ಜನ್ಮ ಭೂಮಿ ಸೇವಾ ಟ್ರಸ್ಟ್ ನ ತಳಹದಿಯಲ್ಲಿರುವ ಕಾರ್ಕಳ ಬೈಲೂರಿನ ನಚಿಕೇತ ವಿದ್ಯಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ನೀರೆ ಗ್ರಾಮ ಪಂಚಾಯಿತ್ ನಿಂದ ಶೋಭಾಯಾತ್ರೆ ಆರಂಭವಾಗಿ ಚೆಂಡೆ ನಾದದೊಂದಿಗೆ, ವಿದ್ಯಾರ್ಥಿಗಳಿಂದ ಕುಣಿತ ಭಜನೆ, ಮುದ್ದು ರಾಧೆ-ಕೃಷ್ಣ ರ ಮೆರವಣಿಗೆಯು ಶಾಲೆಯ ಮೈದಾನದವರೆಗೆ ಬಂದು, ನಂತರ ಅಂಗಳದಲ್ಲಿ ಮೊಸರು ಕುಡಿಕೆಯೊಂದಿಗೆ ಪರಿಪೂರ್ಣಗೊಂಡಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜೆಸಿಸ್ ಯುವ ಉದ್ಯಮಿ ಪುರಸ್ಕೃತರಾದ ವೃತ್ತಿಯಲ್ಲಿ ಸಿವಿಲ್ ಕಂಟ್ರಾಕ್ಟರ್ ಆಗಿರುವ ಅರುಣ್ ಕುಮಾರ್ ನಿಟ್ಟೆ ಆಗಮಿಸಿದ್ದರು. MPMC ಕಾಲೇಜಿನ ಉಪನ್ಯಾಸಕಿಯಾಗಿರುವ ಅಕ್ಷತಾ ರಾವ್ ಹಾಗೂ ಉದ್ಯಮಿಯಾಗಿರುವ ಗಣೇಶ್ ಕೌಡೂರು, ಸಂಸ್ಥೆಯ PTA ಅಧ್ಯಕ್ಷರಾಗಿರುವ ನಿತಿನ್ ಕುಮಾರ್, ಮಾತೃ ಭಾರತಿ ಯ ಅಧ್ಯಕ್ಷರಾಗಿರುವ ದೀಕ್ಷಿತಾ ರಾವ್, ಶಾಲಾ ಸಂಚಾಲಕರಾದ ಡಿ. ಮಚ್ಚೆಂದ್ರನಾಥ್, ಸಂಸ್ಥೆಯ ಮುಖ್ಯೋಪಾಧ್ಯಾಯನಿ ಕವಿತಾ ಶೆಣೈ ವೇದಿಕೆಯಲ್ಲಿ ಆಸೀನ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಮುದ್ದು ಕೃಷ್ಣ ಮುದ್ದು ರಾಧೆ ಛದ್ಮವೇಷ ಸ್ಪರ್ಧೆಯನ್ನು ಏರ್ಪಡಿಸಲಾಯಿತು.
ಯಕ್ಷಗಾನ ಗುರುಗಳಾದ ಸುಬ್ರಹ್ಮಣ್ಯ ಪ್ರಸಾದ್, ಅಕ್ಷತಾ ರಾವ್, ಕುಣಿತ ಭಜನೆಯ ಗುರುಗಳಾದ ಗುರುರಾಜ್ ಆಚಾರ್ಯ ಇವರು ಸ್ಪರ್ಧೆಯ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ತದನಂತರ ಶಾಲಾ ವಿದ್ಯಾರ್ಥಿಗಳ ಕಬಡ್ಡಿ ತಂಡವು ರಾಜ್ಯಮಟ್ಟದಲ್ಲಿ ಪ್ರತಿ ನಿಧಿಸುವಂತೆ ತರಬೇತಿ ನೀಡಿದ ತರಬೇತುದಾರರಾದ ಸೃಜನ್ ಹಾಗೂ ಗಣೇಶ್, ಹಾಗೆಯೇ ಕುಣಿತ ಭಜನೆಗಯ ಗುರುಗಳಾದ ಗುರುರಾಜ್ ಆಚಾರ್ಯ ಇವರಿಗೆ ಗೌರವ ಸ್ಮರಣಿಕೆ ನೀಡಿ ಗೌರವಿಸಲಾಯಿತು.