Monday, January 13, 2025
Homeಬಂಟ್ವಾಳಬಾಳೆಪುಣೆ ಗ್ರಾಮದ ಶ್ರೀ ಧರ್ಮ ಅರಸು ತೋಡಕುಕ್ಕಿನಾರ್ ದೈವಸ್ಥಾನ ಕಣಂತೂರು ಅನ್ನ ಛತ್ರ ನಿರ್ಮಾಣಕ್ಕಾಗಿ...

ಬಾಳೆಪುಣೆ ಗ್ರಾಮದ ಶ್ರೀ ಧರ್ಮ ಅರಸು ತೋಡಕುಕ್ಕಿನಾರ್ ದೈವಸ್ಥಾನ ಕಣಂತೂರು ಅನ್ನ ಛತ್ರ ನಿರ್ಮಾಣಕ್ಕಾಗಿ ಶ್ರೀ ಕ್ಷೇತ್ರ ಧ.ಗ್ರಾ. ಯೋ. ಮಂಜೂರಾದ ಅನುದಾನ ಮಂಜೂರಾತಿ ಪತ್ರ ಹಸ್ತಾಂತರ

ಬಂಟ್ವಾಳ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಡಿಪು ವಲಯದ ಬಾಳೆಪುಣೆ ಗ್ರಾಮದ ಶ್ರೀ ಧರ್ಮ ಅರಸು ತೋಡಕುಕ್ಕಿನಾರ್ ದೈವಸ್ಥಾನ ಕಣಂತೂರು ಇಲ್ಲಿನ ಅನ್ನ ಛತ್ರ ನಿರ್ಮಾಣಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ಒಂದು ಲಕ್ಷ ಅನುದಾನ ಮಂಜೂರಾಗಿದ್ದು, ಅದರ ಮಂಜೂರಾತಿ ಪತ್ರವನ್ನು ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ತಾಲೂಕಿನ ಯೋಜನಾಧಿಕಾರಿ ರಮೇಶ್ ರವರು ಶ್ರೀ ಧರ್ಮ ಅರಸು ತೋಡಕುಕ್ಕಿನಾರ್ ದೈವಸ್ಥಾನ ಕಣಂತೂರಿನ ಅನುವಂಶಿಕ ಆಡಳಿತ ಮೊಕ್ತೇಸರಾದ ದೇವಿ ಪ್ರಸಾದ್ ಪೊಯ್ಯತ್ತಯರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಅನುವಂಶಿಕ ಮೊಕ್ತೇಸರಾದ ಪದ್ಮನಾಭ ರೈ ಯಾನೆ ಮಂಜು ಭಂಡಾರಿ ನಾರ್ಯಗುತ್ತು, ಪ್ರಗತಿ ಬಂದು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ನವೀನ್ ಚಂದ್ರ ಕಣಂತೂರು, ಮುಡಿಪು ವಲಯದ ಮೇಲ್ವಿಚಾರಕರಾದ ರಾಜೇಶ್ ಕೆ, ಜನಜಾಗೃತಿ ಸದಸ್ಯರಾದ ಚಂದ್ರಹಾಸ ಕಣಂತೂರು,ವಿಜೇಶ್ ನಾಯ್ಕ್ ನಡಿಗುತ್ತು, ಸೀತಾರಾಮ ಗಟ್ಟಿ ಕಣಂತೂರು, ಉಪಾಧ್ಯಕ್ಷರಾದ ರವೀಂದ್ರ ಸೂಪಲಚ್ಚಿಲ್, ಮುಡಿಪು ವಲಯದ ಶೌರ್ಯ ವಿಪತ್ತು ತಂಡದ ಅಧ್ಯಕ್ಷರಾದ ರವೀಂದ್ರ ಕುಲಾಲ್ ಮತ್ತು ಸೇವಾ ಪ್ರತಿನಿಧಿ ಮಮತಾ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular