Thursday, July 25, 2024
Homeಉಡುಪಿಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಉಡುಪಿ: ವೈಭವದ ವಸಂತೋತ್ಸವ, ಅಷ್ಟಾವಧಾನ ಸೇವೆ

ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಉಡುಪಿ: ವೈಭವದ ವಸಂತೋತ್ಸವ, ಅಷ್ಟಾವಧಾನ ಸೇವೆ

ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕುಪೇಟೆ ಉಡುಪಿ ವಸಂತ ಮಾಸದ ಪ್ರಯುಕ್ತ ಪ್ರತಿ ವರುಷದಂತೆ ಸ್ವಯಂ ಸೇವಕರು ಮತ್ತು ಜಿ.ಎಸ್.ಬಿ ಯುವಕ ಮಂಡಳಿಯ ವತಿಯಿಂದ ಈ ಸಾಲಿನ ಕೊನೆಯ ವಸಂತೋತ್ಸವವು ಜೂ. 06 ವೈಶಾಖ ಬಹುಳ 30 ಗುರುವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.

ಶ್ರೀ ದೇವರ ಸನ್ನಿಧಿಯಲ್ಲಿ ಪ್ರಧಾನ ಅರ್ಚಕ ದಯಾಘನ್ ಭಟ್ ಶ್ರೀ ದೇವರಿಗೆ ವಿಶೇಷ ಅಲಂಕಾರ ಮಾಡಿ ಮಂಗಳಾರತಿ ಬೆಳಗಿಸಿದರು. ಶ್ರೀ ದೇವರಿಗೆ ಸ್ವರ್ಣ ಪಲ್ಲಕ್ಕಿ ಉತ್ಸವ, ವೇದ ಘೋಷ, ಭಜನೆ, ವಿವಿಧ ರೂಪದ ಮಂಗಳವಾದ್ಯ ದೊಂದಿಗೆ ಲಾಲ್ಕಿ ಉತ್ಸವ ನಡೆಯಿತು. ಬಳಿಕ ಅಷ್ಟಾವಧಾನ ಸೇವೆ , ಮಹಾ ಪೂಜೆಯ ನಂತರ ಪ್ರಸಾದ ವಿತರಣೆ ನಡೆಯಿತು.

ಸಮಾರಂಭದಲ್ಲಿ ದೇವಳದ ಆಡಳಿತ ಮೊಕ್ತೇಸರ ಪಿ.ವಿ.ಶೆಣೈ, ಗಣೇಶ್ ಕಿಣೆ , ಭಜನಾ ಸಮಿತಿಯ ರೂಹಾರಿ ಸತೀಶ್ ಕಿಣಿ, ಚೇಂಪಿ ರಾಮಚಂದ್ರ ಭಟ್, ವಿಶಾಲ್ ಶೆಣೈ, ಸತೀಶ್ ಕಾಮತ್, ದೀಪಕ್ ಭಟ್ , ಗಿರೀಶ ಭಟ್, ನರಹರಿ ಪೈ, ಪ್ರದೀಪ್ ರಾವ್, ಯುವಕ ಮಂಡಲದ ಅಧ್ಯಕ್ಷ ನಿತೇಶ ಶೆಣೈ, ಆಡಳಿತ ಮಂಡಳಿಯ ಸದಸ್ಯರು , ಶ್ರೀ ಲಕ್ಷ್ಮೀ ವೆಂಕಟೇಶ್ ಭಗನಿ ವೃಂದ ಹಾಗು  ಜಿ.ಸ್.ಬಿ. ಯುವಕ ಮಂಡಳಿ, ಮಹಿಳಾ ಮಂಡಳಿ ಸದಸ್ಯರು ಹಾಗೂ ನೂರಾರು ಸಮಾಜಭಾಂದವರು ಉಪಸ್ಥಿತರಿದ್ದರು.              

RELATED ARTICLES
- Advertisment -
Google search engine

Most Popular