Tuesday, April 22, 2025
Homeಉಡುಪಿಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ; ಪರಿವಾರ ದೇವರ ಪುನರ್ ಪ್ರತಿಷ್ಠಾ ಮೊಹೋತ್ಸವದ ಪಂಚಮ ವರ್ಷದ...

ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ; ಪರಿವಾರ ದೇವರ ಪುನರ್ ಪ್ರತಿಷ್ಠಾ ಮೊಹೋತ್ಸವದ ಪಂಚಮ ವರ್ಷದ ಪ್ರತಿಷ್ಠಾ ವರ್ಧಂತಿ

ಉಡುಪಿ : ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ  ತೆಂಕಪೇಟೆ ಉಡುಪಿ   ,ಶತಮಾನೋತ್ತರ ರಜತ ಮಹೋತ್ಸವ  125 ವರ್ಷದ ಆಚರಣೆ ಪ್ರಯುಕ್ತ 125 ದಿನ ಅಹೋರಾತ್ರಿ ನಿರಂತರ ಭಜನಾ ಮೊಹೋತ್ಸವ  ಆರಂಭ ಗೊಂಡು 50 ದಿನ  ಪೂರೈಸಿದ ಸಲುವಾಗಿ ಶ್ರೀ ದೇವರಿಗೆ ವಿಶೇಷ ಅಲಂಕಾರ , ಊರ ಪರಊರ  ನೂರಾರು ಭಕ್ತರ ಸಹಕಾರ ದೊಂದಿಗೆ ಹರಿನಾಮ ಸಂಕೀರ್ತನೆ ನಿರಂತರ ನಡೆಯುತ್ತಾ ಇದೆ. 

ಶುಕ್ರವಾರ  ದೇವಳದ ಸುತ್ತು ಪೌಳಿ ಹಾಗೂ ಪರಿವಾರ ದೇವರ ಪುನರ್ ಪ್ರತಿಷ್ಠಾ ಮಹೋತ್ಸವದ  ಪಂಚಮ ವರ್ಷದ  ಪ್ರತಿಷ್ಠಾ ವರ್ಧಂತಿ  ಕಾರ್ಯಕ್ರಮದ ಅಂಗವಾಗಿ , ಸಾನಿಧ್ಯ ಹವನ  ,  ಶ್ರೀದೇವರಿಗೆ ದ್ವಾದಶ ಕಲಶ ಅಭಿಷೇಕ  , ಬ್ರಹ್ಮಕಲಶಗಳ ಅಭಿಮಂತ್ರಣ ನಡೆಯಿತು.                                                                                                                                                                                                      ಶ್ರೀ  ಲಕ್ಷ್ಮೀ ವೆಂಕಟೇಶ ದೇವರಿಗೆ , ಪರಿವಾರದ ದೇವರಾದ  ಗಣಪತಿ , ಲಕ್ಷ್ಮೀ  , ಹನುಮಂತ  , ಗರುಡ ದೇವರಿಗೆ  ಅಭಿಷೇಕ ನಡೆಯಿತು ,  ಮಹಾಪೂಜೆಯ ಬಳಿಕ  ಸಮಾರಾಧನೆ  ಜರಗಿತು ರಾತ್ರಿ ಶ್ರೀದೇವರ ಪಲ್ಲಕ್ಕಿ ಉತ್ಸವ  ನಡೆಯಿತು.

ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು   ವೇದ ಮೂರ್ತಿ  ಶ್ರೀಕಾಂತ್ ಭಟ್  ,  ದೇವಳದ ಪ್ರಧಾನ ಅರ್ಚಕರಾದ  ದಯಘಾನ್ ಭಟ್  ,  ವಿನಾಯಕ ಭಟ್   , ಮೇಘಶ್ಯಾಮ್ ಭಟ್    ,  ದೀಪಕ್ ಭಟ್  , ಗಿರೀಶ್ ಭಟ್  ,   ಮುಕ್ತೇಸರ ಪಿ ವಿ ಶೆಣೈ  , ವಿಶ್ವನಾಥ್ ಭಟ್ ,  ವಸಂತ್ ಕಿಣೆ  , ಗಣೇಶ್ ಕಿಣೆ , ಹಾಗೂ   ದೇವಳದ ಆಡಳಿತ ಮಂಡಳಿಯ ಸದಸ್ಯರು  , ವಿವಿಧ ಭಜನಾ ಮಂಡಳಿಯ ಸದಸ್ಯರು . ಜಿ  ಎಸ್  ಬಿ  ಮಹಿಳಾ  ಮಂಡಳಿ ಸದಸ್ಯರು  , ಯುವಕ ಮಂಡಳಿಯ ಸದಸ್ಯರು    ನೂರಾರು  ಸಮಾಜಭಾಂದವರು ಉಪಸ್ಥಿತರಿದರು. 

RELATED ARTICLES
- Advertisment -
Google search engine

Most Popular