜೆಯು ಪ್ರಾಜ್ಞವಿಪ್ರವರ್ಗದ ಸಹಕಾರದಿಂದ ನೋಡುಗರನ್ನು ಭಕ್ತಿ ಪರವಶಗೊಳಿಸಿ ರೋಮಾಂಚನಗೊಳ್ಳು ವಂತೆ ಸಂಪನ್ನಗೊಂಡಿತು.
ಈ ವಿಶೇಷ ಪೂಜೆಯ ನೇತೃತ್ವವನ್ನು ವೇದಮೂರ್ತಿ ವಿಕ್ಯಾತ್ ಭಟ್ ವಹಿಸಿದ್ದರು ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

RELATED ARTICLES
- Advertisment -
Google search engine

Most Popular