ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣ್ಣಗುಡ್ಡೆ ಇಲ್ಲಿ ಅಮ್ಮುಂಜೆ ಶ್ರೀ ಭ್ರಾಮರೀ ನಾಟ್ಯಾಲಯದ ರಜತ ವರ್ಷದ ಗೆಜ್ಜೆ ಯೊಂದಿಗೆ ಬೆಳ್ಳಿ ಹೆಜ್ಜೆ…4ನೇ ಕಾರ್ಯಕ್ರಮವಾಗಿ ಜಾನಕಿ ಬ್ರಹ್ಮಾವರ ರಚನೆಯ ಯೊಗೀಶ್ ಕೊಳಲಗಿರಿ ನಿರ್ದೇಶನದ “ಶಬರಿ ,”ನೃತ್ಯ ನಾಟಕ ಹಾಗೂ ನೃತ್ಯ ಕಾರ್ಯಕ್ರಮ ಶ್ರೀ ಕ್ಷೇತ್ರದ ಸಹಯೋಗದೊಂದಿಗೆ ಪೆರಂಪಳ್ಳಿ ವಸತಿಯ ಹಿಂದೂ ಸಂಗಮ ವೇದಿಕೆಯಲ್ಲಿ ನಡೆಯಿತು . ಕಾರ್ಯಕ್ರಮವು ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಶ್ರೀ ರಮಾನಂದ ಗುರೂಜಿಯವರ ಅಮೃತ ಹಸ್ತದಿಂದ ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟನೆ ಗೊಂಡಿತು. ಭಾಗವಹಿಸಿದ ಎಲ್ಲಾ ಕಲಾವಿದರನ್ನು ಆಶೀರ್ವದಿಸಿ ಮಾತನಾಡಿದ ಗುರೂಜಿಯವರು ಈ ಕ್ಷೇತ್ರದಲ್ಲಿ ಸದಾ ನೃತ್ಯ ಸೇವೆ ನೀಡುವ ಕಲಾವಿದರ ಕೀರ್ತಿ ಇಂದು ಜಗತ್ ವಿಖ್ಯಾತವಾಗಿದೆ. ಮುಂದಿನ ದಿನಗಳಲ್ಲಿ ಇವರ ಕೀರ್ತಿ ಇನ್ನಷ್ಟು ಉತ್ತುಂಗಕ್ಕೆ ಏರಲಿ ಎಂದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಶ್ರೀಮತಿ ಭಾಗ್ಯಲಕ್ಷ್ಮಿ ಉಪ್ಪೂರು ನಾಟ್ಯಾಲಯವು ವಿದ್ಯಾರ್ಥಿಗಳಿಗೆ ಕಲೆ ಜೊತೆ ಒಳ್ಳೆಯ ಸಂಸ್ಕಾರವನ್ನು ಕಲಿಸುತ್ತಿದ್ದು ನಾಟ್ಯಾಲಯವು ಇನ್ನು ಬೆಳೆಯಲಿ ಎಂದು ಶುಭ ಹಾರೈಸಿದರು , ನಾಟ್ಯಾಲಯದ ನಿರ್ದೇಶಕರಾದ ಗುರು ವಿದ್ವಾನ್ ಕೆ ಭವಾನಿ ಶಂಕರ್ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು.
ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮಾ ನಾಗರಾಜ್ ಉಪಸ್ಥಿತರಿದ್ದರು.
Home Uncategorized ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ:ಭ್ರಾಮರೀ ನಾಟ್ಯಾಲಯದ ರಜತ ವರ್ಷದ ಅಂಗವಾಗಿ- “ಶಬರಿ” ನೃತ್ಯ ನಾಟಕ ಪ್ರಸ್ತುತಿ

