ರಾಜ್ಯಾದ್ಯಂತ 13 ಲಕ್ಷ ಬಡವರ ಗೃಹ ಉದ್ದೇಶಿತ ಚಟುವಟಿಕೆಗಳಿಗೆ ಬ್ಯಾಂಕಿನ ಮೂಲಕ ಸಹಕಾರ, ಸ್ವ ಉದ್ಯೋಗಕೆ ಹಾಗು ಕೃಷಿ ಅಭಿವೃದ್ಧಿ ಕಾರ್ಯಗಳಿಗೆ ಅರ್ಥಿಕ ನೆರವು , ಗ್ರಾಮೀಣ ಭಾಗದಲ್ಲಿರುವ 60000 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯ ವೇತನ ಸ್ಕಾಲರ್ ಶಿಪ್ ಒದಗಿಸುವ ಮೂಲಕ ಬಡವರ ಬದುಕಿನ ಏಳಿಗೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಶ್ರಮಿಸುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳಾದ ಶ್ರೀ ಅನಿಲ್ ಕುಮಾರ್ ಎಸ್ ಎಸ್ ರವರು ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ನಾರಾವಿ ವಲಯದಲ್ಲಿ ನೂತನವಾಗಿ ರಚನೆ ಗೊಂಡಿರುವ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ವನ್ನು ಉದ್ಘಾಟಿಸಿ ಮಾತನಾಡಿದರು ಬಾರತ ದೇಶದಲ್ಲಿ ಸ್ವ ಸಹಾಯ ಸಂಘಗಳ ರೂಪು ರೇಷೆಗಳನ್ನು ರಚಿಸುವ ಸಲುವಗಿ ಮಹಿಳಾ ಸಬಲೀಕರಣಕ್ಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಂಗ ಸಂಸ್ಥೆಯನ್ನಾಗಿ ನಬಾರ್ಡ್ ನ್ನೂ ನೇಮಿಸಿದೆ ನಬಾರ್ಡ್ ಸಂಸ್ಥೆ ಗುಂಪುಗಳ ಕಾರ್ಯ ಚಟುವಟಿಕೆಗಳನ್ನು ಅಧ್ಯಯನ ಮಾಡಿ ಮಾದರಿ ವ್ಯವಸ್ಥೆ ಎಂಬುವು ದಾಗಿ ಯೋಜನೆಯನ್ನ ಪರಿಗಣಿಸಿದೆ ಯೋಜನೆಯು ಕರ್ನಾಟಕ ರಾಜ್ಯದ ಲ್ಲಿ ಕಲ್ಪವೃಕ್ಷವಾಗಿದೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಿಯಮ ಪ್ರಕಾರ ವೇ ಸಾಲ ಸೌಲಭ್ಯಗಳನ್ನು ವಿತರಿಸಬೇಕು ಕನಿಷ್ಟ 17 ಬಗೆಯ ದಾಖಲೆಗಳನ್ನ ಒದಗಿಸಬೇಕು.
ಹೆಚ್ಚಿನ ಬಡ ಜನರಲ್ಲಿ ಸೂಕ್ತ ದಾಖಲೆಗಳು ಲಭ್ಯ ಇರುವುದಿಲ್ಲ ಇದರಿಂದಾಗಿ ಬಡವರು ಬ್ಯಾಂಕಿನ ಸೌಲಭ್ಯ ಗಳಿಂದ ವಂಚಿತ ರಾಗುತ್ತಿದ್ದರೆ ದುಡಿಯುವ ಶಕ್ತಿ ಇರುವವರಿಗೆ ಆರ್ಥಿಕ ಸಹಕಾರ ಬೇಕು ಬಡವರ ಆರ್ಥಿಕ ಸಬಲೀಕರಣಕ್ಕಾಗಿ ಪೂಜ್ಯರು ವಿವಿದ ರಾಷ್ಟ್ರೀಕೃತ ಬ್ಯಾಂಕುಗಳ ಜೊತೆ ಒಪ್ಪಂದ ಮಾಡಿಕೊಂಡು ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಸದಸ್ಯರಿಗೆ ನೇರವಾಗಿ ಬ್ಯಾಂಕಿನ ಮೂಲಕ ಆರ್ಥಿಕ ಸೌಲಭ್ಯ ಗಳನ್ನ ಒದಗಿಸುವ ಕೆಲಸ ಮಾಡುತ್ತಿದ್ದಾರೆ ಮನುಷ್ಯನ ಶೇಕಡಾ 70 ರಷ್ಟು ಸಮಸ್ಯೆಗಳಿಗೆ ಹಣದ ಅಗತ್ಯತೆ ಇದೆ ಇದರ ಪೂರೈಕೆ ಯನ್ನ ಸರಳ ರೀತಿಯಲ್ಲಿ ಗುಂಪುಗಳ ಸದಸ್ಯರಿಗೆ ಬ್ಯಾಂಕುಗಳು ಒದಗಿಸುತ್ತಿವೆ ಎಂದು ವಿವರಿಸಿದರು.
ಇದರಿಂದಾಗಿ ದೇಶದ ಅರ್ಥಿಕ ವ್ಯವಸ್ಥೆಯಿಂದ ಹೊರಗುಳಿದ ಬಡವರಿಗೆ ಯೋಜನೆಯು ಕಲ್ಪ ವೃಕ್ಷ ವಾಗಿದೆ ಎಂದರು ಗ್ರಾಮದಲ್ಲಿರುವ ಪ್ರತಿಯೊಬ್ಬರೂ ಅಭಿವೃದ್ಧಿ ಹೊಂದಬೇಕು ಎಲ್ಲಾ ಆಯಾಮಗಳಲ್ಲಿ ಯೋಜನೆಯ ಮೂಲಕ ಸೇವೆಯನ್ನು ನೀಡಲಾಗುತ್ತಿದೆ ದೇಶದ ಅರ್ಥಿಕ ವ್ಯವಸ್ಥೆಗೆ ನೀತಿ ನಿಯಮಗಳ ಅಗತ್ಯತೆ ಇದೆ ಬ್ಯಾಂಕಿನ ಅಂತರನ್ನ ಯೋಜನೆಯು ಹೋಗಲಾಡಿಸಿದೆ ಯಾವುದೇ ದಾಖಲೆಗಳು ಇಲ್ಲದೆಯೇ ಸುಲಭ ರೀತಿಯಲ್ಲಿ ಮನೆ ಬಾಗಿಲಿಗೆ ಬ್ಯಾಂಕಿನ ಸೌಲಭ್ಯ ವನ್ನು ಒದಗಿಸಲಾಗುತ್ತಿದೆ ಎಂದರು.
20000 ಮಂದಿ ಅಶಕ್ತರೀಗೆ ಮಾಶಾಸನ,4000 ಶಾಲೆಗಳಿಗೆ ಬೆಂಚು ಡೆಸ್ಕ್,4500 ಹಾಲು ಉಡ್ಪಾದಕರ ಕಟ್ಟಡದ ಕಾಮಗಾರಿ ಗಳಿಗೆ ಸಹಕಾರ,780 ಕೆರೆಗಳ ಪುನಶ್ಚೇತನ,485 ಶುದ್ಧ ಗಂಗಾ ಗಟ ಕ ಗಳ ರಚನೆ ಮಾಡಲಾಗಿದೆ ಈ ಮುಖೇನ ಹಲವಾರು ಸಾಮಾಜಿಕ ಚಟುವಟಿಕೆ ತೊಡಗಿಕೊಂಡು ಗ್ರಾಮದ ಅಭಿವೃದ್ಧಿಯಲ್ಲಿ ಪಾತ್ರ ವಹಿಸಿದೆ ಎಂದು ಹೇಳಿದರು ಒಕ್ಕೂಟದ ಪದಾಧಿಕಾರಿ ಗಳು ತಮ್ಮ ವ್ಯಾಪ್ತಿಯ ಗುಂಪುಗಳ ಗುಣ ಮಟ್ಟ ವನ್ನು ಕಾಪಾಡಿಕೊಳ್ಳುವ ಸೇವೆಯನ್ನು ಮಾಡುತ್ತಿದ್ದಾರೆ ಹೀಗಾಗಿ ಯುವ ನಾಯಕರನ್ನು ಸೃಷ್ಟಿಸುವ ದೊಡ್ಡ ವೇದಿಕೆಯಾಗಿ ಯೋಜನೆ ಕಾರ್ಯ ನಿರ್ವಹಿಸುತ್ತಿದೆ ಎಂದು ಅಭಿಪ್ರಾಯ ಪಟ್ಟರು.
ವೇಣೂರು ವಲಯದ ಜನ ಜಾಗೃತಿ ವೇದಿಕೆ ಯ ವಲಯ ಅಧ್ಯಕ್ಷರಾದ ಶ್ರೀ ಮೋಹನ್ ಅಂದಿಂಜೆ ಯವರು ಮಾತನಾಡುತ್ತಾ ಬಂದ ದಾರಿಯನ್ನು ನೆನಪು ಮಾಡಿಕೊಳ್ಳುವ ಸಂದರ್ಬದಲ್ಲಿ ನಾವು ಇದ್ದೇವೆ 40 ವರ್ಷದ ಹಿಂದೆ ಕುಟುಂಬಗಳ ಮನೆಯ ಚಿತ್ರಣ ಯಾವ ರೀತಿಯಲ್ಲಿ ಇತ್ತು ಯೋಜನೆಯ ಮೂಲಕ ಯಾವ ಮಟ್ಟದಲ್ಲಿ ಸುಧಾರಣೆಯಾಗಿದೆ ಎಂಬುದನ್ನು ಪ್ರತಿಯೊಬ್ಬರೂ ಆತ್ಮ ಅವಲೋಕನ ಮಾಡಿಕೊಳ್ಳಬೇಕು ಸಮಾಜದಲ್ಲಿ ಒಳ್ಳೆಯ ಕೆಲಸ ಗಳನ್ನ ಪ್ರೋತ್ಸಾಹಿಸಬೇಕು ಗುಂಪಿನ ಹೊಣೆಗಾರಿಕೆ ಎಲ್ಲಾ ಸದಸ್ಯರದ್ದು ಅಪತ್ತು ಕಾಲದಲ್ಲಿ ನಮ್ಮ ರಕ್ಷಣೆಗೆ ಗುಂಪುಗಳು ನಮ್ಮನ್ನು ರಕ್ಷಿಸುತ್ತದೆ ಎಂದು ತಿಳಿಸಿದರು ವೇದಿಕೆಯಲ್ಲಿ ಚಂದ್ರ ನಾಥ ಸ್ವಾಮಿ ಜಿನ ಬಸದಿ ನಾರಾವಿ ಯ ಆಡಳಿತ ಮುಕ್ತೆಸ್ವರ ರಾದ ಶ್ರೀ ನಿರಂಜನ ಆಜ್ರಿ ರಾಮೇರ ಗುತ್ತು, ಜನ ಜಾಗೃತಿ ವೇದಿಕೆಯ ನಾರಾವಿ ವಲಯದ ಅಧ್ಯಕ್ಷರಾದ ಶ್ರೀ ನಿತ್ಯಾನಂದ ನಾವರ, ಉಡುಪಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ದುಗ್ಗೆ ಗೌಡ, ಮರೊಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ರತ್ನಾಕರ್ ಬುನ್ನು, ಶ್ರೀ ಉಮಾ ಮಹೇಶ್ವರ ದೇವಸ್ಥಾನದ ಪ್ರಧಾನ ಕಾರ್ಯದರ್ಶಿಹಾಗೂ ಬಿ ಜೆ ಪಿ ಯ ಜಿಲ್ಲಾ ಉಪಾದ್ಯಕ್ಷರದ ಜಯಂತ್ ಕೋಟ್ಯಾನ್, ಪ್ರಗತಿ ಪರ ಕೃಷಿಕರಾದ ಶ್ರೀ ರತ್ನಾಕರ್ ಬಟ್, ಉದ್ಯಮಿಗಳಾದ ವಸಂತ್ ಬಟ್ ನೂತನ ವಲಯ ಅಧ್ಯಕ್ಷರಾದ ಶೇಕರ್ ಹೆಗ್ಡೆ, ಹಾಗು ಎಲ್ಲಾ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು ಸಬಾ ಅಧ್ಯಕ್ಷತೆಯನ್ನು ಕೇಂದ್ರ ಒಕ್ಕೂಟದ ಅಧ್ಯಕ್ಷ ರಾದ ಸದಾನಂದ ಬಂಗೇರ ವಹಿಸಿದ್ದರು ತಾಲೂಕ್ ಯೋಜನಾಧಿಕಾರಿ ದಯಾನಂದ ಪೂಜಾರಿ ಸ್ವಾಗತಿಸಿದರು, ವಲಯ ಮೇಲ್ವಿಚಾರಕ ರಾದ ಶ್ರೀಮತಿ ದಮಯಂತಿ ವರದಿ ಮಂಡಿಸಿದರು, ನಿಕಟ ಪೂರ್ವ ವಲಯ ಅಧ್ಯಕ್ಷರಾದ ಯಶೋದರ ಬಂಗೇರಾ ನಿರೂಪಿಸಿದರು ಕೊಕ್ರಡಿ ಸಾವ್ಯ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಶಶಿದರ್ ಧನ್ಯ ವಾದವಿತ್ತರು ವಲಯದ ಎಲ್ಲಾ ಸೇವಾ ಪ್ರತಿನಿಧಿ ಗಳು ಹಾಜರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಡವರ ಬದುಕಿನ ಏಳಿಗೆಗಾಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್ ಎಸ್ ಅಭಿಮತ
RELATED ARTICLES