ಶ್ರೀ ಕ್ಷೇತ್ರ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನ, ಶ್ರೀ ಕ್ಷೇತ್ರದ ದಿವ್ಯ ಸನ್ನಿಧಾನದಲ್ಲಿ ದಿನಾಂಕ 19-03-2024ನೇ ಮಂಗಳವಾರ ವರ್ಷಂಪ್ರತಿಯಂತೆ ಬ್ರಹ್ಮಶ್ರೀ ದೇರೆಬೈಲು ಡಾ. ಶಿವಪ್ರಸಾದ್ ತಂತ್ರಿವರೇಣ್ಯರ ನೇತೃತ್ವದಲ್ಲಿ ಪ್ರತಿಷ್ಠಾಪನಾ ದಿನ-ಮಹಾರಂಗಪೂಜಾ ಮಹೋತ್ಸವವು ನಡೆಯಲಿದೆ.
ಬೆಳಿಗ್ಗೆ 9.00ಗಂಟೆಗೆ : ಸಾಮೂಹಿಕ ಪ್ರಾರ್ಥನೆ, 25 ಕಲಶ ಪ್ರಧಾನ ಹೋಮ, ಮಹಾಗಣಪತಿ ದೇವರಿಗೆ ಹಾಗೂ ಪರಿವಾರ ದೇವರುಗಳಿಗೆ ಕಲಶಾಭಿಷೇಕ ಮಧ್ಯಾಹ್ನ ಮಹಾಪೂಜೆ.
ರಾತ್ರಿ 8.00 ಗಂಟೆಗೆ : ಮಹಾರಂಗಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ.
9.00 ಕ್ಕೆ : ಬಲಿ ಉತ್ಸವ, ದರ್ಶನ ಬಲಿ, ವಸಂತಪೂಜೆ, ರಾಜಾಂಗಣ ಪ್ರಸಾದ ವಿತರಣೆ ನಡೆಯಲಿದೆ.
ಬೆಳಿಗ್ಗೆ ಗಂಟೆ 7.00ರಿಂದ, ವಿವಿಧ ಸಂತ ಭಜನಾ ಮಂಡಳಿಯವರಿಂದ ಭಜನಾ ಸೇವೆ ಜರಗಲಿರುವುದು. ಸಂಜೆ 5.45ಕ್ಕೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಶ್ರೀ ದೇವಿ ಮಹಾತೆ ಎಂಬ ಯಕ್ಷಗಾನ ಬಯಲಾಟ ಜರಗಲಿರುವುದು.