ಶಿಕಾರಿಪುರ : ತಾಲ್ಲೂಕಿನಲ್ಲಿ ಸಹಕಾರ ಸಂಘ ಧುರೀಣರು, ಜಾನಪದ ಚೌಟಗಿ ಕಲಾವಿದರು, ಸಮಾಜಿಕ ಕಲಾ ಸೇವಕರು, ಅನೇಕ ಪ್ರಶಸ್ತಿ ಪುರಸ್ಕೃತರಾಗಿ ಜನಮನ್ನಣೆ ಪಡೆದಿರುವ ಸಿ.ಆರ್. ಪರಶುರಾಮ್ ಚೌಟಗಿ ಇವರ ಕಲಾಸೇವೆ ಮತ್ತು ಗಣನೀಯ ಸಾಮಾಜಿಕ ಸೇವೆಯನ್ನು ಗುರುತಿಸಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ದಿನಾಂಕ 24-03-2025 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ಶ್ರೀ ಸರ್ವೇಜನ ಆರ್ಟ್ ಮತ್ತು ಕಲ್ಬರಲ್ ಟ್ರಸ್ಟ್ (ರಿ), ಬೆಂಗಳೂರು ಇವರ ವತಿಯಿಂದ ಸಂಸ್ಥೆಯ 8 ನೇ ವಾರ್ಷಿಕೋತ್ಸವದ ಅಂಗವಾಗಿ ನಾಡಿನ ಹೆಮ್ಮೆಯ ವಿಧಾನಸೌಧ ನಿರ್ಮಾತೃ ಶ್ರೀ ಕೆಂಗಲ್ ಹನುಮಂತಯ್ಯ ಸದ್ಭಾವನಾ ರಾಷ್ಟ್ರ ಪ್ರಶಸ್ತಿ ಯನ್ನು ನೀಡಿ ಗೌರವಿಸಲಾಯಿತು.