ಉಡುಪಿ ; ಶ್ರೀ ದುರ್ಗಾಂಬಾ ಮಂದಿರ ಮಣಿಪಾಲ ಇದರ 22 ನೇ ವರ್ಷದ ಪ್ರತಿಷ್ಠಾ ವರ್ಧಂತಿ ಪ್ರಯುಕ್ತ ಶ್ರೀದೇವಿಯ ಸನ್ನಿಧಿಯಲ್ಲಿ ಪಂಚದುರ್ಗಾ ಹವನ ಆದಿತ್ಯವಾರ ನೆಡೆಯಿತು , ಶ್ರೀ ದೇವಿಯ ಸನ್ನಿಧಿಯಲ್ಲಿ ಸಾಮೂಹಿಕ ಕುಂಕುಮಾರ್ಚನೆ , ಶ್ರೀದೇವಿಗೆ ಮಲ್ಲಿಗೆಯ ವಿಶೇಷ ಅಲಂಕಾರ , ಮಹಾಪೂಜೆಯ ಬಳಿಕ ಸರ್ವಜನಿಕ ಅನ್ನಸಂತರ್ಪಣೆ ನಡೆಯಿತು. ದೇವಳದ ವರ್ಧಂತಿ ಪರ್ವಕಾಲದಲ್ಲಿ ಶ್ರೀಮದ್ ಶ್ರೀ ಕೈವಲ್ಯ ಮಠ ಸಂಸ್ಥಾನದ ಮಠಾಧಿಪತಿ ಶ್ರೀಮದ್ ಶಿವಾನಂದ ಸರಸ್ಪತಿ ಶ್ರೀಪಾದರು ದೇವಳಕ್ಕೆ ಭೇಟಿ ನೀಡಿದರು. ದೇವಳದ ವತಿಯಿಂದ ಪೂಜ್ಯ ಶ್ರೀಗಳನ್ನು ಮಂಗಳವಾದ್ಯ ಹಾಗೂ ಪೂರ್ಣ ಕುಂಭ ದಿಂದ ಸ್ವಾಗತಿಸಿ ಬರಮಾಡಿಕೊಂಡು ಪಾದ ಪೂಜೆ ಮಾಡಿ ಫಲ ಪುಷ್ಪ ಕಾಣಿಕೆ ನೀಡಿ ಗೌರವಿಸಲಾಯಿತು , ಸ್ವಾಮೀಜಿಯವರು ಶ್ರೀ ದುರ್ಗಾಂಬಾ ದೇವಿಗೆ ಆರತಿ ಬೆಳಗಿಸಿದರು. ತಮ್ಮ ಅನುಗ್ರಹ ಸಂದೇಶದಲ್ಲಿ ಹಿರಿಯರ ಪೂರ್ವ ಜನ್ಮದ ಫಲದಿಂದಾಗಿ ಈ ದೇವಾಲಯ ನಿರ್ಮಾಣ ಗೊಂಡಿದೆ , ನಿರಂತರ ಭಗವಂತನಾ ಆರಾಧನೆಯಿಂದ ಮುಕ್ತಿ ಪ್ರಾಪ್ತಿ ಗುರುವಿನ ಹಾಗೂ ಶ್ರೀ ದೇವರ ವಿಶೇಷ ಅನುಗ್ರಹ ನಿಮ್ಮಲ್ಲರ ಮೇಲೆ ಸದಾ ಇರಲಿ ಎಂದು ಅನುಗ್ರಹಸಿದರು. ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ಶಿವಾನಂದ ಭಟ್ ನೇತೃತ್ವದಲ್ಲಿ ಪಂಚದುರ್ಗಾ ಹವನ ನೆಡೆಯಿತು , ಸೇವಾದಾರದ ಶ್ರೀಮತಿ ಉಷಾ ಪೈ , ಶ್ರೀಧರ್ ಪೈ ಸಹಕರಿಸಿದರು , ಸಮಾರಂಭದಲ್ಲಿ ವೇದ ಮೂರ್ತಿ ಜಗದೀಶ್ ಭಟ್ ಕುಂದಾಪುರ , ವಿಘ್ನೇಶ್ ಭಟ್ , ವಾಸುದೇವ ಭಟ್ , ವೆಂಕಟರಮಣ ಭಟ್ , ರಾಜೇಶ್ ಭಟ್ , ನಾಗೇಶ್ ಭಟ್ , ಶೈಲೇಶ್ ಭಟ್ ಮಲ್ಪೆ , ಶ್ರೀದುರ್ಗಾಂಬಾ ಟ್ರಸ್ಟ್ ನ ಸದಸ್ಯರಾದ ಸಿ ಆರ್ ಪೈ , ಗಣಪತಿ ಕಾಮತ್ , ದಿವಾಕರ್ ಕಿಣೆ , ಗಣೇಶ್ ಪೈ , ಆತ್ಮರಾಮ ನಾಯಕ್ , ಜಗದೀಶ್ ಪೈ , ಗುರುರಾಜ್ ನಾಯಕ್ , ಶ್ರೀಮತಿ ಲಕ್ಷ್ಮೀ ಭಟ್ ,ಟ್ರಸ್ಟ್ ನ ಪಧಾದಿಕಾರಿಗಳು , ಹಾಗೂ ಶ್ರೀದುರ್ಗಾಂಬಾ ಮಹಿಳಾ ಮಂಡಳಿಯ ಸದಸ್ಯರು , ಊರಿನ ಹತ್ತು ಸಮಸ್ತರು , ನೂರಾರು ಸಮಾಜ ಭಾಂದವರು ಉಪಸ್ಥರಿದ್ದರು.