Sunday, March 23, 2025
Homeಮಂಗಳೂರುಮಂಗಳೂರಿನ ಶ್ರೀ ದೇವಿ ಇನ್ಸ್ಟಿಟ್ಯೂಟ್ ಒಫ್ ಟೆಕ್ನಾಲಜಿಡಿಪಾರ್ಟ್ಮೆಂಟ್ ಒಫ್ ಎಂ ಬಿ ಎ ವಿದ್ಯಾರ್ಥಿಗಳು ಕನ್ನಡ...

ಮಂಗಳೂರಿನ ಶ್ರೀ ದೇವಿ ಇನ್ಸ್ಟಿಟ್ಯೂಟ್ ಒಫ್ ಟೆಕ್ನಾಲಜಿಡಿಪಾರ್ಟ್ಮೆಂಟ್ ಒಫ್ ಎಂ ಬಿ ಎ ವಿದ್ಯಾರ್ಥಿಗಳು ಕನ್ನಡ ಭವನ ಮತ್ತು ಗ್ರಂಥಾಲಯ ಹಾಗೂ ವಾಚನಾಲಯಕ್ಕೆ ಭೇಟಿ

ಮಂಗಳೂರಿನ ಶ್ರೀ ದೇವಿ ಇನ್ಸ್ಟಿಟ್ಯೂಟ್ ಒಫ್ ಟೆಕ್ನಾಲಜಿ, ಡಿಪಾರ್ಟ್ಮೆಂಟ್ ಒಫ್ ಎಂ ಬಿ ಎ ವಿದ್ಯಾರ್ಥಿಗಳು ಕನ್ನಡ ಭವನ ಮತ್ತು ಗ್ರಂಥಾಲಯ ಹಾಗೂ ವಾಚನಾಲಯಕ್ಕೆ ಜುಲೈ 30ರಂದು ಭೇಟಿ ನೀಡಿದರು. ವಿದ್ಯಾರ್ಥಿಗಳಾದ ಪ್ರತ್ಯುಜ ಪಿ, ಅಮಯ ವಿ ವಿ, ಶ್ರೇಷ್ಟ್ ರಾಜ್, ಅಭಿನ್ ಮೋಹನ್, ಉದೇಶ್ ಟಿ, ಯದುಕೃಷ್ಣ ಸಿ ಕೆ, ಪ್ರೈಜಿ ರೋಡ್ರಿಗ್ರೆಸ್, ಪವಿತ್ರ ಪಿ, ತಮ್ಮ ಕಲಿಕೆಯ ಪ್ರಾಜೆಕ್ಟ್ ಬಾಗವಾಗಿ ಈ ಭೇಟಿ ನೀಡಿದರು.

ಗ್ರಂಥಾಲಯ ಪುಸ್ತಕ ಜೋಡಣೆ, ಪುಸ್ತಕಗಳ ಪ್ರಸಕ್ತಿ, ಪ್ರಾಚ್ಯ ವಸ್ತು ಸಂಗ್ರಹ, ನಾಣ್ಯ ಶೇಕರ, ವಿದೇಶ ಕರೆನ್ಸಿ, ಸಾಹಿತ್ತಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮ ಗಳಿಂದ ಆಗುವ ಸಾಮಾಜಿಕ ಕಟ್ಟಿಬದ್ಧತೆಯ ವಿಷಯಗಳ ಬಗ್ಗೆ ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾಧ ವಾಮನ್ ರಾವ್ ಬೇಕಲ್ ಹಾಗೂ ಗ್ರಂಥಾಲಯ ಸಂಚಾಲಕಿಯಾದ ಸಂದ್ಯಾ ರಾಣಿ ಟೀಚರ್ ತರಗತಿ ಮಾಡಿದರು. ವಿದ್ಯಾರ್ಥಿಗಳಿಂದ ಅನಿಸಿಕೆ ಬಾಷಣ ಮಾಡಿಸಲಾಯಿತು.

ಭಾಗವಹಿಸಿದ ವಿದ್ಯಾರ್ಥಿಗಳಿಗೆ ಕನ್ನಡ ಭವನದ ಅಭಿನಂದನಾ ಪ್ರಮಾಣ ಪತ್ರವನ್ನು ನೀಡಲಾಯ್ತು. ಶ್ರೀ ದೇವಿ ಇನ್ಸ್ಟಿಟ್ಯೂಟ್ ಗೆ ವಿದ್ಯಾರ್ಥಿಗಳ ಮೂಲಕ ಕನ್ನಡ ಭವನದ ಸ್ಮರಣಿಕೆ ನೀಡಲಾಯ್ತು. ವಿದ್ಯಾರ್ಥಿಗಳು ಕಾಲೇಜ್ ನ ವತಿಯಿಂದ ನೆನಪಿನ ಕಾಣಿಕೆ ನೀಡಿದರು ಲಘು ಉಪಹಾರದೊಂದಿಗೆ ಸಂದ್ಯಾ ರಾಣಿ ಟೀಚರ್ ವಂದಿಸಿದರು.

RELATED ARTICLES
- Advertisment -
Google search engine

Most Popular