ಉಡುಪಿ : ಫೆ 11 ; ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ ತೆಂಕಪೇಟೆ ಉಡುಪಿ ,ಶತಮಾನೋತ್ತರ ರಜತ ಮಹೋತ್ಸವ 125 ವರ್ಷದ ಆಚರಣೆ ಪ್ರಯುಕ್ತ 125 ದಿನ ಅಹೋರಾತ್ರಿ ನಿರಂತರ ಭಜನಾ ಮೊಹೋತ್ಸವ ಪರ್ವಕಾಲದಲ್ಲಿ ಇಂದು ಪೂಜ್ಯ ಶ್ರೀ ಚಿತ್ರಾಪುರ ಸಾರಸ್ವತ ಬ್ರಾಹ್ಮಣ ಸಮಾಜದ ಗುರುವರ್ಯರಾದ ಪರಮಪೂಜ್ಯ ಶ್ರೀಮದ್ ಸದ್ಯೋಜಾತ ಶಂಕರಾಶ್ರಮ ತೀರ್ಥ ಶ್ರೀಪಾದಂಗಳವರು ದೇವಳಕ್ಕೆ ಭೇಟಿ ನೀಡಿದರು. ದೇವಳದ ವತಿಯಿಂದ ಪೂಜ್ಯ ಶ್ರೀಗಳನ್ನು ಮಂಗಳವಾದ್ಯ ಹಾಗೂ ಪೂರ್ಣ ಕುಂಭ ದಿಂದ ಸ್ವಾಗತಿಸಿ ಬರಮಾಡಿಕೊಂಡು ಪಾದ ಪೂಜೆ ಮಾಡಿ ಫಲ ಪುಷ್ಪ ಕಾಣಿಕೆ ನೀಡಿ ಗೌರವಿಸಲಾಯಿತು.
ಪೂಜ್ಯ ಸ್ವಾಮೀಜಿಯವರು ಶ್ರೀ ಲಕ್ಷ್ಮೀ ವೆಂಕಟೇಶ ದೇವರ ದರ್ಶನ ಮಾಡಿ ಭಜನಾ ಮೊಹೋತ್ಸವದ ಶ್ರೀ ವಿಠೋಬಾ ರುಖುಮಾಯಿ ದೇವರ ಸನ್ನಿಧಿಯಲ್ಲಿ ಜಯಾ ಅಂಜನೇಯ ಸ್ವಾಮೀ , ಶ್ರೀ ಕೃಷ್ಣಾ ಜಗದ್ ಗುರು ಭಜನೆ ಮಾಡಿದರು , ನೆರೆದ ಭಕ್ತರೊ ಅವರೊಡನೆ ಸೇರಿ ಭಜನೆ ಮಾಡಿ ಸಂಭ್ರಮಿಸಿದರು.
ಅನುಗ್ರಹ ಸಂದೇಶದಲ್ಲಿ ಹರಿನಾಮ ಸಂಕೀರ್ತನೆ ಆರಂಭಿಸಿ 125 ವರ್ಷದ ಆಚರಣೆ ಪ್ರಯುಕ್ತ 125 ದಿನ ಅಹೋರಾತ್ರಿ ನಿರಂತರ ಭಜನಾ ಮೊಹೋತ್ಸವ ನೆಡೆಸುತ್ತಿರುವುದು ಸಂತಸವಾಗಿದೆ , ಹರಿ ನಾಮ ಸಂಕೀರ್ತನೆ ಯಿಂದ ಮನಸಿಗೆ ನೆಮ್ಮದಿ , ಶಾಂತಿ ಜೊತೆಯಲ್ಲಿ ಸಮಾಜಭಾಂದವರ ಒಂದಾಗಿಸುವ ಶಕ್ತಿ ಹೊಂದಿದೆ , ಗುರುವಿನ ಹಾಗೂ ಶ್ರೀ ದೇವರ ವಿಶೇಷ ಅನುಗ್ರಹ ನಿಮ್ಮಲ್ಲರ ಮೇಲೆ ಸದಾ ಇರಲಿ ಎಂದು ಶುಭ ಹಾರೈಸಿದರು.
ಭಜನಾ ರೂವಾರಿ ಮಟ್ಟಾರ್ ಸತೀಶ್ ಕಿಣಿ ಸ್ವಾಮೀಜಿಯರಲ್ಲಿ ಸ್ಥಳೀಯ ವಿವಿಧ ತಂಡಗಳಿಂದ ಭಜನೆ ಆಹೋರಾತ್ರಿ ನೆಡೆಯುತ್ತದೆ ಜೊತೆಗೆ ಊರ ಪರಊರಿನ ನೂರಾರು ಭಜನಾ ತಂಡಗಳು ಭಾಗವಹಿಸಲಿವೆ , ಪ್ರತಿ ಆದಿತ್ಯವಾರ ಸಂಜೆ ನಗರ ಭಜನೆ ನೆಡೆಯಲಿದೆ ಎಂದು ತಿಳಿಸಿದರು.
ದೇವಳದ ಪ್ರಧಾನ ಅರ್ಚಕರಾದ ದಯಘಾನ್ ಭಟ್ ,ವಿನಾಯಕ್ ಭಟ್ ,ದೀಪಕ್ ಭಟ್ ,ಆಡಳಿತ ಮುಕ್ತೇಸರ ಪಿ ವಿ ಶೆಣೈ , ಆಡಳಿತ ಮಂಡಳಿಯ ಸದಸ್ಯರಾದ ವಿಶ್ವನಾಥ್ ಭಟ್ , ವಸಂತ್ ಕಿಣೆ , ಪುಂಡಲೀಕ್ ಕಾಮತ್ , ಶಾಂತಾರಾಮ್ ಪೈ , ಗಣೇಶ್ ಕಿಣಿ , ಉಮೇಶ್ ಪೈ , ಕೈಲಾಸನಾಥ ಶೆಣೈ , ಪ್ರಮುಖರಾದ ಭಾಸ್ಕರ್ ಶೆಣೈ , ವಿವೇಕ್ ಶಾನ್ ಭೋಗ್ , ರಮೇಶ್ ಭಟ್ , ಗಣೇಶ್ ಕಿಣೆ ವಿವಿಧ ಭಜನಾ ಮಂಡಳಿಯ ಸದಸ್ಯರು , ಜಿ ಎಸ್, ಬಿ ಯುವಕ /ಮಹಿಳಾ ಮಂಡಳಿಯ ಸದಸ್ಯರು , ನೂರಾರು ಸಮಾಜ ಭಾಂದವರು ಉಪಸ್ಥರಿದ್ದರು.