ಉಡುಪಿ ; ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ ತೆಂಕಪೇಟೆ ಉಡುಪಿ, ಶತಮಾನೋತ್ತರ ರಜತ ಮಹೋತ್ಸವ 125 ವರ್ಷದ ಆಚರಣೆ ಪ್ರಯುಕ್ತ 125 ದಿನ ಅಹೋರಾತ್ರಿ ನಿರಂತರ ಭಜನಾ ಮೊಹೋತ್ಸವ ಹಾಗೂ , ಶ್ರೀ ರಾಮ ನವಮಿ ಅಂಗವಾಗಿ ಶ್ರೀ ರಾಮನಾಮ ಜಪ “ರಘುನಾಯಕ ” ಕೇಂದ್ರದಲ್ಲಿ ವಿಶೇಷ ಹೊ ಗಳಿಂದ ಅಲಂಕೃತ ಹೂವಿನ ಮಂಟಪದಲ್ಲಿ ಶ್ರೀ ರಾಮದೇವರಿಗೆ ವಿಶೇಷ ಪೂಜೆ ನಡೆಯಿತು. ಶ್ರೀ ರಾಮ ನಾಮ ಜಪ ಅಭಿಯಾನದಲ್ಲಿ ಸಾವಿರಾರು ಭಕ್ತರೂ ಬೆಳ್ಳಿಗೆಯಿಂದ ರಾತ್ರಿಯವರೆಗೆ ನಿರಂತರ ಸಾಮೂಹಿಕ ಶ್ರೀ ರಾಮನಾಮ ಜಪ ಪಠಣೆ ಮಾಡಿದರು ರಾತ್ರಿ ವಿಶೇಷ ದೀಪಾಲಂಕಾರ ಸೇವೆಯಲ್ಲಿ ಸಾವಿರಾರು ಹಣತೆಗಳ ಬೆಳಕಿನಲ್ಲಿ ಜಪ ಪಠಣೆಯೊಂದಿಗೆ ಶ್ರೀದೇವರಿಗೆ ಮಹಾಪೂಜೆ ನಡೆಯಿತು. ಶ್ರೀ ರಾಮನವಮಿ ಅಂಗವಾಗಿ ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವ ದೊಂದಿಗೆ ಪೇಟೆ ಉತ್ಸವ ಜರಗಿತು. ದೇವಳದ ಪ್ರಧಾನ ಅರ್ಚಕರಾದ ವಿನಾಯಕ ಭಟ್, ದಯಾಘಾನ್ ಭಟ್, ರವೀಂದ್ರ ಭಟ್, ಚೇ೦ಪಿ ರಾಮಚಂದ್ರ ಭಟ್, ದೇವಳದ ಮುಕ್ತೇಸರ ಪಿ ವಿ ಶೆಣೈ, ದೇವಳದ ಭಜನಾ ಮಂಡಳಿಯ ಅಧ್ಯಕ್ಷ ಮಟ್ಟಾರ್ ಸತೀಶ್ ಕಿಣಿ, ಭಾಸ್ಕರ ಶೆಣೈ, ಸಂದೀಪ ನಾಯಕ್, ವಿಶಾಲ್ ಶೆಣೈ ಹಾಗೂ ವಿವಿಧ ಭಜನಾ ಮಂಡಳಿಯ ಸದಸ್ಯರು, ಜಿ ಎಸ್, ಬಿ ಯುವಕ /ಮಹಿಳಾ ಮಂಡಳಿಯ ಸದಸ್ಯರು, ನೂರಾರು ಸಮಾಜ ಭಾಂದವರು ಉಪಸ್ಥರಿದ್ದರು.