ಉಡುಪಿ ಜಿಲ್ಲೆಯ ಶಿರ್ವ ಗ್ರಾಮದಲ್ಲಿ ಸುಮಾರು 2.5 ಕೋಟಿ ರೂ. ಖರ್ಚು ವೆಚ್ಚದಲ್ಲಿ ಪುನರ್ ನಿರ್ಮಾಗೊಳ್ಳುತ್ತಿರುವ “ಶಿರ್ವದ ಅಪ್ಪೆ’ ಎಂದೇ ಪ್ರಖ್ಯಾತಿಯಲ್ಲಿರುವ ಶ್ರೀ ಮಹಾಮ್ಮಾಯಿ ಅಮ್ಮನವರ ಸಾನ್ನಿಧ್ಯದ ಶಿರ್ವ ಮಾರಿಗುಡಿಯ ವಿಜ್ಞಾಪಣಾ ಪತ್ರಕ್ಕೆ ಸ್ಪಂದಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ 5 ಲಕ್ಷ ರೂ. ಸಹಾಯ ಧನವನ್ನು ಪ್ರಸಾದದ ರೂಪದಲ್ಲಿ ಮಾರಿಗುಡಿಯ ಉಪಾಧ್ಯಕ್ಷ ಶಿರ್ವ ನಡಿಬೆಟ್ಟು ರತ್ನವರ್ಮ ಹೆಗ್ಡೆಯವರಿಗೆ ಹಸ್ತಾಂತರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನವೀಕರಣ ಸಮಿತಿಯ ಕಾರ್ಯದರ್ಶಿ ಸೊರ್ಕಳ ಸಚ್ಚಿದಾನಂದ ಹೆಗ್ಡೆ, ಕೋಶಾಧಿಕಾರಿ ಹರೀಶ್ ಪೂಜಾರಿ, ಸಾನ್ನಿಧ್ಯದ ಅರ್ಚಕ ವೆಂಕಟರಮಣ ಭಟ್, ಮಾರಿಗುಡಿ ಹಾಗೂ ಸದಸ್ಯ ಸತ್ಯನಾರಾಯಣ ಪ್ರಭು ಮೊದಲಾದವರು ಉಪಸ್ಥಿತರಿದ್ದರು.